ಹೈದರಾಬಾದ್​:ವಯಸ್ಸಾದರೂ ಮದುವೆ ಆಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಮನನೊಂದು ಮಹಿಳಾ ಕಾನ್ಸ್​ಟೆಬಲ್ ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದ್​ನಲ್ಲಿ ಬುಧವಾರ ನಡೆದಿದೆ.
ಸುರೇಖಾ (28) ಮೃತ ಲೇಡಿ ಕಾನ್ಸ್​ಟೆಬಲ್. ಈಕೆ ತೆಲಂಗಾಣದ ಕಂದಕುರ ಮಂಡಲದ ಜೈತವರಮ್​ ಗ್ರಾಮದ ನಿವಾಸಿ. ಹೈದರಾಬಾದ್​ನ ಛತ್ರಿನಕ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಸಾಲಿಬಂದ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುವ ಶಮ್ಶಿರಾಗಂಜ್​ ಕಾಲ್ವಗಡ್ಡದಲ್ಲಿ ತನ್ನ ಅಕ್ಕನ ಮನೆಯಲ್ಲಿ ಸುರೇಖಾ ವಾಸವಿದ್ದಳು.
ಇದನ್ನೂ ಓದಿ:‘ಮದುವೆ ಆದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ?’ ಪ್ರಶ್ನೆಗೆ ಬಿಜೆಪಿ ನಾಯಕಿಯ ಖಡಕ್ ಉತ್ತರ
ಸುರೇಖಾ 2018ನೇ ಬ್ಯಾಚಿನ ಕಾನ್ಸ್​ಟೆಬಲ್​. ಛತ್ರಿನಕ ಪೊಲೀಸ್​ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥ ಮುರಿಬಿದ್ದಿತ್ತು. ಇಬ್ಬರ ಜಾತಕ ಸರಿಯಿಲ್ಲ ಅಂತ ಮದುವೆ ರದ್ದಾಗಿತ್ತು. ತನ್ನ ಮದುವೆ ಎಂದಿಗೂ ನಡೆಯುವುದಿಲ್ಲ ಎಂದು ಸುರೇಖಾ ಮನನೊಂದಿದ್ದಳು.
ಈ ತಿಂಗಳ 2ನೇ ತಾರೀಖಿನಂದು ಸುರೇಖಾ ಅವರ ಅಕ್ಕ ಕೆಲಸಕ್ಕೆ ಹೋಗಿ 3ನೇ ತಾರೀಖಿನಂದು ಬೆಳಗ್ಗೆ 11 ಗಂಟೆಗೆ ಮನೆ ಬಂದರು. ಈ ವೇಳೆ ಮನೆಯ ಬಾಗಿಲು ಒಳಗಡೆಯಿಂದ ಲಾಕ್​ ಆಗಿತ್ತು. ಎಷ್ಟೇ ಬಡಿದರೂ ತೆಗೆಯದಿದ್ದಾಗ ಅನುಮಾನ ಬಂದು ಅಕ್ಕಪಕ್ಕದವರನ್ನು ಕರೆದರು. ಬಳಿಕ ಬಾಗಿಲು ಮುರಿದು ನೋಡಿದಾಗ ಒಳಗಡೆ ಸುರೇಖಾ ನೇಣಿಗೆ ಶರಣಾಗಿದ್ದಳು.
ಇದನ್ನೂ ಓದಿ:ಅತಂತ್ರ ಸರ್ಕಾರ ರಚನೆಗೆ ಅವಕಾಶ ಕೊಡದೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿ: ಜೆಡಿಎಸ್ ಎಂಎಲ್‌ಸಿ ಮರಿತಿಬ್ಬೇಗೌಡ ಮನವಿ
ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಸುರೇಖಾ ಮೃತದೇಹವನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಯೆ ಶವಗಾರಕ್ಕೆ ಸ್ಥಳಾಂತರಿಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.(ಏಜೆನ್ಸೀಸ್​)
ಮತ್ತೆ ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್​ ಬ್ಯೂಟಿ: ಫೋಟೋ, ವಿಡಿಯೋ ವೈರಲ್​

ಅಕ್ಕನ ಬದಲು ತಂಗಿಯನ್ನು ಮದುವೆಯಾಗಲು ಸಿದ್ಧನಾದ ವರ; ಮುಂದೇನಾಯ್ತ..?

ಜು-ಜುತ್ಸು ಟೂರ್ನಮೆಂಟ್ ಗೆದ್ದ ಫೇಸ್​ಬುಕ್​ ಒಡೆಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
