ನವದೆಹಲಿ:ಮಹಾಮಾರಿ ಕರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಕುಂಭಮೇಳವು ಕೇವಲ ಸಾಂಕೇತಿಕವಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಮನವಿ ಮಾಡಿಕೊಂಡಿದ್ದಾರೆ.
ಕುಂಭಮೇಳವು ಕರೊನಾ ವಿರುದ್ಧ ಹೋರಾಟಕ್ಕೆ ಉತ್ತೇಜನ ನೀಡುವಂತಿರಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಗಂಗಾ ನದಿ ತಪ್ಪಲಿನಲ್ಲಿ ಸಾಕಷ್ಟು ಯಾತ್ರಿಗಳು ಮತ್ತು ಸಾಧು ಸಂತರು ಗುಂಪು ಗುಂಪಾಗಿ ಸೇರುತ್ತಿದ್ದಾರೆ. ಕರೊನಾ ಎರಡನೇ ಅಲೆ ಸಂದರ್ಭದಲ್ಲಿ ಇಷ್ಟೊಂದು ಜನ ಸೇರುತ್ತಿರುವುದರಿಂದ ಹೊಸ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿರಿ:ಸಬ್​ ಇನ್ಸ್​ಪೆಕ್ಟರ್​ ವಿರುದ್ಧ ತಮಿಳು ನಟಿ ರಾಧಾ ದೂರು: ಗುಟ್ಟು ರಟ್ಟಾಯ್ತು, ನಟಿ ಬಾಳಲ್ಲಿ ಮತ್ತೆ ಬಿರುಗಾಳಿ!
ಇಂದು ಬೆಳಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹಿರಿಯ ಸಂತ ಹಾಗೂ ಹಿಂದು ಧರ್ಮ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅದ್ವೇಶಾನಂದ ಗಿರಿ ಜಿ ಮಹಾರಾಜ್​ ಜತೆ ಫೋನ್​ನಲ್ಲಿ ಮಾತನಾಡಿದ್ದೇನೆ. ಧಾರ್ಮಿಕ ಸಭೆ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತದೆ ಎಂದು ಮನವರಿಕೆ ಮಾಡಿದ್ದೇನೆಂದು ತಿಳಿಸಿದ್ದಾರೆ.
मैंने प्रार्थना की है कि दो शाही स्नान हो चुके हैं और अब कुंभ को कोरोना के संकट के चलते प्रतीकात्मक ही रखा जाए। इससे इस संकट से लड़ाई को एक ताकत मिलेगी।@AvdheshanandG— Narendra Modi (@narendramodi)April 17, 2021
मैंने प्रार्थना की है कि दो शाही स्नान हो चुके हैं और अब कुंभ को कोरोना के संकट के चलते प्रतीकात्मक ही रखा जाए। इससे इस संकट से लड़ाई को एक ताकत मिलेगी।@AvdheshanandG
ಆರೋಗ್ಯ ಕಾಳಜಿಯ ಹಿನ್ನೆಲೆಯಲ್ಲಿ ಕುಂಭವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ ಅಖಾದಾಸ್​ ಒಪ್ಪಿಕೊಂಡಿದೆ ಎಂಬ ವರದಿಗಳನ್ನು ಅಖಾದಾಸ್​ ತಳ್ಳಿ ಹಾಕಿತು. ಯಾವುದೇ ಮಾತುಕತೆ ನಡೆದಿಲ್ಲ ಮತ್ತು ಕುಂಭವು ನಿಗದಿಯಂತೆ ಮುಂದುವರಿಯುತ್ತದೆ ಎಂದು ತಿಳಿಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಫೋನ್​ ಮೂಲಕ ಮಾತುಕತೆ ನಡೆಸಿದ್ದಾರೆ.
ಸಾಮಾನ್ಯವಾಗಿ ಕುಂಭಮೇಳ ಜನವರಿಯಲ್ಲಿ ಆರಂಭವಾಗುತ್ತಿತ್ತು. ಆದರೆ, ಕೋವಿಡ್​ ಕಾರಣದಿಂದಾಗಿ ಈ ವರ್ಷ ಏಪ್ರಿಲ್​ನಲ್ಲಿ ಆರಂಭಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಇದೇ ಸಮಯದಲ್ಲಿ ಕರೊನಾ ಎರಡನೇ ಅಲೆ ಉಲ್ಬಣಗೊಂಡಿರುವುದು ಹೊಸ ತಲೆ ನೋವಿಗೆ ಕಾರಣವಾಗಿದೆ. ಈಗಾಗಲೇ ಸುಮಾರು 2000 ಸಾವಿರಕ್ಕೂ ಹೆಚ್ಚು ಯಾತ್ರಿಗಳಿಗೆ ಕರೊನಾ ಪಾಸಿಟಿವ್​ ಬಂದಿದ್ದು, ಸಂಖ್ಯೆ ಇನ್ನು ಹೆಚ್ಚಳವಾಗುವ ಸಾಧ್ಯತೆ ಇದೆ.
ಇದನ್ನೂ ಓದಿರಿ:ಕೆನಡಾಗೆ ಹಾರಲಿದೆ ಅಪಘಾತಕ್ಕೀಡಾಗಿದ್ದ ಬೀದಿನಾಯಿ!; ವಿದೇಶಿ ಮಹಿಳೆಯಿಂದ ಬಳ್ಳಾರಿಯ 2 ವರ್ಷದ ಶ್ವಾನ ದತ್ತು
ಇನ್ನು ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,34,692 ಹೊಸ ಕೋವಿಡ್​ ಪ್ರಕರಣಗಳು ವರದಿಯಾಗಿದೆ. ಇದು ದಿನವೊಂದಕ್ಕೆ ಕಾಣಿಸಿಕೊಂಡ ಅತಿಹೆಚ್ಚು ಪ್ರಕರಣಗಳಾಗಿವೆ.(ಏಜೆನ್ಸೀಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve + seventeen =
Remember me
