ಮುಂಬೈ:ಗಣೇಶನ ಹಬ್ಬ ಬಂತೆಂದರೆ ಮಹಾರಾಷ್ಟ್ರದ ಗಲ್ಲಿ ಗಲ್ಲಿಗಳಲ್ಲೂ ಎತ್ತರೆತ್ತರದ ಗಣೇಶ ಮೂರ್ತಿಗಳನ್ನು ಕೂರಿಸಿ, ವಾರಗಟ್ಟಲೆ ಇಟ್ಟುಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ, ಈ ಬಾರಿಯ ಗಣೇಶ ಹಬ್ಬದ ಮೇಲೂ ಕರೊನಾ ಕರಿನೆರಳು ಬಿದ್ದಿರುವ ಕಾರಣ, ಮಹಾರಾಷ್ಟ್ರದ ಗಣೇಶ ಪೆಂಡಾಲ್​ಗಳ ಮೂರ್ತಿಗಳ ಎತ್ತರ ಗಣನೀಯವಾಗಿ ಕಡಿಮೆಯಾಗುವುದು ನಿಶ್ಚಿತವಾಗಿದೆ.
ಇದಕ್ಕೆ ಪೂರಕ ಎಂಬಂತೆ ಮುಂಬೈನಲ್ಲೇ ಅತಿಎತ್ತರದ ಮೂರ್ತಿ ಎನಿಸಿಕೊಳ್ಳುತ್ತಿದ್ದ ಲಾಲ್​ಬಾಗ್​ಚಾ ರಾಜಾ ಗಣೇಶ ಮೂರ್ತಿ ಈ ಬಾರಿ ಕೇವಲ 4 ಅಡಿ ಎತ್ತರ ಇರಲಿದೆ.
ಲಾಲ್​ಬಾಗ್​ನ ಗಣೇಶ ಗಲ್ಲಿಯ ಮುಂಬೈಚಾ ರಾಜಾ ಮಂಡಳದ ಕಾರ್ಯದರ್ಶಿ ಸ್ವಪ್ನಿಲ್​ ಪಾರಬ್​ ಈ ಬಾರಿಯ ಗಣೇಶ ಹಬ್ಬ ತುಂಬಾ ಸಣ್ಣ ಮಟ್ಟದಲ್ಲಿ ಆಚರಿಸಲ್ಪಡುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಪತಂಜಲಿಯ ಕರೊನಾ ಕಿಟ್​ನ ದರ 545 ರೂಪಾಯಿ
ಲಾಲ್​ಬಾಗ್​ಚಾ ಮಂಡಳ ಇಡೀ ಮುಂಬೈನಲ್ಲೇ ತುಂಬಾ ಪ್ರಸಿದ್ಧವಾದದ್ದು. ಬಾಲಿವುಡ್​ ತಾರೆಯರು, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತಿತರ ಪ್ರತಿಷ್ಠಿತರು ಈ ಪೆಂಡಾಲ್​ಗೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ರಾಜ್ಯದಲ್ಲಿ ಕರೊನಾ ಪಿಡುಗು ಜೋರಾಗಿರುವ ಕಾರಣ ಈ ಬಾರಿ ಕಡಿಮೆ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಎಲ್ಲ ಪೆಂಡಾಲ್​ಗಳಿಗೆ ಸಿಎಂ ಉದ್ಧವ್​ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಪೆಂಡಾಲ್​ನವರೂ ಇದಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗಿದೆ.
ಮೂರ್ತಿ ವಿಸರ್ಜನೆಗಾಗಿ ಮುಂಬೈನ ಸಮುದ್ರ ತೀರದವರೆಗೆ ಬೃಹತ್​ ಮೆರವಣಿಗೆ ನಡೆಸುವುದು ಸಾಮಾನ್ಯ. ಆದರೆ, ಈ ಬಾರಿ ಕೋವಿಡ್​ ಪಿಡುಗು ಹಿನ್ನೆಲೆಯಲ್ಲಿ ಬಿಎಂಸಿ ವತಿಯಿಂದ ಕೃತಕ ಕೊಳಗಳನ್ನು ನಿರ್ಮಿಸಿ, ಅವುಗಳಲ್ಲೇ ಮೂರ್ತಿಗಳನ್ನು ವಿಸರ್ಜಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪೆಂಡಾಲ್​ಗಳ ಗಣೇಶ ಮೂರ್ತಿಯ ಎತ್ತರ ಕಡಿಮೆಯಾಗಲು ಇದೂ ಒಂದು ಕಾರಣ ಎನ್ನಲಾಗಿದೆ.
ಡಿಕೆಶಿ ಸಮ್ಮುಖದಲ್ಲೇ ಕರೊನಾ ನಿಯಮ ಗಾಳಿಗೆ ತೂರಿದ ‘ಕೈ’ ಪಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
