ಉತ್ತರಪ್ರದೇಶ:ಆದಾಯ ತೆರಿಗೆ ನೀಡಿದ ನೋಟೀಸ್​ ನೋಡಿ ಅಚ್ಚರಿಗೊಂಡ ಕಾರ್ಮಿಕನೊಬ್ಬ, ಇದರ ಬೆನ್ನಲ್ಲೇ ತನ್ನ ಬ್ಯಾಂಕ್​ ಖಾತೆ ಪರಿಶೀಲಿಸಿದಾಗ ಕಾದಿದ್ದು ದೊಡ್ಡ ಶಾಕ್​. ಕೆಲ ಕಾಲ ದಿಗ್ಬ್ರಮೆಗೊಳಗಾಗಿದ್ದ ಕಾರ್ಮಿಕ ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಬೆಂಗಳೂರಿನ ನಮ್ಮ ಮೆಟ್ರೋ ವಿಸ್ತೃತ ಮಾರ್ಗ ಉದ್ಘಾಟಿಸಿದ ಮೋದಿ
ಕಾರ್ಮಿಕನ ಖಾತೆಗೆ ಬರೋಬ್ಬರಿ 221 ಕೋಟಿ ರೂ. ಹಣ ಇರುವುದನ್ನು ಆದಾಯ ಇಲಾಖೆ ಪತ್ತೆಹಚ್ಚಿದೆ. ಕೂಡಲೇ ಇಲಾಖೆ ಜಾರಿಗೊಳಿಸಿದ ನೋಟಿಸ್​ ನೋಡಿ ಅಚ್ಚರಿಗೊಂಡ ಕಾರ್ಮಿಕ, ತನ್ನ ಬ್ಯಾಂಕ್​ ಖಾತೆಯನ್ನು ಪರಿಶೀಲಿಸಿದ್ದಾರೆ. ಆಗ ತಿಳಿದುಬಂದಿದ್ದು, ತಮ್ಮ ಖಾತೆಯಲ್ಲಿ 221 ಕೋಟಿ ರೂ. ಹಣವಿದೆ ಎಂಬುದು. ಘಟನೆಯ ಬೆನ್ನಲ್ಲೇ ವ್ಯಕ್ತಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ್ದಾರೆ.
ಕಾರ್ಮಿಕನನ್ನು ಉತ್ತರಪ್ರದೇಶದ ನಿವಾಸಿ ಶಿವಪ್ರಸಾದ್ ನಿಶಾದ್ ಎಂದು ಗುರುತಿಸಲಾಗಿದ್ದು, ದೂರನ್ನು ಪಡೆದ ಪೊಲೀಸ್​​ ಇಲಾಖೆ ಒಮ್ಮೆ ಶಾಕ್​ ಆಗಿದೆ. ಕಾರ್ಮಿಕನ ಅರಿವಿಗೆ ಬಾರದೆ ಬೃಹತ್ ಮೊತ್ತದ ಹಣ ಹೇಗೆ ಬಂತು? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಅವರಿಗೆ ಐಟಿ ಇಲಾಖೆಯಿಂದ ನೋಟಿಸ್ ಬಂದ ನಂತರವೇ ಭಾರಿ ಮೊತ್ತದ ಹಣದ ಬಗ್ಗೆ ತಿಳಿದುಬಂದಿದೆ.
ಇದನ್ನೂ ಓದಿ:1 ನೇ ನಮೋ ಭಾರತ್ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ | ದೆಹಲಿ ಮೀರತ್ RRTS
ನೋಟಿಸ್‌ನಲ್ಲಿ ಅವರ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮತ್ತು 4.5 ಲಕ್ಷ ರೂ. (ಟಿಡಿಎಸ್) ಕಡಿತದ ಬಗ್ಗೆ ತಿಳಿಸಲಾಗಿದೆ. 2019 ರಲ್ಲಿ ಕಳೆದುಹೋದ ಪಾನ್ ಕಾರ್ಡ್ ಬಳಸಿ ತನ್ನ ಹೆಸರಿನಲ್ಲಿ ಯಾರೋ ಖಾತೆ ತೆರೆದಿರಬಹುದು ಎಂದು ಶಿವಪ್ರಸಾದ್​ ಶಂಕಿಸಿದ್ದಾರೆ. “ನಾನು ಕೂಲಿ ಕೆಲಸ ಮಾಡುತ್ತಿದ್ದೇನೆ. ನನಗೆ ತಿಳಿಯದ ದೊಡ್ಡ ಮೊತ್ತಕ್ಕೆ ನಾನು ಆದಾಯ ತೆರಿಗೆಯಿಂದ ನೋಟಿಸ್ ಪಡೆದಿದ್ದೇನೆ” ಎಂದು ಹೇಳಿದ್ದಾರೆ.
“ನಾನು 2019 ರಲ್ಲಿ ನನ್ನ ಪ್ಯಾನ್ ಕಾರ್ಡ್ ಕಳೆದುಕೊಂಡೆ. ನನ್ನ ಖಾತೆಗೆ ಹಣವನ್ನು ಜಮಾ ಮಾಡಲು ಯಾರೋ ಅದನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ನನ್ನ ಬಲವಾದ ನಂಬಿಕೆ” ಎಂದು ಕಾರ್ಮಿಕ ಶಿವಪ್ರಸಾದ್ ಹೇಳಿದ್ದಾರೆ,(ಏಜೆನ್ಸೀಸ್).
BBKS10: ವಿನಯ್​-ಸಂಗೀತಾ ಜಗಳ​ ಸುಖಾಂತ್ಯ; ಈಗ ಬೆಸ್ಟ್‌ ಫ್ರೆಂಡ್ಸ್ ಮಧ್ಯೆ ಶುರುವಾಯ್ತು ಫೈಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 7 =
Remember me
