ನವದೆಹಲಿ:ಒಡಿಶಾ ರೈಲು ದುರಂತದ ನೋವು ಇನ್ನು ಮಾಸಿಲ್ಲ. ಈ ಅವಘಡದ ಭೀಕರತೆಯನ್ನು ನೆನೆದು ಇಂದಿಗೂ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಇನ್ನು ಕೆಲವರು ಸಾವಿನಿಂದ ಬಚಾವ್​ ಆಗಿದ್ದನ್ನು ನೆನೆದು ನಿಟ್ಟುಸಿರು ಬಿಡುತ್ತಿದ್ದಾರೆ. ಆ ಸಾಲಿನಲ್ಲಿ ಲಕ್ಷ್ಮೀ ದಾಸ್​ ಸರ್ಕಾರ್​ ಅವರು ಕೂಡ ಒಬ್ಬರು.
ಅಪಘಾತ ನಡೆದ ಜೂನ್​ 2ರಂದು ಲಕ್ಷ್ಮೀ ದಾಸ್​ ಸರ್ಕಾರ್​ ಅವರು ಕೋರಮಂಡಲ್​ ಎಕ್ಸ್​ಪ್ರೆಸ್​ ರೈಲನ್ನು ಏರಬೇಕಿತ್ತು. ಆದರೆ, ಅವರ ಅದೃಷ್ಟ ಚೆನ್ನಾಗಿತ್ತು. ಕೊನೇ ಕ್ಷಣದಲ್ಲಿ ತಮ್ಮ ಪ್ರಯಾಣವನ್ನೇ ರದ್ದು ಮಾಡಿಕೊಂಡರು. ಇದಕ್ಕೆ ಕಾರಣ ಲಡ್ಡು ಗೋಪಾಲ (ಕೃಷ್ಣನ ಮತ್ತೊಂದು ಹೆಸರು) ಎಂದು ಲಕ್ಷ್ಮೀ ದಾಸ್​ ತನ್ನಿಷ್ಟದ ದೇವರನ್ನು ನೆನೆದಿದ್ದಾರೆ.
ಇದನ್ನೂ ಓದಿ:ಹೃದಯಾಘಾತದಿಂದ ಸರ್ಕಲ್​ ಇನ್ಸ್​ಪೆಕ್ಟರ್ ನಿಧನ: ಚಿತ್ರದುರ್ಗದ ಲಾಡ್ಜ್​ನಲ್ಲಿ ದುರ್ಘಟನೆ
ಅಪಘಾತ ನಡೆದ ಕೆಲವು ದಿನಗಳ ಬಳಿಕ ಅಂದರೆ, ಜೂ. 7ರಂದು ಪಶ್ಚಿಮ ಬಂಗಾಳದ ಹೌರಾ ನಗರದ ನಿವಾಸಿ ಲಕ್ಷ್ಮೀ ದಾಸ್​ ಅವರು ಚೆನ್ನೈಗೆ ತೆರಳಲು ಕೋರಮಂಡಲ್​ ಎಕ್ಸ್​ಪ್ರೆಸ್​ ಏರಿದರು. ಈ ವೇಳೆ ಅವರು ಒಡಿಶಾ ರೈಲು ಅಪಘಾತದ ಬಗ್ಗೆ ಮಾತನಾಡಿದರು. ತ್ರಿವಳಿ ರೈಲು ಅಪಘಾತದಿಂದ ನನ್ನನ್ನು ಲಡ್ಡು ಗೋಪಾಲನೇ ಕಾಪಾಡಿದ. ನಾನು ಜೂನ್​ 2ರಂದು ಶಾಲಿಮರ್​ ರೈಲು ನಿಲ್ದಾಣದಿಂದ ಚೆನ್ನೈ ಮೂಲದ ಕೋರಮಂಡಲ್​ ಎಕ್ಸ್​ಪ್ರೆಸ್​ ಏರಬೇಕಿತ್ತು. ಚೆನ್ನೈನಲ್ಲಿ ಕೆಲಸ ಮಾಡುತ್ತಿರುವ ಮಗಳನ್ನು ಭೇಟಿಯಾಗಲು ತೆರಳುತ್ತಿದ್ದೆ. ಆದರೆ, ನನ್ನ ಅದೃಷ್ಟ ಚೆನ್ನಾಗಿತ್ತು. ಮಗಳಿಗೆ ಕಚೇರಿಯ ಕೆಲಸ ಬದ್ಧತೆ ಇದಿದ್ದರಿಂದ ಕೊನೆಯ ಕ್ಷಣದಲ್ಲಿ ಪ್ರಯಾಣವನ್ನು ರದ್ದು ಮಾಡಿಕೊಳ್ಳಲಾಯಿತು ಎಂದು ಲಕ್ಷ್ಮೀ ದಾಸ್​ ತಿಳಿಸಿದ್ದಾರೆ.
ಭಾರತದ ಅತಿದೊಡ್ಡ ರೈಲು ದುರಂತಕ್ಕೆ ಸಾಕ್ಷಿಯಾದ ರೈಲಿನಲ್ಲಿ ಪ್ರಯಾಣಿಸಲು ಹೆದರುತ್ತಿದ್ದೀರಾ ಎಂದು ಪ್ರಶ್ನಿಸಿದಾಗ, ಇದು ಯಾವುದೇ ಭಯದ ವಿಷಯವಲ್ಲ, ನನ್ನೊಂದಿಗೆ ಲಡ್ಡು ಗೋಪಾಲ ಇರುವುದರಿಂದ ನಾನು ಯಾವುದಕ್ಕೂ ಹೆದರುವುದಿಲ್ಲ. ಲಡ್ಡು ಗೋಪಾಲ ನನ್ನೊಂದಿಗೆ ಯಾವಾಗಲೂ ಪ್ರಯಾಣಿಸುತ್ತಾನೆ. ಅವನ ಇಚ್ಛೆಯಂತೆ ಎಲ್ಲವೂ ನಡೆಯುತ್ತದೆ. ಹೀಗಾಗಿ ನನಗೆ ಯಾವುದೇ ಭಯ ಇಲ್ಲ ಎಂದು ಹೇಳಿದರು. ಅಲ್ಲದೆ, ಕೃಷ್ಣನ ಮೂರ್ತಿಯನ್ನು ಹಿಡಿದುಕೊಂಡೇ ಚೆನ್ನೈಗೆ ಪ್ರಯಾಣ ಬೆಳೆಸಿದರು.
ಒಡಿಶಾ ರೈಲು ದುರಂತದಲ್ಲಿ 278 ಮಂದಿ ಮೃತಪಟ್ಟಿದ್ದಾರೆ. 1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇವರಲ್ಲಿ 900 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. 200 ಮಂದಿಗೆ ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ಇದನ್ನೂ ಓದಿ:ಜಾತಿ ಕಾರಣಕ್ಕೆ ಪ್ರವೇಶ ನಿರಾಕರಣೆ: ದೇವಸ್ಥಾನಕ್ಕೆ ಬೀಗ ಜಡಿದ ಜಿಲ್ಲಾ ಕಂದಾಯ ಆಯುಕ್ತ
ಶುಕ್ರವಾರ (ಜೂ. 2) ಪಶ್ಚಿಮ ಬಂಗಾಳದ ಹೌರಾ ನಗರದಿಂದ ತಮಿಳುನಾಡಿನ ಚೆನ್ನೈಗೆ ತೆರಳುತ್ತಿದ್ದ ಕೊರಮಂಡಲ್​ ಎಕ್ಸ್​ಪ್ರೆಸ್​ ರೈಲಿನ ಕೆಲವು ಬೋಗಿಗಳು ಹಳಿತಪ್ಪಿ ಪಕ್ಕದ ಹಳಿಗಳ ಮೇಲೆ ಬಿದ್ದವು. ಈ ವೇಳೆ ಮತ್ತೊಂದು ಕಡೆಯಿಂದ ಬರುತ್ತಿದ್ದ ಯಶವಂತಪುರ-ಹೌರಾ ಸೂಪರ್​ಫಾಸ್ಟ್​ ಟ್ರೈನ್​, ಹಳಿಗಳ ಮೇಲೆ ಬಿದ್ದಿ ಕೋರಮಂಡಲ್​ ಎಕ್ಸ್​ಪ್ರೆಸ್​ ಟ್ರೈನ್​ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 278 ಮೃತಪಟ್ಟು 1100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.(ಏಜೆನ್ಸೀಸ್​)
ಒಡಿಶಾ ರೈಲು ದುರಂತ; ಪರಿಹಾರಕ್ಕಾಗಿ ಬೇರೆ ಶವವನ್ನು ತನ್ನ ಗಂಡ ಎಂದ ಮಹಿಳೆಗೆ ಕಾದಿತ್ತು ಬಿಗ್​ ಶಾಕ್​!

ಇನ್ನು ವಾಟ್ಸ್ಆ್ಯಪ್ ಮೂಲಕ HD ಫೋಟೊ ಕಳಿಸಬಹುದು!

https://www.vijayavani.net/7-people-end-their-life-2-injured-in-madhya-pradesh
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
