ಚೆನ್ನೈ:ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್​ಮೆಂಟ್ ಆಫ್ ಲೇಬರ್ ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ನಡೆಸಿದ ಪ್ರಯತ್ನಗಳಿಗಾಗಿ ನೀಡುವ 2023ನೇ ಸಾಲಿನ ‘ಇಕ್ಬಾಲ್ ಮಸಿ ಪುರಸ್ಕಾರ’ಕ್ಕೆ ಚೆನ್ನೈನ ಲಲಿತಾ ನಟರಾಜನ್ ಭಾಜನರಾಗಿದ್ದಾರೆ. ಮೇ 30ರಂದು ಚೆನ್ನೈನ ಯು.ಎಸ್. ಕಾನ್ಸಲೇಟ್ ಜನರಲ್​ನಲ್ಲಿ ನಡೆದ ಸಮಾರಂಭದಲ್ಲಿ ಯು.ಎಸ್. ಕಾನ್ಸಲ್ ಜನರಲ್ ಜುಡಿತ್ ರೇವಿನ್ ಪ್ರಶಸ್ತಿ ಪ್ರದಾನ ಮಾಡಿದರು.
ಇಕ್ಬಾಲ್ ಮಸಿ ಪ್ರಶಸ್ತಿ ಸ್ವೀಕರಿಸಿದ ಲಲಿತಾ ನಟರಾಜನ್ ಮಾತನಾಡುತ್ತಾ, ಈ ಪ್ರಶಸ್ತಿಯು ನನ್ನನ್ನು ಮಕ್ಕಳ ಮತ್ತಷ್ಟು ಕಾರ್ಯಗಳಿಗೆ ತೊಡಗಿಕೊಳ್ಳಲು ಸ್ಫೂರ್ತಿ ನೀಡಿದೆ. ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯೆಯಾಗಿ ಹಲವಾರು ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು, ನ್ಯಾಯಾಂಗ ಮತ್ತು ಪೊಲೀಸರೊಂದಿಗೆ ಕಾರ್ಯನಿರ್ವಹಿಸಿ ಮಕ್ಕಳ ಹಕ್ಕುಗಳ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದೇನೆ. ಪೊಲೀಸರಿಂದ ಎಫ್​ಐಆರ್ ನೋಂದಣಿಯಾಗುವುದನ್ನು ಖಚಿತ ಪಡಿಸಿಕೊಳ್ಳಲು ಮಾವನ ಹಕ್ಕುಗಳ ಸಂಸ್ಥೆಗಳೊಂದಿಗೆ ಓಡಾಡುತ್ತೇನೆ. ಈ ಮೂಲಕ ಅಪರಾಧ ಗುರುತಿಸುವುದನ್ನು ದೃಢಪಡಿಸಿಕೊಳ್ಳುತ್ತೇನೆ. ಹಲವಾರು ವರ್ಷಗಳಿಂದ ನಡೆಸಿದ ಹೋರಾಟದಿಂದಾಗಿ ಮಾನವ ಕಳ್ಳಸಾಗಣೆ ಮತ್ತು ಜೀತದಿಂದ ಮುಕ್ತರಾದ ಮಕ್ಕಳು ನೆಮ್ಮದಿಯಿಂದಿರಲಿ ಎಂದು ಹಾರೈಸುತ್ತೇನೆ’ ಎಂದು ಹೇಳಿದರು.
ಇದನ್ನೂ ಓದಿ:ಧಾರವಾಡ ಕೃಷಿ ವಿಶ್ವ ವಿದ್ಯಾಲಯದ 36ನೇ ಘಟಿಕೋತ್ಸವ | ವೃಕ್ಷಮಾತೆ ತುಳಸಿಗೌಡ, ಸಂಶೋಧಕ ಅಬ್ದುಲ್‌ ಖಾದರ್​ಗೆ ಗೌರವ ಡಾಕ್ಟರೇಟ್ ಪ್ರದಾನ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯು.ಎಸ್. ಕಾನ್ಸುಲ್ ಜನರಲ್ ಜುಡಿತ್ ರೇವಿನ್ ಮಾತನಾಡಿ, ಯು.ಎಸ್.ಸರ್ಕಾರ ಮತ್ತು ಅಮೇರಿಕದ ಜನರಿಗೆ ಜೀತ ಪದ್ಧತಿಯ ವಿರುದ್ಧದ ಹೋರಾಟ ಅತ್ಯಂತ ಪ್ರಮುಖವಾಗಿದೆ. ಇಂದು ನಮಗೆ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್​ಮೆಂಟ್ ಆಫ್ ಲೇಬರ್​ನ 2023 ಇಕ್ಬಾಲ್ ಮಸಿ ಪುರಸ್ಕಾರವನ್ನು ಈ ಕ್ಷೇತ್ರದ ನಿಜವಾದ ಚಾಂಪಿಯನ್ ಲಲಿತಾ ನಟರಾಜನ್ ಅವರಿಗೆ ಕೊಡುತ್ತಿರುವುದು ಹೆಮ್ಮೆಯ ವಿಷಯ. ಅವರ ದಿಟ್ಟ ಪ್ರಯತ್ನಗಳು ಭಾರತದ ಯುವಜನರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಪಡೆಯುವಲ್ಲಿ ನೆರವಾಗಿವೆ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಅವರು ತಮಿಳುನಾಡಿನ ಹಲವಾರು ಕೈಗಾರಿಕಾ ವಲಯಗಳಲ್ಲಿ ಜೀತಕ್ಕೊಳಗಾಗಿದ್ದ ಮಕ್ಕಳನ್ನು ರಕ್ಷಿಸಿದ್ದಾರೆ. ನೂರಾರು ಭಾರತೀಯ ಮಕ್ಕಳ ಜೀವನವನ್ನು ಬದಲಿಸುವಲ್ಲಿ ಲಲಿತಾ ನಟರಾಜನ್‌ ಅವರ ಪರಿಶ್ರಮವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ’ ಎಂದು ಹೇಳಿದರು.
ಲಲಿತಾ ನಟರಾಜನ್ ಅವರು ಬಾಲಕಾರ್ಮಿಕ ಪದ್ಧತಿಯಲ್ಲಿ ಹಕ್ಕು-ಆಧಾರಿತ ವಿಧಾನಗಳನ್ನು ಅಳವಡಿಸಲು ವಕೀಲೆಯಾಗಿ ಮತ್ತು ಹೋರಾಟಗಾರ್ತಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿ ಬಾಲಕಾರ್ಮಿಕರ ಶೋಷಣೆಗೆ ಅಂತ್ಯ ಹಾಡಲು, ಮಕ್ಕಳ ಕಳ್ಳಸಾಗಣೆಗೆ ಒಳಗಾದವರನ್ನು ಹಾಗೂ ಜೀತಕ್ಕಿದ್ದವರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಮರು ಸೇರ್ಪಡೆ ಮಾಡಲು ಇಂದಿಗೂ ಶ್ರಮಿಸುತ್ತಿದ್ದಾರೆ.
ತಮಿಳುನಾಡು ಸರ್ಕಾರದ ಸಾಮಾಜಿಕ ರಕ್ಷಣೆ ಇಲಾಖೆಯ ಮಕ್ಕಳ ಕಲ್ಯಾಣ ಸಮಿತಿ (ಉತ್ತರ ವಲಯ) ಸದಸ್ಯರಾಗಿ ಲಲಿತಾ ನಟರಾಜನ್ ಬಾಲಕಾರ್ಮಿಕ ಕಾಯ್ದೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ(ಪೊಕ್ಸೊ) ಅಡಿಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಪರಿಹಾರ ದೊರೆಯುವಂತೆ ಮಾಡಿದ್ದಾರೆ. ಬಾಲಕಾರ್ಮಿಕರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಿರುವುದಲ್ಲದೆ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆಗೆ ಒಳಗಾದವರಿಗೆ ಕಾನೂನು ಮತ್ತು ಕೌನ್ಸೆಲ್ಲಿಂಗ್ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ:ಕನ್ನಡದ ಬೆಳವಣಿಗೆಗೆ ಇಂಗ್ಲಿಷ್ ಮಾಧ್ಯಮ ಅಗತ್ಯ: ಡಾ. ಹಂ.ಪ. ನಾಗರಾಜಯ್ಯ
ಇಕ್ಬಾಲ್ ಮಸಿ ಪುರಸ್ಕಾರವು ಯು.ಎಸ್. ಕಾಂಗ್ರೆಸ್ ನೀಡುವ ಪ್ರಶಸ್ತಿಯಾಗಿದೆ. ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಸಾಧಾರಣ ಕೊಡುಗೆ ನೀಡಿದವರನ್ನು ಗೌರವಿಸಲು ಈ ಪ್ರಶಸ್ತಿಯನ್ನು 2008ರಲ್ಲಿ ಸೆಕ್ರೆಟರಿ ಆಫ್ ಲೇಬರ್ ಪ್ರಾರಂಭಿಸಿದರು.
ಪಾಕಿಸ್ತಾನದ ಇಕ್ಬಾಲ್ ಮಸಿ, 4 ವರ್ಷದ ಮಗುವಾಗಿದ್ದಾಗ ಕಾರ್ಪೆಟ್‌ ನೇಕಾರನಾಗಿ ಜೀತಕ್ಕೆಮಾರಾಟವಾಗಿದ್ದ. ತನ್ನ 10ನೇ ವಯಸ್ಸಿನಲ್ಲಿ ಅದರಿಂದ ಪಾರಾಗಿ ಮಕ್ಕಳ ಶೋಷಣೆಯ ಬಗ್ಗೆ ದನಿಯೆತ್ತಿದ. ಅದಕ್ಕಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅವನನ್ನು ಹುಡುಕಿಕೊಂಡು ಬಂದವು. ಆದರೆ ಆತ ಹನ್ನೆರಡು ವರ್ಷದವನಿದ್ದಾಗ 1995ರಲ್ಲಿ ದುರದೃಷ್ಟಕರ ರೀತಿಯಲ್ಲಿ ಕೊನೆಯುಸಿರೆಳೆದ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
