ಬೆಂಗಳೂರು : ನನಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವುದು ಇಷ್ಟವಿರಲಿಲ್ಲ. ನನಗೆ ತಿಳಿಯದೆ ಆರ್​ಸಿಬಿ ಜೊತೆಗಿನ ಒಪ್ಪಂದದ ಪತ್ರಕ್ಕೆ ಅಂದಿನ ಐಪಿಎಲ್ ಅಧ್ಯಕ್ಷ ಲಲಿತ್ ಮೋದಿ ಸಹಿ ಹಾಕಿಸಿಕೊಂಡಿದ್ದರು. ಕೇಳಿದ್ದಕ್ಕೆ ನನ್ನ ವೃತ್ತಿ ಜೀವನವನ್ನು ಮುಗಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಪ್ರವೀಣ್ ಕುಮಾರ್​​ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಂದ ಶಮಿಗೆ ಅರ್ಜುನ ಪ್ರಶಸ್ತಿ ಪ್ರದಾನ
ಐಪಿಎಲ್​ನ ಅಂದಿನ ಅಧ್ಯಕ್ಷ ಲಲಿತ್ ಮೋದಿ ಆರ್​ಸಿಬಿ ಪರ ಆಡದಿದ್ದರೆ ನಿನ್ನ ವೃತ್ತಿಜೀವನನ್ನೇ ಕೊನೆಗೊಳಿಸುವುದಾಗಿ ಕರೆ ಮಾಡಿ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2008 ರ ಚೊಚ್ಚಲ ಐಪಿಎಲ್​ನಲ್ಲಿ ಪ್ರವೀಣ್ ಕುಮಾರ್ ಆರ್​ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅಂದು ತಾನು ಆರ್​ಸಿಬಿ ತಂಡದ ಪರ ಕಣಕ್ಕಿಳಿಯಲು ಇಷ್ಟಪಟ್ಟಿರಲಿಲ್ಲ. ನನ್ನ ಮೊದಲ ಆಯ್ಕೆ ಡೆಲ್ಲಿ ಡೇರ್​ ಡೆವಿಲ್ಸ್​ ತಂಡವಾಗಿತ್ತು. ನನಗೆ ಬೆದರಿಕೆಯೊಡ್ಡಿ ಆರ್​ಸಿಬಿ ಪರ ಕಣಕ್ಕಿಳಿಯುವಂತೆ ಮಾಡಿದ್ದರು ಎಂದು ಪ್ರವೀಣ್​ ಕುಮಾರ್ ಆರೋಪ ಮಾಡಿದ್ದಾರೆ.
ಬೆಂಗಳೂರು ನನ್ನ ಊರಿನಿಂದ ಸಾಕಷ್ಟು ದೂರಲ್ಲಿತ್ತು. ಅಲ್ಲಿನ ಆಹಾರ ಕೂಡ ನನಗೆ ಇಷ್ಟವಾಗುತ್ತಿರಲಿಲ್ಲ. ಇದೇ ವೇಳೆ ದೆಹಲಿ ನನ್ನ ಊರಾದ ಮೀರತ್​ಗೆ ತುಂಬಾ ಹತ್ತಿರದಲ್ಲಿತ್ತು. ಮನೆಗೆ ಹೋಗಲು ಸಹಾ ಅನುಕೂಲವಾಗುತ್ತಿತ್ತು. ಹೀಗಾಗಿ ನಾನು ಆರ್​ಸಿಬಿ ಪರ ಆಡುವುದಿಲ್ಲ ಎಂದು ತಿಳಿಸಿದ್ದೆ ಎಂದಿದ್ದಾರೆ.ಅನಾಮಿಕ ವ್ಯಕ್ತಿಯೊಬ್ಬರು ನನ್ನಿಂದ ಪೇಪರ್​ ಒಂದಕ್ಕೆ ಸಹಿ ಹಾಕಿಸಿಕೊಂಡಿದ್ದರು.
ಇದು ಆರ್​​ಸಿಬಿ ಜೊತೆಗಿನ ಒಪ್ಪಂದ ಪತ್ರವೆಂದು ಸಹಿ ಹಾಕಿದ ಬಳಿಕವಷ್ಟೇ ನನಗೆ ತಿಳಿಯುತು. ಏಕೆಂದರೆ ನನಗೆ ಇಂಗ್ಲಿಷ್ ಓದಲು ಬರುತ್ತಿರಲಿಲ್ಲ. ಆದರೂ ನಾನು ಡೆಲ್ಲಿ ತಂಡದ ಪರ ಆಡುತ್ತೇನೆ ಎಂದು ತಿಳಿಸಿದ್ದೆ.
ಆರ್​ಸಿಬಿ ಪರ 3 ಸೀಸನ್​ಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್ 47 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 41 ವಿಕೆಟ್​ಗಳನ್ನು ಕಬಳಿಸಿದ್ದಾರೆ. 2010 ರಲ್ಲಿ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಆರ್​ಸಿಬಿ ಪರ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದರು. ಪ್ರವೀಣ್​ ಕುಮಾರ್ ಅವರ ಈ ಗಂಭೀರ ಹೇಳಿಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ರಶ್ಮಿಕಾ ಮಂದಣ್ಣ,ವಿಜಯ್ ದೇವರಕೊಂಡ ನಿಶ್ಚಿತಾರ್ಥ ಫಿಕ್ಸ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 8 =
Remember me
