ನವದೆಹಲಿ:ಬರಿಗೈಲಿ ದುಡಿದು ಶ್ರೀಮಂತರಾದವರು ಕೆಲವರಿದ್ದಾರೆ. ಆದರೆ ಇಲ್ಲೊಬ್ಬಳು 55 ವರ್ಷದ ಮಹಿಳೆ ಬರಿಗಾಲಲ್ಲೇ ಬರೋಬ್ಬರಿ 13 ಕೋಟಿ ರೂಪಾಯಿ ಗಳಿಸಿದ್ದಾಳೆ. ಆದರೆ ಈಕೆಯ ಪಾಲಿಗೆ ಇದು ಸಮಾಧಾನದ ವಿಷಯವೂ ಹೌದು, ಜತೆಗೆ ನೋವಿನ ಸಂಗತಿ ಕೂಡ.
ಹೀಗೆ 13 ಕೋಟಿ ರೂಪಾಯಿ ಗಳಿಸಿದ ಆ ಯುವತಿಯ ಹೆಸರು ಕ್ಲಾರಾ ಶೆಲ್​ಮ್ಯಾನ್​. ಇದೊಂಥರ ಎಡವಟ್ಟಿನ ಪ್ರಸಂಗ. ಏಕೆಂದರೆ, ಈಕೆ ಹೀಗೆ ಪಡೆದಿರುವ ಬೃಹತ್ ಮೊತ್ತದ ಹಣ, ಅದು ಪರಿಹಾರ ಧನ. ಒಂದು ಸಣ್ಣ ಸಮಸ್ಯೆಯಿಂದಾಗಿ ಆದ ದೊಡ್ಡ ತೊಂದರೆ ಸಲುವಾಗಿ ಈಕೆಗೆ ಪರಿಹಾರಾರ್ಥವಾಗಿ 1.75 ಮಿಲಿಯನ್ ಡಾಲರ್ ಅಂದರೆ ಸುಮಾರು 13 ಕೋಟಿ ರೂಪಾಯಿ ಸಿಕ್ಕಿದೆ.
ಇದನ್ನೂ ಓದಿ:ಎರಡು ತಿಂಗಳ ಹಿಂದೆ ಕಂಪನಿ ಕ್ಲೋಸ್​, ಈಗ ಬದುಕು ಕೂಡ ಅಂತ್ಯ: ಎಸ್ಟೀಮ್​ ಕಾರಿನಲ್ಲಿ ಅನಾಥವಾಗಿತ್ತು ಶವ…
ಫ್ಲೋರಿಡಾದ ಈ ಯುವತಿ 2018ರ ಸೆಪ್ಟೆಂಬರ್​ನಲ್ಲಿ ಪೆಡಿಕ್ಯೂರ್ ಮಾಡಿಸಿಕೊಳ್ಳಲು ಹೋಗಿದ್ದಾಗ, ಆ ಪ್ರಕ್ರಿಯೆಯಲ್ಲಿ ಚಿಕ್ಕ ಗಾಯವಾಗಿತ್ತು. ಬಳಿಕ ಅದರಿಂದ ಸೋಂಕಾಗಿ ಈಕೆ ಪೆರಿಫೆರಲ್ ಆರ್ಟರಿ ಡಿಸೀಸ್​ಗೆ ಒಳಗಾದಳು. ಸೋಂಕು ವ್ಯಾಪಿಸಿ ಬಳಿಕ ಕಾಲನ್ನೇ ಕತ್ತರಿಸಬೇಕಾಯಿತು. ಇದರ ಸಲುವಾದ ಚಿಕಿತ್ಸೆಗೆ ಈಕೆ ದೊಡ್ಡ ಮೊತ್ತವನ್ನೇ ತೆರಬೇಕಾಯಿತು, ಕಾಲು ಕಳೆದುಕೊಳ್ಳುವ ಜತೆಗೆ ಮನೆ ಕೂಡ ಕಳೆದುಕೊಳ್ಳಬೇಕಾಯಿತು.
ಇದನ್ನೂ ಓದಿ:ಅಂದು ನಿಧಿ ಸುಬ್ಬಯ್ಯ, ಇಂದು ಆವಂತಿಕಾ ಶೆಟ್ಟಿ; ಇಬ್ಬರದ್ದೂ ಬಹುತೇಕ ಒಂದೇ ಥರ ಬೇಸರ!
ಆದರೆ ಮೂರು ವರ್ಷಗಳ ಬಳಿಕ ತನ್ನ ತಪ್ಪನ್ನು ಒಪ್ಪಿಕೊಂಡ ಟ್ಯಾಮಿಸ್​ ನೇಲ್ಸ್ 2 ಸಂಸ್ಥೆ 13 ಕೋಟಿ ರೂ. ಪರಿಹಾರ ನೀಡಿದೆ. ಪೆಡಿಕ್ಯೂರ್ ಮಾಡಿದ್ದ ಈ ಸಂಸ್ಥೆ ಆರಂಭದಲ್ಲಿ ಕ್ಲಾರಾದ್ದೇ ತಪ್ಪು ಎಂದು ತಪ್ಪಿಸಿಕೊಳ್ಳಲು ಯತ್ನಿಸಿತ್ತು.-ಏಜೆನ್ಸೀಸ್​
ಇದು ವಾಟ್ಸ್​ಆ್ಯಪ್​ ಅಡ್ಮಿನ್ಸ್​ ಓದಲೇಬೇಕಾದ ವಿಚಾರ; ಗ್ರೂಪ್​ ಸದಸ್ಯರ ಪೋಸ್ಟ್​ಗಳಿಗೆ ಸಂಬಂಧಿಸಿದಂತೆ ಮತ್ತದೇ ಆದೇಶ ಪುನರುಚ್ಚಾರ..
ಹೆಂಡತಿಯೊಂದಿಗೆ ಜಗಳವಾಡಿದ ಡಾಕ್ಟರ್​ ಸಾವು; ಬೆಡ್​ರೂಮ್​ನಲ್ಲಿ ಹೊತ್ತಿ ಉರಿದ ಬೆಂಕಿ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
