ಬೆಂಗಳೂರು:ಕರೊನಾ ಸೋಂಕಿನಿಂದ ಗುಣಮುಖರಾದ ಕುಣಿಗಲ್​ ಶಾಸಕ ಡಾ. ರಂಗನಾಥ್ ಇಂದು(ಬುಧವಾರ) ಪ್ಲಾಸ್ಮಾ ದಾನ ಮಾಡಿದರು. ಆ ಮೂಲಕ ‘ದೇಶದಲ್ಲಿ ಪ್ಲಾಸ್ಮಾ ದಾನ ಮಾಡಿದ ಮೊದಲ ಶಾಸಕ’ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕಳೆದ ತಿಂಗಳು ಕರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಶಾಸಕ ಡಾ. ರಂಗನಾಥ್‌ ಹಾಗೂ ಸಹೋದರ ಡಾ.ರಾಮಚಂದ್ರ ಪ್ರಭು ಅವರು ತಮ್ಮ ದೇಹದ ಪ್ಲಾಸ್ಮಾವನ್ನು ಕರೊನಾ ರೋಗಿಗಳಿಗೆ ದಾನ ಮಾಡಿದರು. ಬೆಂಗಳೂರಿನ ಕಾರ್ಪೋರೇಷನ್ ಕೇಂದ್ರ ಕಚೇರಿ ಹಿಂಭಾಗದಲ್ಲಿರುವ ಎಚ್.ಸಿ.ಜಿ. (HCG) ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ದಾನ ಪ್ರಕ್ರಿಯೆ ನಡೆಯಿತು.
ಇದನ್ನೂ ಓದಿರಿಡಿಜೆ ಹಳ್ಳಿ ಗಲಭೆಯ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆ ಲಿಂಕ್?
ಪ್ಲಾಸ್ಮಾ ದಾನ ಮಾಡುವ ಮುನ್ನ ಮಾಧ್ಯಮಗಳ ಜತೆ ಆಸ್ಪತ್ರೆಯಲ್ಲೇ ಮಾತನಾಡಿದ ಶಾಸಕ ರಂಗನಾಥ್, ನನಗೆ ಕೋವಿಡ್​ ಪಾಸಿಟಿವ್​ ಬಂದ ನಂತರ
ಬಹಳ ಸಲ ಯೋಚನೆ ಮಾಡ್ತಿದ್ದೆ. ನಮ್ಮ ಕಡೆಯಿಂದ ಕೋವಿಡ್​ ರೋಗಿಗಳಿಗೆ ಯಾವ ರೀತಿ ಸಹಾಯ ಮಾಡಬಹುದೆಂದು ಹಲವು ರೀತಿಯಲ್ಲಿ ಯೋಚಿಸಿದೆ. ಕೋವಿಡ್​ ನೆಗೆಟಿವ್​ ಬಂದ ಬಳಿಕ ಹ್ಯೂಮಿನಿಟಿ ಎಷ್ಟಿದೆ ಎಂದು ಚೆಕ್​ ಮಾಡಿಸಿದೆ. ನನಗೆ ಹೆಚ್ಚಿದೆ ಎಂದು ತಿಳೀತು. ಹಾಗಾಗಿ ಇತರ ಕರೊನಾ ರೋಗಿಗಳ ಚಿಕಿತ್ಸೆಗೆ ನೆರವಾಗಲೆಂದು ಪ್ಲಾಸ್ಮಾ ಕೊಡುತ್ತಿದ್ದೇನೆ ಎಂದರು.
https://www.facebook.com/VVani4U/videos/587077941958814/
ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 7 =
Remember me
