
ಲಖನೌ:ಉತ್ತರಪ್ರದೇಶದ ಲಖೀಂಪುರ್​ ಖೇರಿ ಸಾವುನೋವುಗಳ ಪ್ರಕರಣದಲ್ಲಿ ರಾಜ್ಯದ ಪೊಲೀಸರು ನಾಲ್ಕನೇ ಆರೋಪಿಯನ್ನು ಬಂಧಿಸಿದ್ದಾರೆ. ಘಟನೆಯ ವೇಳೆ ರೈತರ ಮೇಲೆ ಹಾದುಹೋಯಿತೆನ್ನಲಾದ ಸಚಿವಪುತ್ರನ ಕಾರಿನ ಹಿಂದೆಯೇ ಹೋದ ಮತ್ತೊಂದು ಎಸ್​ಯುವಿಯ ಚಾಲಕ ಶೇಖರ್​ ಭಾರತಿ, ಬಂಧಿತ ವ್ಯಕ್ತಿ.
ಅ.3 ರಂದು ನಡೆದ ಘಟನೆಯಲ್ಲಿ ಎಂಟು ಜನರು ಮೃತಪಟ್ಟಿದ್ದರು. ರಸ್ತೆಯನ್ನು ಅಡ್ಡಗಟ್ಟಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೃಹ ಖಾತೆಯ ರಾಜ್ಯ ಸಚಿವ ಅಜಯ್​ ಮಿಶ್ರಾರ ಮಗ ಆಶಿಶ್​ ಮಿಶ್ರ ಕಾರು ಹಾಯಿಸಿದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ತನಿಖೆಗೆ ಸಹಕರಿಸುತ್ತಿಲ್ಲ ಮತ್ತು ಸೂಕ್ತ ಉತ್ತರಗಳನ್ನು ನೀಡಿಲ್ಲ ಎಂದು ಅದಾಗಲೇ ಆಶಿಶ್​ರನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ಕಂದಾಯ ನಿರೀಕ್ಷಕಿ ಆತ್ಮಹತ್ಯೆ! ಮಹತ್ತರ ಕನಸು ಕಂಡಿದ್ದವಳ ಬಾಳಲ್ಲಿ ದುರಂತ
ಇದೀಗ ಮಿಶ್ರರ ಬಿಳಿ ಜೀಪಿನ ಹಿಂದೆಯೇ ತೆರಳಿತೆನ್ನಲಾದ ಬ್ಲ್ಯಾಕ್​ ಫಾರ್ಚೂನರ್​ ಕಾರಿನಲ್ಲಿ ರಾಜ್ಯಸಭಾ ಸಂಸದ ಅಖಿಲೇಶ್​ ದಾಸ್​ ಸೋದರಳಿಯ ಹಾಗೂ ಆಶಿಶ್​ ಮಿಶ್ರಾರ ಆಪ್ತ ಅಂಕಿತ್​ ದಾಸ್, ಸುಮಿತ್​ ಜೈಸ್ವಾಲ್ ಮತ್ತು ಬಂಧಿತ ಚಾಲಕ ಶೇಖರ್ ಭಾರತಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಶೇಖರ್​ ಭಾರತಿಯನ್ನು ಬಂಧಿಸಿರುವ ಯುಪಿ ಪೊಲೀಸರು, ಅಂಕಿತ್​ ದಾಸ್​ನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಯುಪಿ ಪೊಲೀಸರು ಬಂಧಿಸಿರುವ ಇತರ ಈರ್ವರೆಂದರೆ ಲವ್​ ಕುಶ್​ ಮತ್ತು ಆಶಿಶ್ ಪಾಂಡೆ. ಪ್ರಕರಣದಲ್ಲಿ ಇನ್ನೂ 15 ರಿಂದ 20 ಗುರುತಿಲ್ಲದ ಜನರೂ ಆರೋಪಿಗಳಾಗಿದ್ದಾರೆ.(ಏಜೆನ್ಸೀಸ್)
ಆಧಾರ್​ ಕಾರ್ಡ್​ನೊಂದಿಗೆ ವಾಸಿಸುತ್ತಿದ್ದ ಪಾಕಿಸ್ತಾನಿ ಭಯೋತ್ಪಾದಕನ ಬಂಧನ
ಕೆರೆ ಕೋಡಿ ಬಿದ್ದು ಹರಿದುಹೋದ ಮೀನುಗಳು… ಗುತ್ತಿಗೆದಾರರ ಬದುಕು ಹೈರಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 11 =
Remember me
