ನವದೆಹಲಿ:ನಟಿ ಕಂ ರಾಜಕಾರಣಿ ಖುಷ್ಬೂ ಸುಂದರ್​ ಇತ್ತೀಚೆಗಷ್ಟೇ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದೀಗ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ. ತಮ್ಮ ತಂದೆಯಿಂದಲೇ ಲೈಂಗಿಕ ಹಾಗೂ ದೈಹಿಕ ಕಿರುಕುಳ ಅನುಭವಿಸಿದ್ದೆ ಎಂದು ತಿಳಿಸಿದ್ದಾರೆ.
ಮೊಜೊ ಸ್ಟೋರಿ ಮಾಧ್ಯಮ ನಡೆಸಿದ ಸಂವಾದದಲ್ಲಿ ಪತ್ರಕರ್ತೆ ಬರ್ಖಾ ದತ್ ಅವರೊಂದಿಗೆ ಮಾತನಾಡಿ ಸಾಕಷ್ಟು ವಿಚಾರಗಳನ್ನು ಬಹಿರಂಗಪಡಿಸಿದರು. ಹುಡುಗ ಅಥವಾ ಹುಡುಗಿಯಾಗಿರಲಿ ಯಾವಾಗ ಒಂದು ಮಗು ದೌರ್ಜನ್ಯಕ್ಕೆ ಒಳಗಾಗುತ್ತದೋ ಆ ನೋವಿನ ಗಾಯ ಜೀವನ ಉದ್ದಕ್ಕೂ ಇರುತ್ತದೆ. ನನ್ನ ತಾಯಿ ಅತ್ಯಂತ ನಿಂದನೀಯ ಮದುವೆಯ ಮೂಲಕ ಬಂದಿದ್ದಾರೆ. ಹೆಂಡತಿಯನ್ನು ಹೊಡೆಯುವುದು, ತನ್ನ ಮಕ್ಕಳನ್ನು ಹೊಡೆಯುವುದು ಮತ್ತು ತನ್ನ ಏಕೈಕ ಮಗಳನ್ನು ಲೈಂಗಿಕವಾಗಿ ನಿಂದಿಸುವುದು ತನ್ನ ಜನ್ಮಸಿದ್ಧ ಹಕ್ಕು ಎಂದು ಭಾವಿಸಿದ ವ್ಯಕ್ತಿ (ತಂದೆ) ಅನ್ನು ತಾಯಿ ಮದುವೆ ಆಗಿದ್ದರು.
ನನ್ನ ಮೇಲಿನ ನಿಂದನೆ ಅಥವಾ ದೌರ್ಜನ್ಯ ಪ್ರಾರಂಭವಾದಾಗ ನಾನು ಕೇವಲ 8 ವರ್ಷ ವಯಸ್ಸಿನವಳಾಗಿದ್ದೆ ಮತ್ತು ನಾನು 15 ವರ್ಷದವಳಾಗಿದ್ದಾಗ ಅವರ (ತಂದೆ) ವಿರುದ್ಧ ಮಾತನಾಡುವ ಧೈರ್ಯವನ್ನು ಹೊಂದಿದ್ದೆ ಎಂದು ಖುಷ್ಬೂ ಹೇಳಿದರು.
ಆರಂಭದಲ್ಲೇ ಇದೆಲ್ಲವನ್ನು ನೋಡಿ ನಾನು ಒಂದು ನಿಲುವಿಗೆ ಬರಬೇಕಾಗಿತ್ತು. ಆದರೆ, ಕುಟುಂಬದ ಇತರೆ ಸದಸ್ಯರು ನಿಂದನೆಗೆ ಒಳಗಾಗುತ್ತಾರೆ ಎಂಬ ಭಯದಿಂದ ಹಲವು ವರ್ಷಗಳವರೆಗೆ ನನ್ನ ಬಾಯಿಯನ್ನು ಮುಚ್ಚಿಕೊಂಡಿರಬೇಕಾಯಿತು. ನನ್ನ ತಾಯಿಯು ಕೂಡ ನನ್ನನ್ನು ನಂಬದಿರಬಹುದು ಅನಿಸಿತು. ಏಕೆಂದರೆ ಏನೇ ಆದರೂ ಅವರು ನನ್ನ ಪತಿ ಮತ್ತು ಪತಿಯೇ ದೇವರು ಎಂಬ ಮನಸ್ಥಿತಿಯ ವಾತಾವರಣದಲ್ಲಿ ನನ್ನ ತಾಯಿಯನ್ನು ನೋಡಿದ್ದೆ. ಆದರೆ, ನಾನು 15ನೇ ವರ್ಷಕ್ಕೆ ಕಾಲಿಟ್ಟಾಗ ಆತನ (ತಂದೆ) ವಿರುದ್ಧ ಧ್ವನಿ ಎತ್ತಲು ಆರಂಭಿಸಿದೆ. ನನಗೆ 16 ವರ್ಷವೂ ತುಂಬಿರಲಿಲ್ಲ. ಅಷ್ಟರಲ್ಲೇ ಆತ ನಮ್ಮನ್ನು ಬಿಟ್ಟು ಹೋದನು ಮತ್ತು ಮುಂದಿನ ಊಟ ಎಲ್ಲಿಂದ ಬರುತ್ತದೆ ಎಂಬುದು ಸಹ ನಮಗೆ ತಿಳಿದಿರಲಿಲ್ಲ ಎಂದು ಖುಷ್ಬೂ ಹೇಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಬಾಲಿವುಡ್ ಚಿತ್ರ ದಿ ಬರ್ನಿಂಗ್ ಟ್ರೈನ್‌ನೊಂದಿಗೆ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ಖುಷ್ಬೂ, ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ತುಂಬಾ ಜನಪ್ರಿಯತೆ ಗಳಿಸಿದರು. ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಖುಷ್ಬೂ ಅವರು 2010ರಲ್ಲಿ ರಾಜಕೀಯಕ್ಕೆ ಸೇರಿದರು.(ಏಜೆನ್ಸೀಸ್​)
ಮಹಾರಾಷ್ಟ್ರದ ಹೆದ್ದಾರಿಗೆ 200 ಮೀಟರ್ ವೆರೆಗೆ ಬಿದಿರಿನ ತಡೆಗೋಡೆ ನಿರ್ಮಾಣ

ಕೋವಿಡ್ ಬಳಿಕ ರಾಜ್ಯದಲ್ಲಿ ಮತ್ತೊಂದು ವೈರಸ್​ ಭೀತಿ: H3N2 ವೈರಸ್​ ಲಕ್ಷಣಗಳೇನು? ಸುರಕ್ಷತೆ ಹೇಗಿರಬೇಕು?

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − one =
Remember me
