ಮುಂಬೈ:ಸೀರಿಯಲ್ ನಟ-ನಟಿಯರಾಗಿರುವ ಕುಶಾಲ್ ಟಂಡನ್ ಹಾಗೂ ಶಿವಾಂಗಿ ಜೋಶಿ ಕುರಿತಾಗಿ ಹಲವು ದಿನಗಳಿಂದ ರಿಲೇಶನ್‌ಶಿಪ್​​ನಲ್ಲಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಈ ಕುರಿತಾಗಿ ಇಬ್ಬರು ಅಲ್ಲೇ ಗಳೆದಿದ್ದರು. ಆದರೆ ಇಬ್ಬರು ಗುಟ್ಟಾಗಿ ವಿದೇಶಿ ಪ್ರವಾಸ ಹೋಗಿದ್ದು, ಕೆಲವು ರೊಮ್ಯಾನ್ಸ್​​ ವಿಡಿಯೋಗಳು ವೈರಲ್​ ಆಗಿವೆ.
ನಟ ಕುಶಾಲ್ ಟಂಡನ್ ಹಾಗೂ ನಟಿ ಶಿವಾಂಗಿ ಜೋಶಿ ಜೊತೆಯಾಗಿ ಥಾಯ್ಲೆಂಡ್ ಪ್ರವಾಸದಲ್ಲಿದ್ದಾರೆ. ಇಷ್ಟೇ ಅಲ್ಲ ಥಾಯ್ಲೆಂಡ್‌ನಲ್ಲಿ ಹಾಯಾಗಿ ಸುತ್ತಾಡುತ್ತಿರುವ ಈ ಜೋಡಿ, ಬಹಿರಂಗವಾಗಿ ಕಿಸ್ ಮಾಡಿ ಮತ್ತೆ ರಿಲೇಶನ್‌ಶಿಪ್ ಗಾಸಿಪ್‌ಗೆ ಆಹಾರವಾಗಿದ್ದಾರೆ.
ಬಿಗ್‌ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಕುಶಾಲ್ ಟಂಡನ್ ಹಾಗೂ ಹಿಂದಿ ಸೀರಿಯಲ್‌ನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಶಿವಾಂಗಿ ಶರ್ಮಾ ಸದ್ಯ ಥಾಯ್ಲೆಂಡ್‌ನಲ್ಲಿದ್ದಾರೆ. ಬರ್ಸತೈನ್ ಮಸುಮಾ ಪ್ಯಾರ್ ಮೂಲಕ ಜೊತೆಯಾಗಿ ಸ್ಕ್ರೀನ್ ಮೇಲೆ ಮೋಡಿ ಮಾಡಿದ ಈ ಜೋಡಿ ಇದೀಗ ಥಾಯ್ಲೆಂಡ್‌ನಲ್ಲಿ ನಡೆದ ಬಾಕ್ಸಿಂಗ್ ಪಂದ್ಯ ವೀಕ್ಷಿಸಿದ್ದಾರೆ. ಇಬ್ಬರು ಜೊತೆಯಾಗಿ ಪಂದ್ಯ ವೀಕ್ಷಿಸಿದ್ದಾರೆ. ಈ ವೇಳೆ ಕುಶಾಲ್ ಟಂಡನ್, ಶಿವಾಂಗಿಗೆ ಕಿಸ್ ಮಾಡುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ.
A post shared by follow 👉 (@kushiv.world_)

ಇವರಿಬ್ಬರು ಥಾಯ್ಲೆಂಡ್ ಪ್ರವಾಸದಲ್ಲಿರುವ ಕೆಲ ವಿಡಿಯೋಗಳು ಈಗಾಗಲೇ ಸಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಕಿಸ್ಸಿಂಗ್ ವಿಡಿಯೋ ಒಂದು ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ಆದರೆ ಕುಶಾಲ್ ಟಂಡನ್ ಹಾಗೂ ಶಿವಾಂಗ್ ಡೇಟಿಂಗ್ ಖಚಿತ ಎಂದು ಭಾರಿ ಕಮೆಂಟ್‌ಗಳು ವ್ಯಕ್ತವಾಗುತ್ತಿದೆ. ಬಾಕ್ಸಿಂಗ್ ಪಂದ್ಯಕ್ಕೆ ಹಾಜರಾಗಿರುವ ಕುರಿತು ಕೆಲ ಫೋಟೋಗಳು ವೈರಲ್ ಆಗಿತ್ತು.
ಮೂಲಗಳ ಪ್ರಕಾರ ಇವರಿಬ್ಬರು ಶೀಘ್ರದಲ್ಲೇ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಗಾಸಿಪ್‌ಗೆ ಕುಶಾಲ್ ಟಂಡನ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ಸುಳ್ಳು ಸುದ್ದಿ ಹರಡಬೇಡಿ ಎಂದು ಮನವಿ ಮಾಡಿದ್ದರು. ಆದರೆ ಈ ವಿಡಿಯೋ ನೆಟ್ಟಿಗರಿಗೆ ಆಹಾರವಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × one =
Remember me
