ಪಟನಾ:ಬಿಹಾರ ವಿಧಾನಸಭಾ ಚುನಾವಣಾ ಕಣ ದಿನೇ ದಿನೆ ರಂಗೇರುತ್ತಿದೆ. ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿರುವ ನಡುವೆಯೇ ಹಿರಿಯ ವ್ಯಕ್ತಿಯೊಬ್ಬರು ಮಾಧ್ಯಮವೊಂದರ ಪ್ರಶ್ನೆಗೆ ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಬಿಹಾರ್​ ತಕ್​ ಹೆಸರಿನ ಸುದ್ದಿ ಮಾಧ್ಯಮ ಲಕ್ಕಿಸರೈ ಎಂಬ ಗ್ರಾಮದ ಜನರ ಅಭಿಪ್ರಾಯ ತಿಳಿದುಕೊಳ್ಳುವಾಗ ಈ ಹಾಸ್ಯ ಪ್ರಸಂಗ ಜರುಗಿದೆ. ನಿಮ್ಮ ಊರು ವಿಕಾಸ ಹೊಂದಿದೆಯೇ? ಎಂದು ಹಿರಿಯ ವ್ಯಕ್ತಿಯನ್ನು ವರದಿಗಾರ ಪ್ರಶ್ನಿಸುತ್ತಾರೆ. ಅದಕ್ಕೆ ಉತ್ತರಿಸುವ ಆತ ನಾನು ಇಲ್ಲಿರಲಿಲ್ಲ. ಅನಾರೋಗ್ಯದಿಂದಾಗಿ ನಾನು ವೈದ್ಯರ ಕೊಠಡಿಯಲ್ಲಿದ್ದೆ ಎಂದು ಉತ್ತರಿಸುತ್ತಾರೆ. ಒಂದು ಕ್ಷಣ ವರದಿಗಾನೇ ಗೊಂದಲಕ್ಕೀಡಾಗುತ್ತಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇದನ್ನೂ ಓದಿ:ದಂಡ ಕಟ್ಟುವಂತೆ ಒತ್ತಾಯ: ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವಕ ಮಾಡಿದ್ದೇನು?
विकास कहाँ है?#BiharElectionspic.twitter.com/Eo4zR9KQXL
— Utkarsh Singh (@UtkarshSingh_)October 15, 2020

ಸಾಕಷ್ಟು ಮಂದಿ ವಿಡಿಯೋ ಕುರಿತು ಕಮೆಂಟ್​ ಮಾಡಿದ್ದು, ಹಲವರು ನಗುವ ಎಮೋಜಿಯನ್ನು ಪೋಸ್ಟ್​ ಮಾಡಿದ್ದಾರೆ. ಈ ವ್ಯಕ್ತಿಯ ಮುಗ್ಧತೆ ನಿಜಕ್ಕೂ ಮೆಚ್ಚುವಂತದ್ದು ಎಂದು ನೆಟ್ಟಿಗರೊಬ್ಬರು ಹೇಳಿದರೆ, ವಿಕಾಸಕ್ಕೆ ಬಿಹಾರದ ಮಂದಿ ಹೊಸ ವ್ಯಾಖ್ಯಾನವನ್ನೇ ಮಾಡಿದ್ದಾರೆಂದು ಕೆಲವು ಕಮೆಂಟಿಸಿದ್ದಾರೆ.
ಒಟ್ಟು 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದಲ್ಲಿ ಅಕ್ಟೋಬರ್​ 28, ನವೆಂಬರ್​ 3 ಮತ್ತು ನ. 7ರಂದು ಮೂರು ಹಂತದಲ್ಲಿ ನಡೆಯಲಿದ್ದು, ನ. 10ಕ್ಕೆ ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
ಮನೆಯಲ್ಲೇ ಕುಳಿತು 25 ಲಕ್ಷ ರೂ. ಸಂಪಾದಿಸಬೇಕೆ? ನಿಮ್ಮ ಬಳಿ ಈ 1 ರೂ. ನಾಣ್ಯವಿದ್ದರೆ ಸಾಕು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − four =
Remember me
