ಪಟನಾ:ರಾಮವಿಲಾಸ್ ಪಾಸ್ವಾನ್ ಅವರ ರಾಜಕೀಯ ಬದುಕೇ ಹಾಗೆ. ಅಧಿಕಾರ ಕೇಂದ್ರಿತವಾಗಿಯೇ ಅವರ ಎಲ್ಲ ನಡೆಗಳೂ ಇದ್ದವು. ಆದರೆ, ಆ ನಡೆಯಲ್ಲೂ ಅವರು ಸೋಲಿನ ರುಚಿ ಕಂಡಿದ್ದರು. ಆ ಸೋಲು ಅವರಿಗೆ ಸಿಕ್ಕಿದ್ದು ಲಾಲು ಪ್ರಸಾದ್​ ಅವರ ಸ್ನೇಹದಿಂದ!
ಲಾಲು ಪ್ರಸಾದ್ ಅವರನ್ನು ಭ್ರಷ್ಟ ಎನ್ನುವ ಮೂಲಕ ಅವರಿಂದ ಅಂತರ ಕಾಯ್ದುಕೊಂಡಿದ್ದ ಪಾಸ್ವಾನ್, 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಯುಪಿಎ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಜೊತೆಗೆ ಮೈತ್ರಿ ಕಡಿದುಕೊಂಡು, ಆರ್‌ಜೆಡಿ ಮುಖ್ಯಸ್ಥನ ಜತೆ ಸ್ನೇಹ ಬೆಳೆಸಿ, ಹೊಸ ಮೈತ್ರಿಗೆ ಮುನ್ನಡಿ ಬರೆದಿದ್ದರು.
ಇದನ್ನೂ ಓದಿ:ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಿಧನ
ಆನಂತರ ಲಾಲು-ಪಾಸ್ವಾನ್ ಜೋಡಿ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆ ಸೇರಿ ‘ನಾಲ್ಕನೇ ರಂಗ’ ಘೋಷಿಸಿದ್ದರು. ಈ ನಡುವೆ ಹಾಜಿಪುರದಿಂದ ಸ್ಪರ್ಧಿಸಿದ್ದ ಪಾಸ್ವಾನ್, ತಮ್ಮ 33 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಜನತಾದಳದ ರಾಮ್ ಸುಂದರ್ ದಾಸ್ ವಿರುದ್ಧ ಸೋಲನುಭವಿಸಿದ್ದರು.
ಇದನ್ನೂ ಓದಿ:ಏನಾಗಿತ್ತು ಕೇಂದ್ರ ಸಚಿವ ರಾಮ್ ವಿಲಾಸ್​ ಪಾಸ್ವಾನ್​ಗೆ? ಕೇಂದ್ರಕ್ಕಿದು ಎರಡನೇ ಆಘಾತ
15ನೇ ಲೋಕಸಭಾ ಚುನಾವಣೆಯಲ್ಲಿ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷ ಖಾತೆ ತೆರಯಲು ವಿಫಲವಾಗುತ್ತದೆ. ಪಾಸ್ವಾನ್ ಅವರ ಮೈತ್ರಿಕೂಟದ ಯಾದವ್ ಹಾಗೂ ಅವರ ಪಕ್ಷ ಸಹ ಕೇವಲ 4 ಸ್ಥಾನಗಳಿಗೆ ಸೀಮಿತವಾಗುವ ಮೂಲಕ ಭಾರಿ ಹಿನ್ನಡೆ ಅನುಭವಿಸುತ್ತದೆ. ಇನ್ನು 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದ ಹಾಜಿಪುರ ಕ್ಷೇತ್ರದಿಂದ ಪಾಸ್ವಾನ್ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಸೂತ್ರ ಹಿಡಿದರು. ಅವರ ಪುತ್ರ ಚಿರಾಗ್​ ಪಾಸ್ವಾನ್​ ಜಮುಯಿ ಕ್ಷೇತ್ರದಿಂದ ಆರಿಸಿ ಬರುವಲ್ಲಿ ಸಫಲರಾದರು.
ಆರು ಪ್ರಧಾನಿಗಳ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದೂ ದಾಖಲೆ, ಗೆಲುವಿನ ಅಂತರದಲ್ಲೂ ಗಿನ್ನೆಸ್ ದಾಖಲೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
