ರಾಜಸ್ಥಾನ:ನಿನ್ನೆ ಎಂದರೆ ಭಾನುವಾರ ರಾತ್ರಿ ಮನೆಯಲ್ಲೇ ಮಲಗಿದ್ದ ಹದಿನಾರು ವರ್ಷದ ಹುಡುಗಿ ಇಂದು ಬೆಳಗ್ಗೆ ಮನೆಗೆ ಹತ್ತಿರದಲ್ಲೇ ಶವವಾಗಿ ಪತ್ತೆಯಾಗಿದ್ದಾಳೆ. ರಾತ್ರಿ ಬೆಳಗಾಗುವುದರೊಳಗೆ ಹೆಣವಾಗಿದ್ದ ಈಕೆಯ ಗಂಟಲನ್ನು ಸೀಳಲಾಗಿದ್ದು, ಬರ್ಬರವಾಗಿ ಕೊಲೆ ಮಾಡಲಾಗಿದೆ.
ಶವ ಪತ್ತೆಯಾಗಿರುವ ಸ್ಥಳ ಹಾಗೂ ಅದು ಕಂಡು ಬಂದಿರುವ ಪರಿಸ್ಥಿತಿಯನ್ನು ಗಮನಿಸಿರುವ ಪೊಲೀಸರು, ಆರೋಪಿಗಳು ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರಬಹುದು ಎಂದು ಅಂದಾಜಿಸಿದ್ದು, ಸ್ಥಳೀಯ ಇಬ್ಬರು ಯುವಕರ ಮೇಲೆ ಅನುಮಾನ ಇರುವುದಾಗಿ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ:‘ಅಪ್ಪ ನನ್ನ ಮೇಲೆ 7 ವರ್ಷದಿಂದ ರೇಪ್​ ಮಾಡ್ತಾನೇ ಇದ್ದಾನೆ!’ ಕಣ್ಣೀರು ತರಿಸುತ್ತೆ ಈ ಮಗಳ ಕಥೆ
ರಾಜಸ್ಥಾನದ ಬರ್ಮರ್ ಎಂಬಲ್ಲಿನ ಸುವಾಲಾ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಹದಿನಾರು ವರ್ಷದ ಹುಡುಗಿಯ ಶವ ಗಂಟಲು ಸೀಳಿದ ಸ್ಥಿತಿಯಲ್ಲಿ ಮನೆ ಸಮೀಪದ ಬಯಲಿನಲ್ಲಿ ಕಂಡುಬಂದಿದೆ. ಪೊಲೀಸರು ಹೆಚ್ಚಿನ ತನಿಖೆಗಾಗಿ ಶವವನ್ನು ಮರಣೋತ್ತರ ಪರೀಕ್ಷೆಗೆ ಒಪ್ಪಿಸಿದ್ದಾರೆ. ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ.
ಯುವತಿ ಭಾನುವಾರ ರಾತ್ರಿ ಮನೆಯಲ್ಲೇ ಮಲಗಿದ್ದಳು. ಬೆಳಗ್ಗೆ ಎದ್ದು ನೋಡಿದಾಗ ಆಕೆ ಕಾಣಿಸುತ್ತಿರಲಿಲ್ಲ. ಗಾಬರಿಗೊಂಡು ಸುತ್ತಮುತ್ತ ಹುಡುಕಾಡಿದಾಗ ಆಕೆಯ ಶವ ಮನೆಯ ಹಿಂದಿನ ಪ್ರದೇಶದಲ್ಲಿ ಕಂಡುಬಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. (ಏಜೆನ್ಸೀಸ್​)
ಇದು ಉಗ್ರರು ಬಳಸುತ್ತಿದ್ದ ಆ್ಯಪ್​ ಅಂತೆ; ರಹಸ್ಯ ಬಿಚ್ಚಿಟ್ಟವರಲ್ಲೊಬ್ಬ ಬೆಂಗಳೂರಿನ ‘ಡಾ.ಬ್ರೇವ್’

ಕರೊನಾ ಲಸಿಕೆ ಪಡೆದ ಮೇಲೆ ಏನೆಲ್ಲ ಆಗಬಹುದು?; ಇಲ್ಲಿವೆ ನೋಡಿ ಅಡ್ಡಪರಿಣಾಮಗಳ ಮಾಹಿತಿ…

ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 1 =
Remember me
