ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಆಸ್ಪತ್ರೆಗಳೆಲ್ಲ ಭರ್ತಿಯಾಗುತ್ತಿದ್ದು, ಸೋಂಕಿತರಿಗೆ ಬೆಡ್​ ಇಲ್ಲದಂತಾಗುತ್ತಿದೆ. ಹಲವಾರು ಸೋಂಕಿತರು ಸೂಕ್ತ ಸಮಯಕ್ಕೆ ಬೆಡ್​ ಸಿಗದೆಯೇ ಸಾವನ್ನಪ್ಪುತ್ತಿರುವುದು ಬವರದಿಯಾಗುತ್ತಿದೆ. ಅದೇ ರೀತಿ ನೋಯ್ಡಾದ ಮಹಿಳೆಯೊಬ್ಬಳು ಬೆಡ್​ ಸಿಗದೆಯೇ ಕಾರಿನಲ್ಲೇ ಕೊನೆಯುಸಿರೆಳೆದಿರುವ ಘಟನೆ ಗುರುವಾರ ನಡೆದಿದೆ.
ಜಾಗೃತಿ ಗುಪ್ತಾ (35) ಹೆಸರಿನ ಮಹಿಳೆ ನೊಯ್ಡಾದಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದರು. ಆಕೆಯ ಗಂಡ ಮತ್ತು ಮಕ್ಕಳು ಮಧ್ಯ ಪ್ರದೇಶದಲ್ಲಿ ವಾಸವಿದ್ದಾರೆ. ಇತ್ತೀಚೆಗೆ ಜಾಗೃತಿಗೆ ಕರೊನಾ ಸೋಂಕು ತಗುಲಿದ್ದು, ಗುರುವಾರದಂದು ಅನಾರೋಗ್ಯ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಯ ಮನೆಯ ಮಾಲೀಕ ಅವಳನ್ನು ಸರ್ಕಾರಿ ನಿಯಂತ್ರಿತ ಜಿಐಎಂಎಸ್​ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆಕೆಯನ್ನು ಕಾರಿನಲ್ಲೇ ಕೂರಿಸಿ, ಆಸ್ಪತ್ರೆ ಸಿಬ್ಬಂದಿಯಲ್ಲಿ ಒಂದು ಬೆಡ್​ ಕೊಡಿ ಎಂದು ಗೋಗರೆದಿದ್ದಾನೆ.
ಸತತ ಮೂರು ಗಂಟೆ ಕಾದರೂ ಆಕೆಗೆ ಬೆಡ್​ ಸಿಕ್ಕಿಲ್ಲ. ಅಷ್ಟು ಹೊತ್ತು ಕಾರಿನಲ್ಲೇ ನರಳಾಡಿದ ಜಾಗೃತಿ ಮಧ್ಯಾಹ್ನ 3.30 ಸಮಯಕ್ಕೆ ಕೊನೆಯುಸಿರೆಳೆದಿದ್ದಾಳೆ. ಅದಾದ ನಂತರ ಮನೆ ಮಾಲೀಕ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಆಕೆ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದಾನೆ. ತಕ್ಷಣ ಕಾರಿನ ಬಳಿ ಬಂದ ಸಿಬ್ಬಂದಿ, ಜಾಗೃತಿ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. (ಏಜೆನ್ಸೀಸ್​)
ದುರ್ವಾಸನೆ ಬರುತ್ತಿದ್ದ ತಾಯಿಯ ಶವದ ಜತೆಯೇ ಇತ್ತು ಹಸಿವಿನಿಂದ ನರಳುತ್ತಿದ್ದ ಮಗು! ಕರೊನಾ ಭಯದಿಂದ ಹತ್ತಿರವೂ ಬಾರದ ಕುಟುಂಬಸ್ಥರು!

ಆ್ಯಂಕರ್ ಅರುಣ ಬಡಿಗೇರ ತಂದೆ-ತಾಯಿಯನ್ನು ಬಲಿ ತೆಗೆದುಕೊಂಡ ಕರೊನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
