ಮುಂಬೈ:ಇನ್ನೇನು ಕೆಲವೇ ಕ್ಷಣಗಳು ಕಳೆದು ಹೋಗಿದ್ದರೆ ಆ ಯುವತಿ ಇನ್ನಿಲ್ಲವಾಗಿರುತ್ತಿದ್ದಳು. ಏಕೆಂದರೆ ರೈಲು ಇನ್ನೇನು ಬರುತ್ತಿದೆ ಎನ್ನುತ್ತಿರುವಾಗಲೇ ಆಕೆ ತಲೆ ತಿರುಗಿ ಹಳಿ ಮೇಲೇ ಬಿದ್ದುಬಿಟ್ಟಿದ್ದಳು. ಆದರೆ ನೋಡನೋಡುತ್ತಿದ್ದಂತೆ ಧಾವಿಸಿದ ಆಪದ್ಬಾಂಧವ, ಪವಾಡಸದೃಶವೆಂಬಂತೆ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ರೈಲು ನಿಲ್ದಾಣವೊಂದರಲ್ಲಿ ಸಂಭವಿಸಿರುವ ಈ ಅವಘಡ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಹಲವರ ಗಮನ ಸೆಳೆಯುವಂತೆ ಮಾಡಿದೆ. ಮಾತ್ರವಲ್ಲ ಆಪದ್ಬಾಂಧವನಂತೆ ಧಾವಿಸಿದ ರೈಲ್ವೇ ಪೊಲೀಸ್​ ಫೋರ್ಸ್​ ಸಿಬ್ಬಂದಿ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಮುಂಬೈನ ಸಂಧ್ರುಷ್ಟ್​ ರೋಡ್​ ರೈಲ್ವೇ ನಿಲ್ದಾಣದ, ಪ್ಲ್ಯಾಟ್​ಫಾರ್ಮ್​-2ರಲ್ಲಿ ಇಂಥದ್ದೊಂದು ಪವಾಡಸದೃಶ ಘಟನೆ ಗುರುವಾರ ಸಂಭವಿಸಿದೆ.
ಮುಂಬೈನ ಲೋಕಲ್​ ಟ್ರೇನ್​ನಲ್ಲಿ ಪ್ರಯಾಣಿಸಲು ನಿಲ್ದಾಣಕ್ಕೆ ಬಂದಿದ್ದ 23 ವರ್ಷದ ಯುವತಿ ಅನೀಷಾ ಶೇಖ್​ ಎಂಬಾಕೆ ತಲೆ ಸುತ್ತು ಬಂದು ಹಳಿ ಮೇಲೇ ಕುಸಿದು ಬಿದ್ದಿದ್ದಳು. ಆ ಸಂದರ್ಭದಲ್ಲಿ ರೈಲು ಬರುತ್ತಿದ್ದುದು ಕಾಣಿಸುತ್ತಿತ್ತು. ಯುವತಿ ಬಿದ್ದಿದ್ದು ಹಾಗೂ ರೈಲು ಆಗಮಿಸುತ್ತಿರುವುದು ಎರಡನ್ನೂ ಗಮನಿಸಿದ ರೈಲ್ವೇ ಪೊಲೀಸ್​ ಫೋರ್ಸ್​ನ ಸಿಬ್ಬಂದಿ ಶ್ಯಾಮ್​ ಸೂರತ್ ತಕ್ಷಣ ಹಳಿಯತ್ತ ಧಾವಿಸಿ ಆಕೆಯನ್ನು ಅಲ್ಲಿಂದ ಎತ್ತಿಕೊಂಡು ಬಂದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಪ್ರಯಾಣಿಕರು ಶ್ಯಾಮ್​ಗೆ ನೆರವಾದರೆ, ಇನ್ನು ಕೆಲವು ಪ್ರಯಾಣಿಕರು ರೈಲನ್ನು ನಿಧಾನಗೊಳಿಸುವಂತೆ ಸನ್ನೆ ಮಾಡಿದ್ದರು. ಇವೆಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಶ್ಯಾಮ್​ ಅವರ ಈ ಕಾರ್ಯವನ್ನು ಹಲವರು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)
ಇದು ‘ಶಾಕ್ ಕಿಂಗ್’ ನ್ಯೂಸ್​: ಹೆಸರೇ ಇಲೆಕ್ಟ್ರಿಕ್​ ಈಲ್, ತಾಕಿದ್ರೆ ಕರೆಂಟ್​ ಫೀಲ್​..!

ಸಾರಿಗೆ ಮುಷ್ಕರ ಮತ್ತಷ್ಟು ತೀವ್ರ: ನಾಳೆಯಿಂದ ಉಪವಾಸ ಸತ್ಯಾಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
