ರಾಜಕೋಟ್:ಗುಜರಾತಿನ ರಾಜ್‌ಕೋಟ್ ನಗರದಲ್ಲಿ ದುಡ್ಡು ಪಡೆದು ಜನರಿಗೆ ಸುಳ್ಳು ಕೋವಿಡ್ ನೆಗೆಟೀವ್ ಸರ್ಟಿಫಿಕೇಟ್​ಗಳನ್ನು ಒದಗಿಸುತ್ತಿದ್ದ ಲ್ಯಾಬ್​ ಏಜೆಂಟ್​ ಒಬ್ಬನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪರವಾನಗಿ ಇಲ್ಲದೆ ಹೋಂ ಸ್ಯಾಂಪಲ್ ಕಲೆಕ್ಷನ್ ಸೆಂಟರ್ ನಡೆಸುತ್ತಿದ್ದ ಆರೋಪಿ ಪರಾಗ್ ಜೋಶಿ, ರಕ್ತದ ಸ್ಯಾಂಪಲ್ ಕೂಡ ಸಂಗ್ರಹಿಸದೆ ನೆಗೆಟೀವ್ ವರದಿಯನ್ನು ನೀಡುತ್ತಿದ್ದ ಎನ್ನಲಾಗಿದೆ.
ಕರೊನಾ ನೆಗೆಟಿವ್ ವರದಿಯ ಅಗತ್ಯ ಇದ್ದವರಿಗೆ ತಲಾ 1,500 ರೂ.ಗಳನ್ನು ಪಡೆದು ಜೋಶಿ ಈ ‘ಸೇವೆ’ ಒದಗಿಸುತ್ತಿದ್ದುದು ಬೆಳಕಿಗೆ ಬಂದಿದೆ. “ತನ್ನ ಗ್ರಾಹಕರ ಹೆಸರಿನ ದಾಖಲಾತಿಗಳೊಂದಿಗೆ ಮತ್ಯಾರದೋ ರಕ್ತದ ಸ್ಯಾಂಪಲ್​ಅನ್ನು ಲ್ಯಾಬೋರೇಟರಿಗೆ ಪರೀಕ್ಷೆಗೆ ಕಳುಹಿಸುತ್ತಿದ್ದ. ಪರೀಕ್ಷೆ ನಡೆಸಿದ ಲ್ಯಾಬರೇಟರಿಯು ದಾಖಲಾತಿಯಲ್ಲಿರುವ ಹೆಸರಿಗೆ ಕರೊನಾ ನೆಗೆಟೀವ್ ಸರ್ಟಿಫಿಕೇಟ್ ನೀಡುತ್ತಿತ್ತು” ಎಂದು ಅಧಿಕಾರಿಗಳು ಅವನ ಕಾರ್ಯವೈಖರಿಯನ್ನು ವಿವರಿಸಿದ್ದಾರೆ.
ಇದನ್ನೂ ಓದಿ:ಒಂದೇ ಡೋಸ್​ ಬೇಕಾಗುವ ಹೊಸ ಕರೊನಾ ಲಸಿಕೆಗೆ ಡಬ್ಲ್ಯೂಹೆಚ್​ಒ ಅನುಮೋದನೆ
ರಾಜಕೋಟ್​ ಸಹಾಯಕ ವೈದ್ಯಾಧಿಕಾರಿ ಡಾ. ಪರಾಗ್ ಚುನರ ಅವರ ದೂರಿನ ಮೇಲೆ ಗಾಂಧೀಗ್ರಾಮ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಜೊತೆಗೆ ಡಿಸಾಸ್ಟರ್ ಮಾನೇಜ್​ಮೆಂಟ್ ಕಾಯ್ದೆ ಮತ್ತು ಗುಜರಾತ್ ಮೆಡಿಕಲ್ ಪ್ರಾಕ್ಟಿಷನರ್ಸ್​ ಕಾಯ್ದೆಯ ಉಲ್ಲಂಘನೆಯ ಆರೋಪಗಳನ್ನೂ ಸಲ್ಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

‘ಕಾರು ಬಾಗಿಲು ಬಡಿದು ದೀದಿ ಕಾಲಿಗೆ ಗಾಯ’ : ಅಧಿಕೃತ ವರದಿ

VIDEO| ‘ಇದಪ್ಪಾ ನಿಜವಾದ ಕ್ರಿಕೆಟ್​ !’ ಮೈಕೆಲ್ ವಾಘನ್ ಶೇರ್​ ಮಾಡಿದ ವಿಡಿಯೋ ನೋಡಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 10 =
Remember me
