ನವದೆಹಲಿ:ಎಂಟು ಜನರು ಮೃತಪಟ್ಟಿದ್ದ ಉತ್ತರಪ್ರದೇಶದ ಲಖೀಂಪುರ್​ ಖೇರಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆ ರಾಜ್ಯದ ಪೊಲೀಸರು​ ಸಲ್ಲಿಸಿದ ಸ್ಟೇಟಸ್​ ರಿಪೋರ್ಟ್​ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಿಪಡಿಸಿತು. ಅಕ್ಟೋಬರ್ 3 ರಂದು ನಡೆದಿದ್ದ ಘಟನೆಯ ಕುರಿತಾಗಿ ಎರಡು ಎಫ್​ಐಆರ್​ಗಳು ದರ್ಜಾಗಿದ್ದು, ಈವರೆಗೆ ಪೊಲೀಸರು ಯಾವುದೇ ಚಾರ್ಜ್​ಶೀಟ್​ ಸಲ್ಲಿಸಿಲ್ಲ.
ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಯುಪಿ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಹೆಚ್ಚಿನ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಎಂಬುದರ ಹೊರತಾಗಿ ಏನೂ ಇಲ್ಲ. ತನಿಖೆ ನಾವು ಅಪೇಕ್ಷಿಸಿದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮಲಗಿದ್ದ ಮಹಿಳೆ ಮೇಲೆ ಕುಸಿದ ಗೋಡೆ: ನಿದ್ದೆಯಲ್ಲೇ ಬಂದೆರಗಿದ ಜವರಾಯ
ಜೊತೆಗೆ, ಪ್ರಕರಣದಲ್ಲಿ ಸಾಕ್ಷ್ಯಗಳು ಕಲಸಿಹೋಗದಂತೆ ನೋಡಿಕೊಳ್ಳಲು ಅನ್ಯ ಹೈಕೋರ್ಟ್​​ನ ಓರ್ವ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವುದಾಗಿ ಕೋರ್ಟ್​ ಹೇಳಿತು. ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಾಕೇಶ್​ ಕುಮಾರ್​ ಜೈನ್​ ಅಥವಾ ನಿವೃತ್ತ ನ್ಯಾಯಮೂರ್ತಿ ರಣಜೀತ್​ ಸಿಂಗ್​ ಅವರನ್ನು ತನಿಖೆಯ ಮೇಲ್ವಿಚಾರಣೆಗಾಗಿ ನೇಮಿಸುವ ಇಂಗಿತ ವ್ಯಕ್ತಪಡಿಸಿತು.
ಈ ನಡುವೆ, ಲಖೀಂಪುರ್​ ಖೇರಿಯಲ್ಲಿ ಅ.3 ರಂದು ಮೃತಪಟ್ಟಿದ್ದ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್​ ಅವರನ್ನು ರೈತರು ಸಾಯಿಸಿಲ್ಲ. ಬದಲಿಗೆ ರೈತರ ಮೇಲೆ ಹರಿದುಹೋದ ವಾಹನದಡಿಯಲ್ಲೇ ಅವರೂ ಸಿಕ್ಕಿ ಸತ್ತಿದ್ದಾರೆ ಎಂದು ಸರ್ಕಾರ ಕೋರ್ಟ್​ಗೆ ತಿಳಿಸಿತು. ವಿಚಾರಣೆಯನ್ನು ಶುಕ್ರವಾರ(ನ.12)ಕ್ಕೆ ಮುಂದೂಡಲಾಯಿತು.(ಏಜೆನ್ಸೀಸ್)
ಬಳ್ಳಾರಿಯಲ್ಲಿ ಪುನೀತ್​ ಹೆಸರಲ್ಲಿ ಉಚಿತ ಶಾಲೆ: ಜನಾರ್ಧನ ರೆಡ್ಡಿ

VIDEO| ಪುನೀತ್​​ಗೆ ಬಿರಿಯಾನಿ, ಕೋಳಿ ಸಾರು ಎಡೆಯಿಟ್ಟ ಅಭಿಮಾನಿಗಳು; ಗ್ರಾಮಸ್ಥರಿಗೂ ವಿತರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 4 =
Remember me
