ಭುವನೇಶ್ವರ್​:ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಒಡಿಶಾ ಪೊಲೀಸರು ಅರ್ಚನಾ ನಾಗ್​ ಮನೆಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾದ ಡೈರಿಯಲ್ಲಿರುವ ಬರವಣಿಗೆಗೂ ಮತ್ತು ಅಚರ್ನಾಳ ಕೈಬರಹಕ್ಕೆ ಹೋಲಿಕೆ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಡೀ ಪ್ರಕರಣದಲ್ಲಿ ಡೈರಿಯೇ ಮಹತ್ವದ ಸಾಕ್ಷಿಯಾಗಿದ್ದು, ಅರ್ಚನಾಳ ಹಣೆಬರಹವನ್ನು ಆಕೆಯ ಕೈಬರಹ ಇದೀಗ ನಿರ್ಧಾರ ಮಾಡಲಿದೆ.
ಖಂಡಗಿರಿ ಪೊಲೀಸ್ ಠಾಣೆಯ ತಂಡ ಇಡೀ ಪ್ರಕರಣದ ತನಿಖೆ ನಡೆಸುತ್ತಿದೆ. ಅರ್ಚನಾ ಅವರ ಕೈಬರಹವನ್ನು ಸಂಗ್ರಹಿಸಲು ತನಿಖಾ ತಂಡವು ಜರ್ಪಾದ ಜೈಲಿಗೆ ತೆರಳಿ, ಆಕೆಯ ಕೈಬರಹದ ಸ್ಯಾಂಪಲ್​ ತೆಗೆದುಕೊಂಡಿದೆ. ಅದನ್ನು ಮೊದಲು ಆಕೆಯ ಬಳಿ ವಶಪಡಿಸಿಕೊಂಡ ಡೈರಿಯೊಂದಿಗೆ ಹೊಂದಾಣಿಕೆ ಮಾಡಲಾಗುತ್ತದೆ.
ನ್ಯಾಯಾಲಯದ ಅನುಮತಿಯ ಪ್ರಕಾರ, ನಾವು ಅರ್ಚನಾ ಅವರ ಕೈಬರಹ ಮತ್ತು ಮಾದರಿ ಸಹಿಯ ಮಾದರಿಯನ್ನು ಸಂಗ್ರಹಿಸಿದ್ದೇವೆ. ಆಕೆಯ ವಶದಲ್ಲಿದ್ದ ಕೆಲವು ಡೈರಿಗಳನ್ನು ವಶಪಡಿಸಿಕೊಂಡಿದ್ದೇವೆ. ಆಕೆಯ ಕೈಬರಹ ಮತ್ತು ಮಾದರಿ ಸಹಿಯನ್ನು ಹೋಲಿಕೆಗಾಗಿ ಕೈಬರಹ ಬ್ಯೂರೋಗೆ ಕಳುಹಿಸಲಾಗುವುದು ಎಂದು ಖಂಡಗಿರಿ ಐಐಸಿ ದಯಾನಿಧಿ ನಾಯಕ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ನಯಾಪಲ್ಲಿ ಪೊಲೀಸ್​ ಠಾಣೆ ಅರ್ಚನಾ ನಾಗ್​ ವಿರುದ್ಧ 501 ಪುಟಗಳ ಚಾರ್ಜ್​​ಶೀಟ್ ಅನ್ನು ಕೋರ್ಟ್​ಗೆ ಸಲ್ಲಿಸಿದೆ. ​ಒಡಿಶಾ ಚಿತ್ರ ನಿರ್ದೇಶಕ ಅಕ್ಷಯ್ ಪಾರಿಜಾ ಅವರು ನಾಯಪಲ್ಲಿ ಪೊಲೀಸ್ ಠಾಣೆಯಲ್ಲಿ ನೀಡಿದ ಬ್ಲ್ಯಾಕ್‌ಮೇಲ್​ ದೂರಿನ ಆಧಾರದ ಮೇಲೆ ಚಾರ್ಜ್ ಶೀಟ್‌ ದಾಖಲಿಸಲಾಗಿದ್ದು, ಕೆಲವು ಪೂರಕ ದಾಖಲೆಗಳನ್ನು ಸಹ ಕೋರ್ಟ್​ಗೆ ಸಲ್ಲಿಸಲಾಗಿದೆ.
ಅರ್ಚನಾಳ ಪತಿ ಜಗಬಂಧು ಚಂದ್ ಅವರನ್ನು ಇನ್ನೂ ನಾಲ್ಕು ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲು ಕೋರ್ಟ್ ಇಡಿಗೆ ಅನುಮತಿ ನೀಡಿದೆ. ಮೊದಲ ಹಂತದಲ್ಲಿ ಇಡಿ ಜಗಬಂಧು ಅವರನ್ನು ಒಂಬತ್ತು ದಿನಗಳ ಬಂಧನಕ್ಕೆ ಒಳಪಡಿಸಿ ವಿಚಾರಣೆ ನಡೆಸಿತ್ತು. ಎರಡನೇ ಹಂತದಲ್ಲಿ ಎಲೆಕ್ಟ್ರಾನಿಕ್ ಸಾಧನದ ಬಗ್ಗೆ ಇಡಿ ಅವರನ್ನು ಪ್ರಶ್ನಿಸುತ್ತಿದೆ.
ಯಾರು ಈ ಅರ್ಚನಾ?26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.
ಅಂದಹಾಗೆ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ. 2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ.(ಏಜೆನ್ಸೀಸ್​)
18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ದಂಗಾದ ಇಡಿ ಅಧಿಕಾರಿಗಳು!

ನಾನು ಬಾಯ್ಬಿಟ್ಟರೆ ರಾಜ್ಯದ ಸನ್ನಿವೇಶವೇ ಬದಲು: 18 ಶಾಸಕರನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್ ಕ್ವೀನ್​ ವಾರ್ನಿಂಗ್​

ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್​ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್​ ಲೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
