ಕೊಚ್ಚಿ:ಭಾರತದಲ್ಲಿ ಕೊವಿಡ್​-19 ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಭಾರತ ಜಗತ್ತಿನಲ್ಲಿ ಅತಿ ಹೆಚ್ಚು ಕೊವಿಡ್​-19 ಬಾಧಿಸಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.
ನಮ್ಮ ದೇಶದಲ್ಲಿ ಬಹುತೇಕ ಎಲ್ಲ ರಾಜ್ಯಗಳೂ ಕೊವಿಡ್​-19 ಸೋಂಕಿಗೆ ತತ್ತರಿಸುತ್ತಿವೆ. ಹೀಗಿರುವಾಗ ಒಂದು ಕೇಂದ್ರಾಡಳಿತ ಪ್ರದೇಶ ಮಾತ್ರ ಸುರಕ್ಷಿತವಾಗಿ ಉಳಿದುಕೊಂಡಿದೆ. ಆರು ತಿಂಗಳಿಂದ ಭಾರತದಲ್ಲಿ ಅವಾಂತರ ಸೃಷ್ಟಿಸುತ್ತಿರುವ ಕೊವಿಡ್​-19 ಇದೊಂದು ಪ್ರದೇಶಕ್ಕೆ ಇನ್ನೂ ಕಾಲಿಟ್ಟಿಲ್ಲ. ಇದುವರೆಗೆ ಒಂದೇ ಒಂದು ಪ್ರಕರಣವೂ ಅಲ್ಲಿ ದಾಖಲಾಗಿಲ್ಲ.
ಕೊಚ್ಚಿಯಿಂದ 384 ಕಿ.ಮೀ.ದೂರದಲ್ಲಿರುವ ಸುಮಾರು 64,000 ಜನಸಂಖ್ಯೆಯಿರುವ ದ್ವೀಪಸಮೂಹ ಲಕ್ಷದ್ವೀಪದಲ್ಲಿ ಇದುವರೆಗೂ ಕರೊನಾ ಸೋಂಕು ಪತ್ತೆಯಾಗಿಲ್ಲ. ಅಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ.
ಇಡೀ ದೇಶಕ್ಕೆ ಮಾರಕವಾದ ಕರೊನಾ ಲಕ್ಷದ್ವೀಪಕ್ಕೆ ಹೇಗೆ ಕಾಲಿಡಲು ಸಾಧ್ಯವಾಗಿಲ್ಲ ಎಂಬ ಬಗ್ಗೆ ಕವರಟ್ಟಿ ಜಿಲ್ಲಾಧಿಕಾರಿ ಟಿ.ಖಾಸಿಮ್​ ಹೇಳಿದ್ದಾರೆ. ಕೊವಿಡ್​ ಶುರುವಾದಾಗಿನಿಂದಲೂ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಲಕ್ಷದ್ವೀಪ ನಿವಾಸಿಗಳನ್ನು ಹೊರಗೆ ಹೋಗಲು ಬಿಟ್ಟಿಲ್ಲ. ಬೇರೆ ಕೆಲವು ಕಾರಣಕ್ಕೆ ಇಲ್ಲಿಂದ ಹೋಗಿದ್ದವರನ್ನೂ ಒಮ್ಮೆಲೇ ವಾಪಸ್​ ಕರೆಸಿಕೊಂಡಿಲ್ಲ. ಪ್ರವಾಸಿಗರಿಗಂತೂ ಇಲ್ಲಿಗೆ ಬರಲು ಅವಕಾಶವನ್ನೇ ನೀಡಲಿಲ್ಲ.ಇದನ್ನೂ ಓದಿ:ದೋವಲ್​-ವ್ಯಾಂಗ್​ ವಿಡಿಯೋ ಕಾಲ್​ ಹೊರತಾಗಿ ಭಾರತ-ಚೀನಾ ಸಂಬಂಧ ಹದಗೆಟ್ಟಿದೆ
ಇನ್ನು ಚಿಕಿತ್ಸೆ, ಕೆಲಸ ಎಂದು ಹೊರಗೆ ಹೋಗಿದ್ದವರು ವಾಪಸ್​ ಲಕ್ಷದ್ವೀಪಕ್ಕೆ ಆಗಮಿಸುವುದಕ್ಕೂ ಮೊದಲು ಅವರಿಗೆ ಕೊಚ್ಚಿಯಲ್ಲಿ ಸರ್ಕಾರದ ವತಿಯಿಂದಲೇ ಏಳುದಿನಗಳ ಕ್ವಾರಂಟೈನ್​ ವ್ಯವಸ್ಥೆ ಮಾಡಲಾಗಿತ್ತು. ಏಳು ದಿನಗಳ ಬಳಿಕ ಕೊವಿಡ್​-19 ನೆಗೆಟಿವ್​ ವರದಿ ಬಂದವರಿಗೆ ಮಾತ್ರ ಲಕ್ಷದ್ವೀಪಕ್ಕೆ ಪ್ರವೇಶಿಸಲು ಅನುಮತಿ ನೀಡಲಾಯಿತು. ಹಾಗೇ ಬಂದವರೂ ಸಹ ಕಡ್ಡಾಯವಾಗಿ 14 ದಿನ ಹೋಂ ಕ್ವಾರಂಟೈನ್​ ಪಾಲಿಸಬೇಕಾಗಿತ್ತು. ಇಲ್ಲಿ ಜನಸಂಖ್ಯೆಯೂ ಕಡಿಮೆ ಇರುವುದರಿಂದ ನಾವು ತುಂಬ ಮುನ್ನೆಚ್ಚರಿಕೆ ಕ್ರಮ ಕೈಗೊಂಡು, ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಯಿತು ಎಂದು ಖಾಸಿಮ್​ ತಿಳಿಸಿದ್ದಾರೆ.ಇದನ್ನೂ ಓದಿ:ಸಂಸದೆ ಸುಮಲತಾ ಅಂಬರೀಷ್​​ಗೆ ಕರೊನಾ ಸೋಂಕು; ಮನೆಯಲ್ಲೇ ಕ್ವಾರಂಟೈನ್​
ಇನ್ನೂ 200-300 ಜನರು ಕೊಚ್ಚಿಯಲ್ಲೇ ಉಳಿದುಕೊಂಡಿದ್ದಾರೆ. ಅವರೂ ಲಕ್ಷದ್ವೀಪಕ್ಕೆ ಆಗಮಿಸುವವರೇ ಆಗಿದ್ದಾರೆ. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ಪ್ರತಿವಾರವೂ ಎರಡು ಹಡಗುಗಳು ಬರುತ್ತವೆ. ಉಳಿದವರನ್ನೂ ಕರೆಸುವ ಮೊದಲು ಅವರಿಗೆ ಕೊವಿಡ್​-19 ಇಲ್ಲ ಎಂಬುದು ದೃಢಪಡಬೇಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)
‘ಮಾಸ್ಕ್​ ಧರಿಸದೆ ಹೊರಗೆ ಬಂದ್ರೆ ದಂಡ ತುಂಬಿ…ಸೀದಾ ಆಸ್ಪತ್ರೆಗೆ ನಡೀರಿ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
