ನವದೆಹಲಿ:ಅದು ಆರು ತಿಂಗಳ ನಾಯಮರಿ. ಪುಣೆಯ ವಜ್ರೋದ್ಯಮಿ ಈ ಲ್ಯಾಬ್ರಡಾರ್​ ನಾಯಿಮರಿಯನ್ನು ಪ್ರೀತಿಯಿಂದ ಸಾಕುತ್ತಿದ್ದರು. ತುಂಬಾ ತುಂಟಾಟ ಮಾಡುತ್ತಿದ್ದ ಈ ನಾಯಿಮರಿ ಶನಿವಾರ ತಿಂಡಿಯನ್ನು ಅರಸುತ್ತಾ ಮನೆಯಲ್ಲಿ ಸುತ್ತಾಡುತ್ತಿತ್ತು.
ಮನೆಯ ಒಂದು ಕಡೆ ಹೊಳೆಯುವ ಎರಡು ವಸ್ತುಗಳು ಅದರ ಕಣ್ಣಿಗೆ ಬಿದ್ದಿತು. ಅವು ತಿನ್ನುವ ವಸ್ತುಗಳಿರಬೇಕು ಎಂದು ಭಾವಿಸಿ ಮೊದಲಿಗೆ ಒಂದು ವಜ್ರವನ್ನು ಹೆಕ್ಕಿಕೊಂಡಿತು. ಆದರೆ, ಕಡಿಯಲು ಕಷ್ಟವಾಗಿದ್ದರಿಂದ ಹಾಗೆಯೇ ನುಂಗಿಬಿಟ್ಟಿತ್ತು. ನಂತರ ಇನ್ನೊಂದು ವಜ್ರದ ಹರಳನ್ನೂ ನುಂಗಿ, ತನ್ನ ಪಾಡಿಗೆ ತಾನು ಆಟವಾಡಲು ಆರಂಭಿಸಿತ್ತು.
ಇದನ್ನೂ ಓದಿ:ವಿಡಿಯೋ: ನಾಯಿಗೆ ಕೈತುತ್ತು ನೀಡೋ ಬಾಲೆಗೆ ಭಾರಿ ಮೆಚ್ಚುಗೆ
ಅದೇ ವೇಳೆಗೆ ವಜ್ರೋದ್ಯಮಿಗೆ ತಾನು ಇರಿಸಿದ್ದ ಎರಡು ವಜ್ರದ ಹರಳುಗಳ ನೆನಪಾಯಿತು. ಒಂದೊಂದು 1.5 ಲಕ್ಷ ರೂಪಾಯಿ ಬೆಲೆ ಬಾಳುತ್ತಿದ್ದ ಆ ಹರಳುಗಳು ಅವರಿಟ್ಟಿದ್ದ ಜಾಗದಲ್ಲಿ ಇರಲಿಲ್ಲ. ಆತಂಕಗೊಂಡ ಅವರು ಮನೆಯನ್ನೆಲ್ಲಾ ಹುಡುಕಾಡಲಾರಂಭಿಸಿದರು. ಸಿಸಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದಾಗ ಪುಟಾಣಿ ನಾಯಿಮರಿಯ ತುಂಟಾಟ ಬೆಳಕಿಗೆ ಬಂದಿತ್ತು.
ತಕ್ಷಣವೇ ಅದನ್ನು ಪಶುವೈದ್ಯರ ಬಳಿ ಕರೆದೊಯ್ದು ಗ್ಯಾಸ್ಟ್ರೋಸ್ಕೋಪಿ ಮಾಡಿದಾಗ ಆ ಎರಡು ವಜ್ರದ ಹರಳುಗಳ ಜತೆಗೆ ನಾಯಿಮರಿಯ ಹೊಟ್ಟೆಯಲ್ಲಿ ಒಂದು ಸೂಜಿ, ಎರಡು ಕೋಟ್​ ಬಟನ್​ಗಳು, ರಬ್ಬರ್​ ವೈರ್​ ಮತ್ತು ಒಂದಷ್ಟು ದಾರದುಂಡೆಗಳು ಪತ್ತೆಯಾದವು. ಇದೀಗ ಅವೆಲ್ಲವನ್ನೂ ಹೊರತೆಗೆದ ನಂತರದಲ್ಲಿ ವಜ್ರೋದ್ಯಮಿ ಮನೆಯವರ ಅಚ್ಚುಮೆಚ್ಚಿನ ನಾಯಿಮರಿ ಮತ್ತಷ್ಟು ಚುರುಕಾಗಿ ತುಂಟಾಟಗಳಲ್ಲಿ ತೊಡಗಿಕೊಂಡಿದೆ ಎಂದು ಪಶುವೈದ್ಯರು ತಿಳಿಸಿದ್ದಾರೆ.
ದೆಹಲಿಯಲ್ಲಿ ಕೊವಿಡ್​-19 ಸಮುದಾಯ ಪ್ರಸರಣ ಪ್ರಾರಂಭವಾಗಿದೆಯಾ? ಅಮಿತ್​ ಷಾ ನೀಡಿದ್ದಾರೆ ವಿವರಣೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 + seventeen =
Remember me
