ತಿರುವನಂತಪುರಂ:ಕುವೈತ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟರಲ್ಲಿ 45 ಜನರನ್ನು ಭಾರತೀಯರು ಎಂದು ಗುರುತಿಸಲಾಗಿತ್ತು. ಮೃತರಲ್ಲಿ ಇಬ್ಬರು ಉತ್ತರ ಪ್ರದೇಶದವರು, 24 ಮಂದಿ ಕೇರಳದವರು, ಏಳು ಮಂದಿ ತಮಿಳುನಾಡಿನವರು ಮತ್ತು ಮೂವರು ಆಂಧ್ರಪ್ರದೇಶದವರು ಎನ್ನಲಾಗಿದೆ. ಮೃತದೇಹಗಳನ್ನು ಮರಳಿ ತರಲು ವಾಯುಪಡೆ ಗುರುವಾರ ರಾತ್ರಿ ಕುವೈತ್‌ಗೆ C-130J ವಿಮಾನವನ್ನು ಕಳುಹಿಸಿತ್ತು.
ಇದನ್ನು ಓದಿ:“ಶಾದಿ ಕೆ ಡೈರೆಕ್ಟರ್ ಕರಣ್ ಔರ್ ಜೋಹರ್” ನಿರ್ಮಾಪಕರ ವಿರುದ್ಧ ಕರಣ್​​​ ಜೋಹರ್​ ಕೋರ್ಟ್​​ ಮೊರೆ ಹೋಗಿದ್ದೇಕೆ?
ಭಾರತೀಯ ವಾಯುಪಡೆಯ ವಿಶೇಷ C-130J ವಿಮಾನವು ಶುಕ್ರವಾರ(ಜೂನ್​​ 14) ಬೆಳಗ್ಗೆ 45 ಮೃತ ಭಾರತೀಯರ ಶವಗಳನ್ನು ಹೊತ್ತು ಕೊಚ್ಚಿ ತಲುಪಿರುವುದಾಗಿ ಭಾರತೀಯ ರಾಯಭಾರಿ ಕಚೇರಿ ಮಾಹಿತಿ ನೀಡಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಕೂಡ ಅದೇ ವಿಮಾನದಲ್ಲಿ ಮರಳಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಮೃತಪಟ್ಟವರಲ್ಲಿ ಹೆಚ್ಚಿನವರು ಕೇರಳದವರೇ ಆಗಿರುವುದರಿಂದ ವಿಮಾನವು ಮೊದಲಿಗೆ ಕೊಚ್ಚಿಯಲ್ಲಿ ಬಂದಿಳಿದೆ. ಇದಾದ ಬಳಿಕ ವಿಮಾನ ದೆಹಲಿಗೆ ಬರಲಿದ್ದು, ಮೃತ ದೇಹಗಳನ್ನು ದೆಹಲಿಯಿಂದ ಆಯಾ ರಾಜ್ಯಗಳಿಗೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕುವೈತ್‌ನ ವಿದೇಶಾಂಗ ಸಚಿವ ಅಬ್ದುಲ್ಲಾ ಅಲಿ ಅಲ್-ಯಾಹ್ಯಾ ಹಾಗೂ ಮೊದಲ ಉಪಪ್ರಧಾನಿ ಶೇಖ್ ಫಹಾದ್ ಅವರನ್ನು ಭೇಟಿಯಾಗಿದ್ದಾರೆ. ಅಲ್-ಯಾಹ್ಯಾ ಮತ್ತು ಶೇಖ್ ಫಹಾದ್ ಅವರು ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕುವೈತ್​ ಅಗ್ನಿ ದುರಂತದಲ್ಲಿ ಮೃತಪಟ್ಟ 49 ಮಂದಿಯಲ್ಲಿ 45 ಮಂದಿ ಭಾರತೀಯರಾಗಿದ್ದರೆ, ಮೂವರು ಫಿಲಿಪೈನ್ಸ್‌ನ ನಾಗರಿಕರು ಎಂದು ಕುವೈತ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮೃತರಿಗೆ ಪರಿಹಾರ ನೀಡಲು ಸಿದ್ಧತೆ ನಡೆದಿದೆ. ಕುವೈತ್‌ನ ಉಪಪ್ರಧಾನಿ ಶೇಖ್ ಫಹಾದ್​ ಪರಿಹಾರದ ಮೊತ್ತವನ್ನು ನಿರ್ದಿಷ್ಟಪಡಿಸದೆ ಮೃತರ ಕುಟುಂಬಗಳಿಗೆ ಪರಿಹಾರ ನೀಡಲು ಎಮಿರ್ ಶೇಖ್ ಮೆಶಾಲ್ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೇರಳ ಸರ್ಕಾರವು ಮೃತಪಟ್ಟ ತನ್ನ ರಾಜ್ಯದ ನಾಗರಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ನೆರವು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​​)
ಮೆಗಾಸ್ಟಾರ್​ಗೆ ಜೋಡಿಯಾದ ಸೌತ್​​​​​ ಬ್ಯೂಟಿ ಸಮಂತಾ? ಇಲ್ಲಿದೆ ಕಂಪ್ಲೀಟ್​​ ಡೀಟೇಲ್ಸ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
