ನವದೆಹಲಿ:ಇಲ್ಲಿಯವರೆಗೆ ಕೆಲ ಸಾಮಾನ್ಯ ಜನರು ತಮ್ಮ ಲಿಂಗವನ್ನು ಬದಲಿಸಿದ ಮತ್ತು ತಮ್ಮ ಗುರುತನ್ನು ಬದಲಾಯಿಸಿದ್ದನ್ನು ಎಲ್ಲರು ನೋಡಿದ್ದಾರೆ. ಆದರೆ ಭಾರತೀಯ ನಾಗರಿಕ ಸೇವೆಗಳ ಇತಿಹಾಸದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ನಡೆದಿದೆ. ಐಆರ್​ಎಸ್​ (ಭಾರತೀಯ ಕಂದಾಯ ಸೇವೆ)  ಅಧಿಕಾರಿಯೊಬ್ಬರು ಸೆನ್ಸೇಷನ್​ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಧಿಕೃತ ದಾಖಲೆಗಳಲ್ಲಿ ಅವರ ಹೆಸರು ಮತ್ತು ಲಿಂಗವನ್ನು ಬದಲಾಯಿಸಲಾಗಿದೆ. ಗಮನಾರ್ಹ ಸಂಗತಿ ಏನೆಂದರೆ, ಐಆರ್‌ಎಸ್ ಅಧಿಕಾರಿ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಕೂಡ ಅನುಮೋದಿಸಿದೆ. ಇತಿಹಾಸದಲ್ಲಿ ಇಂತಹ ಮಹತ್ವದ ಬೆಳವಣಿಗೆ ಇದೇ ಮೊದಲು ಎನ್ನಲಾಗಿದೆ. ಹೆಸರು ಮತ್ತು ಲಿಂಗ ಬದಲಾಯಿಸಿಕೊಂಡ ಅಧಿಕಾರಿ ಸದ್ಯ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ವರ್ಷಾನುಗಟ್ಟಲೆ ಹೆಣ್ಣಾಗಿದ್ದರೂ ಇನ್ನು ಮುಂದೆ ಪುರುಷನಾಗಿಯೇ ಜೀವನ ನಡೆಸಲಿದ್ದಾರೆ. ಹೈದರಾಬಾದ್‌ನಲ್ಲಿರುವ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಅನಸೂಯಾ (35) ಈಗ ಎಂ. ಅನುಕತಿರ್​ ಸೂರ್ಯ ಆಗಿ ಬದಲಾಗಿದ್ದಾರೆ. ಹಲವು ವರ್ಷಗಳಿಂದ ಮಹಿಳೆಯಾಗಿದ್ದ ಅನುಕತಿರ್ ಅವರನ್ನು ಈಗ ಸರ್ಕಾರ ಪುರುಷ ಎಂದು ಪರಿಗಣಿಸಿದೆ. ಈ ನಿಟ್ಟಿನಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಆದೇಶ ಹೊರಡಿಸಿದೆ.
ದೇಶದಲ್ಲಿರುವ ಲಿಂಗ ವೈವಿಧ್ಯತೆಯ ಆಧಾರದ ಮೇಲೆ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಎಂ. ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದ್ದು, ಇನ್ನು ಮುಂದೆ, ಎಲ್ಲ ಅಧಿಕೃತ ದಾಖಲೆಗಳಲ್ಲಿ ಅಧಿಕಾರಿಯನ್ನು ‘ಶ್ರೀ ಎಂ ಅನುಕತಿರ್ ಸೂರ್ಯ’ ಎಂದು ಗುರುತಿಸಲಾಗುತ್ತದೆ ಎಂದು ಸರ್ಕಾರದ ಆದೇಶದ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಎ. ಅನುಕತಿರ್​ ಸೂರ್ಯ ವಿಚಾರಕ್ಕೆ ಬರುವುದಾದರೆ, ಅವರು 2013ರ ಬ್ಯಾಚ್‌ನ ಭಾರತೀಯ ಕಂದಾಯ ಸೇವಾ ಅಧಿಕಾರಿ. 2018ರಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಬಡ್ತಿ ಪಡೆದರು. ಕಳೆದ ವರ್ಷದಿಂದ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೆನ್ನೈನ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಭೋಪಾಲ್‌ನ ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ 2023ರಲ್ಲಿ ಸೈಬರ್ ಕಾನೂನು ಮತ್ತು ಸೈಬರ್ ಫೋರೆನ್ಸಿಕ್‌ನಲ್ಲಿ ಪಿಜಿ ಡಿಪ್ಲೊಮಾವನ್ನು ಪೂರ್ಣಗೊಳಿಸಿದ್ದಾರೆ. ಸರ್ಕಾರದ ಆದೇಶಕ್ಕೆ ಪ್ರತಿಕ್ರಿಯಿಸಿದ ಹಿರಿಯ ಐಆರ್‌ಎಸ್ ಅಧಿಕಾರಿಗಳು ಇದು ಪ್ರಗತಿಪರ ಕ್ರಮ ಎಂದು ಶ್ಲಾಘಿಸಿದ್ದಾರೆ.(ಏಜೆನ್ಸೀಸ್​)
ಕಾರು ಹರಿದು ಆಮೆಯ ಚಿಪ್​ ಛಿದ್ರ! ಸೂಪರ್​ಗ್ಲೂ ಬಳಸಿ ಮೂಕಜೀವಿಗೆ ಮರುಜೀವ

ವಾಲ್ಮೀಕಿ ನಿಗಮ ಹಗರಣ ಕೇಸ್​: ಮಾಜಿ ಸಚಿವ ನಾಗೇಂದ್ರ, ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
