ಲಖನೌ:ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಆರೋಪ ಎದುರಿಸುತ್ತಿರುವ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಅವರ ಮಗ ಆಶಿಶ್ ಮಿಶ್ರ ಅವರನ್ನು ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಒಪ್ಪಿಸಲಾಗಿದೆ.
ಅಕ್ಟೋಬರ್ 3 ರಂದು ನಡೆದ ಘಟನೆಯಲ್ಲಿ ನಾಲ್ಕು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಒಟ್ಟು ಎಂಟು ಜನ ಸಾವಪ್ಪಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಆಶಿಶ್ ಮಿಶ್ರ ಅವರನ್ನು ಶನಿವಾರದಂದು ಜಿಲ್ಲಾ ಪೊಲೀಸ್​ ಠಾಣೆಗೆ ವಿಚಾರಣೆಗೆ ಕರೆಸಲಾಗಿತ್ತು. ಸುಮಾರು 12 ಗಂಟೆಗಳ ಕಾಲದ ಪ್ರಶ್ನೋತ್ತರಗಳ ನಂತರ ಹಲವು ಪ್ರಶ್ನೆಗಳಿಗೆ ಮಿಶ್ರ ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇಂದು ಅವರನ್ನು ಲಖೀಂಪುರ ಖೇರಿಯ ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಇದನ್ನೂ ಓದಿ:ಬಿಜೆಪಿ ತೊರೆದು ‘ಕೈ’ ಸೇರಿದ ಉತ್ತರಾಖಂಡ ಸಚಿವ ಮತ್ತು ಶಾಸಕ ಪುತ್ರ
ಸರ್ಕಾರಿ ವಕೀಲರು 14 ದಿನಗಳ ಪೊಲೀಸ್​ ರಿಮ್ಯಾಂಡ್​ನ ಮನವಿ ಮಾಡಿದರು. ಆದರೆ, ಮಿಶ್ರ ಪರ ವಕೀಲರ ವಿರೋಧದ ಹಿನ್ನೆಲೆಯಲ್ಲಿ, ನ್ಯಾಯಾಲಯವು, 3 ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿ ಆದೇಶ ಹೊರಡಿಸಿತು ಎನ್ನಲಾಗಿದೆ. ಅಕ್ಟೋಬರ್​ 12 ರಿಂದ 14 ರವರೆಗೆ ಪೊಲೀಸ್​ ಕಸ್ಟಡಿಯಲ್ಲಿ ಆರೋಪಿ ಮಿಶ್ರರ ವಿಚಾರಣೆ ನಡೆಸಲು ಅವಕಾಶ ನೀಡಲಾಗಿದೆ.(ಏಜೆನ್ಸೀಸ್)
ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

ಲಖೀಂಪುರ್ ಖೇರಿ ಹಿಂಸಾಚಾರ ವಿರೋಧಿಸಿ ರೈತರ ಕಲಶ ಯಾತ್ರೆ; ಅ.18 ರಂದು ‘ರೈಲ್​ ರೋಕೋ’

ಶಾರುಖ್​ ಪುತ್ರನ​ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 11 =
Remember me
