ಬೆಂಗಳೂರು:ಗಂಡನನ್ನು ಬಿಟ್ಟಿರಲು ಆಗದ ಯುವತಿಯೊಬ್ಬಳು, ನ್ಯಾಯಾಲಯ ಕಟ್ಟಡದ ಮಹಡಿಯಿಂದ ಕೆಳಕ್ಕೆ ಹಾರಿ, ಸ್ಥಳದಲ್ಲಿದ್ದವರಲ್ಲಿ ಅನೇಕರು ಒಮ್ಮೆ ಹೌಹಾರುವಂತೆ ಮಾಡಿದ್ದಾಳೆ. ಆಕೆ ಕೆಳಕ್ಕೆ ಜಿಗಿದು ಗಂಭೀರ ಗಾಯಗೊಂಡಿದ್ದರೂ ತಕ್ಷಣವೇ ಅವಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಅಷ್ಟಕ್ಕೂ ಈ ಇಬ್ಬರೂ ಪ್ರೀತಿಸುತ್ತಿದ್ದು, ಅಂತರ್ಜಾತಿಯವರಾಗಿದ್ದರಿಂದ ಮದುವೆಗೆ ಯುವತಿಯ ಮನೆಯವರ ವಿರೋಧವಿತ್ತು. ಹೀಗಾಗಿ ಓಡಿ ಹೋಗಿ ಮದುವೆ ಆಗಿದ್ದಲ್ಲದೆ, ಮನೆಯರಿಗೆ ಸಿಗದೆ ತಲೆಮರೆಸಿಕೊಂಡಿದ್ದರು. ಅತ್ತ ಪ್ರೀತಿಯ ಗಂಡನನ್ನು ಬಿಟ್ಟಿರಲಾಗದೆ, ಇತ್ತ ಮನೆಯರಿಂದಲೂ ದೂರವಿರಲಾಗದೆ ಗೊಂದಲಕ್ಕೆ ಸಿಕ್ಕಿದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಇದನ್ನೂ ಓದಿ:ಬೈಕ್​ನಲ್ಲಿ ಹೋಗುವಾಗ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ; ಬಿದ್ದರೂ ಬಿಡದೆ ಮತ್ತೆ ಮತ್ತೆ ಇರಿದು ಸಾಯಿಸಿದಳು!
ಅಂದಹಾಗೆ ಈ ಜೋಡಿಯ ಹೆಸರು ಪ್ರಣವ್ ಕುಮಾರ್ ಮತ್ತು ಸಂಗಂ ಕುಮಾರಿ. ಬಿಹಾರದ ಕತರಮಾಲಾ ಗ್ರಾಮದವರಾದ ಇವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮದುವೆಗೆ ಮನೆಯವರ ವಿರೋಧ ಇದ್ದಿದ್ದರಿಂದ 2019ರ ಫೆ. 10ರಂದು ಓಡಿಹೋಗಿ ಮದುವೆಯಾಗಿದ್ದರು. ಈ ಬಗ್ಗೆ ಯುವತಿಯ ಮನೆಯವರು, ತಮ್ಮ ಪುತ್ರಿ ಅಪ್ರಾಪ್ತೆ, ಆಕೆಯನ್ನು ಅಪಹರಿಸಲಾಗಿದೆ ಎಂದು ದೂರು ನೀಡಿದ್ದರು.
ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಪೊಲೀಸರು 2021ರ ಜನವರಿ 12ರಂದು ಇಬ್ಬರನ್ನೂ ಬಂಧಿಸಿ, ಹೇಳಿಕೆ ದಾಖಲಿಗಾಗಿ ನ್ಯಾಯಾಲಯಕ್ಕೆ ಕರೆದೊಯ್ದಿದ್ದರು. ಬಿಹಾರದ ಬೇಗುಸರಾಯ್ ನ್ಯಾಯಾಲಯಕ್ಕೆ ಕರೆದೊಯ್ದಿದ್ದಾಗ ಪತಿಯನ್ನು ಬಿಟ್ಟಿರಲಾಗುವುದಿಲ್ಲ ಎಂಬ ಹಠಕ್ಕೆ ಬಿದ್ದ ಯುವತಿ, ಅತ್ತ ಮನೆಯವರ ವಿರೋಧವನ್ನೂ ಎದುರಿಸಲಾಗದೆ ನ್ಯಾಯಾಲಯದ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.(ಏಜೆನ್ಸೀಸ್)
ಇದನ್ನೂ ಓದಿ:ಕುಡಿದು ಸಹೋದರಿ ಮನೆಗೇ ಹೋಗಿ ರೇಪ್​ ಮಾಡಿದ; ಗೆಳೆಯನಿಂದ ಅದನ್ನೂ ವಿಡಿಯೋ ಮಾಡಿಸಿದ…
ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ

VIDEO: ಮರದಲ್ಲಿ ಕುಳಿತು ಅದೇ ರೆಂಬೆಯನ್ನು ಕಡಿಯುವ ಡೇಂಜರ್‌ ಉದ್ಯೋಗ ನೋಡಿರುವಿರಾ?

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twelve + six =
Remember me
