ನವದೆಹಲಿ:ತೊಟ್ಟಿಲ ತೂಗುವ ಕೈ ಲೋಕವನ್ನಾಳಬಲ್ಲದು ಎನ್ನುತ್ತಾರೆ. ಕೆಲವೊಮ್ಮೆ ಅದೇ ಹೆಣ್ಣು ಪಾಪಿಯಾಗಿ ಬೇರೆಯವರ ಜೀವವನ್ನು ತೆಗೆದುಕೊಳ್ಳುವ ಘಟನೆಗಳನ್ನೂ ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಅದೇ ರೀತಿಯಲ್ಲಿ ಬುರ್ಖಾ ತೊಟ್ಟ ಹೆಣ್ಣು ಮಗಳೊಬ್ಬಳು ಪಿಸ್ತೂಲು ಹಿಡಿದು ಬೇಕಾಬಿಟ್ಟಿ ಗುಂಡು ಹಾರಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಇದನ್ನೂ ಓದಿ:ಕತ್ತಲೇ ಕೂಪದಲ್ಲಿ ಮುಖ್ಯರಸ್ತೆ, ಹೈವೇ ರಸ್ತೆಯಲ್ಲಿ ಗೊಂಬೆಗಳಂತೆ ನಿಂತಿವೆ ವಿದ್ಯುತ್ ಕಂಬ, ರಾತ್ರಿ ವೇಳೆ ಸವಾರರ ಪರದಾಟ
ಉತ್ತರ ದೆಹಲಿಯ ಸಾರ್ಫಾ ಬಾದ್​ ಪ್ರದೇಶದಲ್ಲಿ ನವೆಂಬರ್​ 8ರಂದು ನಡೆದಿರುವ ಘಟನೆ ಇದೀಗ ವೈರಲ್​ ಆಗಿದೆ. ಬುರ್ಖಾ ತೊಟ್ಟ ಮಹಿಳೆಯೊಬ್ಬಳು ಓರ್ವ ಗಂಡಸಿನೊಂದಿಗೆ ಬೈಕ್​ನಲ್ಲಿ ಬಂದು, ಒಂದು ಅಂಗಡಿಯ ಮುಂದೆ ನಿಲ್ಲುತ್ತಾಳೆ. ಕೂಡಲೆ ಕೈಗೆ ಪಿಸ್ತೂಲು ತೆಗೆದುಕೊಳ್ಳುವ ಮಹಿಳೆ ಬಾಗಿಲು ಮುಚ್ಚಿದ್ದ ಅಂಗಡಿಯ ಮೇಲೆ ಗುಂಡು ಹಾರಿಸುತ್ತಾಳೆ. ನಾನು ಗ್ಯಾಂಗ್​ಸ್ಟರ್​ನ ಸಹೋದರಿ ಎಂದು ಚೀರಾಡುತ್ತಾಳೆ. ಆಕೆಯ ಜತೆಗಿದ್ದ ವ್ಯಕ್ತಿ ಸಮಾಧಾನ ಮಾಡಲು ಮುಂದಾಗುತ್ತಾನಾದರೂ ತಡೆಯದ ಮಹಿಳೆ ಗುಂಡನ್ನು ಹಾರಿಸಲಾರಂಭಿಸುತ್ತಾಳೆ.
ಇದನ್ನೂ ಓದಿ:ಗುಜರಾತ್​ಗೆ ಶೂಟಿಂಗ್​ ಲೊಕೇಷನ್​ ನೋಡೋಕೆ ಹೋಗಿದ್ದ ಪ್ರೇಮ್​ ಎಮ್ಮೆ ಜತೆ ಮರಳಿದ್ರು!
ಈ ಘಟನೆಯ ಕುರಿತಾಗಿ ಖಾಸಗಿ ವಾಹಿನಿಯೊಂದು ಇದೀಗ ವರದಿ ಮಾಡಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ರೀತಿ ನಡೆದಿರುಬಹುದು ಎನ್ನಲಾಗಿದೆ. ರಾತ್ರಿ ವೇಳೆ ಈ ಕೃತ್ಯ ನಡೆದಿದ್ದು, ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)
ಕಾಡಿನ ಗುಡಿಸಲಿನಲ್ಲಿ ಕೂಡಿ 14 ದಿನ ಅತ್ಯಾಚಾರ ಮಾಡಿದ! ಕಾಮುಕನಿಂದ ಬಚಾವಾಗಿದ್ದೇ ಒಂದು ರೋಚಕ ಕಥೆ

ರಸ್ತೆ ಬದಿ ಬಿದ್ದಿದ್ದ ಗೋಣಿಚೀಲದಲ್ಲಿ ಕೇಳುತ್ತಿತ್ತು ಮಗು ಅಳುವ ಸದ್ದು! ಚೀಲ ತೆರೆದು ನೋಡಿದಾಗ ಕಾದಿತ್ತು ಅಚ್ಚರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
