ಅಹಮದಾಬಾದ್​:ಟಿಕ್​ಟಾಕ್​ ಆ್ಯಪ್​ ಬಂದ ಮೇಲೆ ಮೂಲೆ ಮೂಲೆಯಲ್ಲಿದ್ದ ಪ್ರತಿಭೆಗಳೆಲ್ಲ ಮುಖ್ಯ ಭೂಮಿಕೆಗೆ ಬಂದಿವೆ. ಅದೇ ರೀತಿಯಲ್ಲಿ ಟಿಕ್​ಟಾಕ್​ನಲ್ಲಿ ಪ್ರತಿಭೆ ತೋರಿಸಲು ಹೋಗಿ ಅಮಾನತು ಆಗಿದ್ದ ಪೊಲೀಸ್​ ಪೇದೆಯೊಬ್ಬಳ ಸುದ್ದಿ ಕೆಲ ತಿಂಗಳ ಹಿಂದೆ ಹರಿದಾಡಿತ್ತು. ಪೊಲೀಸ್​ ಠಾಣೆಯಲ್ಲಿ ಟಿಕ್​ಟಾಕ್​ ಮಾಡಿ ಅಮಾನತು ಆಗಿದ್ದ ಮಹಿಳಾ ಪೇದೆ ಇದೀಗ ಗುಜರಾತ್​ನ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ.
ಅಲ್ಪಿತಾ ಚೌಧರಿ ಹೆಸರಿನ ಪೊಲೀಸ್​ ಅಧಿಕಾರಿ ಪೊಲೀಸ್​ ಠಾಣೆಯಲ್ಲಿ ಟಿಕ್​ಟಾಕ್​ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಅದೇ ಕಾರಣದಿಂದಾಗಿ ಲೋಕ್​ ರಕ್ಷಕ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಆಕೆಯನ್ನು ಅಮಾನತು ಮಾಡಲಾಗಿತ್ತು. ಅಮಾನತು ಆದಾಗಿನಿಂದ ಸುದ್ದಿಯಲ್ಲಿದ್ದ ಆಕೆ ಗುಜರಾತ್​ನ ವಿಡಿಯೋ ಆಲ್ಬಂಗಳಲ್ಲಿ ನಟಿಸಿದ್ದಾರೆ.
ಕಳೆದ ಸೆಪ್ಟೆಂಬರ್​ ತಿಂಗಳಲ್ಲಿ ಅಲ್ಪಿತಾ ಅವರ ಮೊದಲ ವಿಡಿಯೋ ಆಲ್ಬಂ ಬಿಡುಗಡೆಗೊಂಡಿತ್ತು. ಅಮಾನತು ಆದಾಗಿನಿಂದ ನಟನೆ ಕಡೆ ಹೆಚ್ಚು ಗಮನ ಕೊಟ್ಟಿರುವ ಅವರು ಒಟ್ಟು ನಾಲ್ಕು ವಿಡಿಯೋ ಆಲ್ಬಂಗಳನ್ನು ಬಿಡುಗಡೆ ಮಾಡಿದ್ದಾರೆ. ಎರಡರಲ್ಲಿ ತಾವೇ ಹಾಡಿದ್ದಾರೆ ಕೂಡ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಆಕೆಯ ಕುಚ್​ ಕೇರಿ, ಪಕೀ ಕೇರಿ ಹೆಸರಿನ ವಿಡಿಯೋ ಆಲ್ಬಂ ಬಿಡುಗಡೆಗೊಂಡಿದೆ. ಗುಜರಾತ್​ನ ನಟ ನಟಲ್​ ಬರೋಟ್​ನೊಂದಿಗೆ ಅಲ್ಪಿತಾ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ಅಲ್ಪಿತಾಗೆ ಬಾಲ್ಯದಿಂದಲೂ ನಟಿ, ಮಾಡೆಲ್​ ಅಥವಾ ಗಾಯಕಿ ಆಗಬೇಕು ಎನ್ನುವ ಕನಸಿತ್ತು. ಆದರೆ ಆಕೆಯ ತಂದೆ ಪೊಲೀಸ್​ ಇಲಾಖೆಯಲ್ಲಿದ್ದ ಕಾರಣ ಆಕೆಯೂ ಅದರಲ್ಲೇ ಸೇವೆ ಸಲ್ಲಿಸಬೇಕು ಎಂದು ಆಸೆ ಪಟ್ಟಿದ್ದರಂತೆ. ಒಂದು ಕನಸಿಗಾಗಿ ಇನ್ನೊಂದು ಕನಸನ್ನು ಬಲಿ ಕೊಡುಲಾಗುವುದಿಲ್ಲ ಎಂದು ಆಕೆ ತಿಳಿಸಿದ್ದಾರೆ.
ಸದ್ಯ ಅಲ್ಪಿತಾ ಮೆಹ್ಸಾನಾದ ಕಾಡಿ ಪೊಲೀಸ್​ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕಷ್ಟು ಸಿನಿಮಾ ಆಫರ್​ಗಳು ಬಂದಿದ್ದು, ಇಲಾಖೆ ಅನುಮತಿ ನೀಡಿದರೆ ಸಿನಿಮಾಗಳಲ್ಲಿ ನಟಿಸುವುದಾಗಿ ಆಕೆ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)

ಮೊಬೈಲ್​ನಿಂದಲೂ ಹರಡುತ್ತೆ ಕೊರೊನಾ! ತಪ್ಪಿಸೋಕೆ ಹೀಗೆ ಮಾಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 9 =
Remember me
