ರಾಂಚಿ:ಬಿಹಾರದಲ್ಲಿ ಎನ್​ಡಿಎ ಮುನ್ನುಗ್ಗುತ್ತಿದ್ದು, ಮಗಾಘಟ್​ಬಂಧನ್​ ಹಿನ್ನಡೆ ಸಾಧಿಸಿದೆ.ಆಸ್ಪತ್ರೆಯಲ್ಲಿದ್ದುಕೊಂಡು ಬೆಳಗ್ಗೆಯಿಂದಲೇ ಟಿವಿಯಲ್ಲಿ ಚುನಾವಣಾ ಫಲಿತಾಂಶ ವೀಕ್ಷಣೆ ಮಾಡುತ್ತಿದ್ದ ರಾಷ್ಟ್ರೀಯ ಜನತಾ ದಳ್​ (ಆರ್​ಜೆಡಿ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್​, ಎನ್​ಡಿಎ ಮುನ್ನಡೆಯೆಂಬ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಟಿವಿ ಸ್ವಿಚ್​ ಆಫ್​ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿಸ್ಪರ್ಧಿಗಳು ಮುನ್ನಡೆಯಲ್ಲಿದ್ದಾರೆ ಎಂಬ ಸುದ್ದಿಯಿಂದ ಕಿರಿಕಿರಿಗೆ ಒಳಗಾದ ಲಾಲೂ ಪ್ರಸಾದ್ ಯಾದವ್​ ಅವರು, ಟಿವಿ ಆಫ್​ ಮಾಡಿ, ಆಸ್ಪತ್ರೆಯ ಲಾನ್​ನಲ್ಲಿ ಸೂರ್ಯನಿಗೆ ಮೈಯೊಡ್ಡಿ ಕುಳಿತಿದ್ದಾರೆ ಎನ್ನಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಮಹಾಘಟ್​ಬಂಧನ್​ದ ಮುಖ್ಯಮಂತ್ರಿ ಅಭ್ಯರ್ಥಿ ಲಾಲೂ ಪ್ರಸಾದ್ ಯಾದವ್​ ಅವರ ಪುತ್ರ ತೇಜಸ್ವಿ ಯಾದವ್​ ಆಗಿದ್ದರು. ಈ ಬಾರಿ ಎನ್​ಡಿಎ ಮೈತ್ರಿಕೂಟವನ್ನು ಸೋಲಿಸಿಯೇ ತೀರುತ್ತೇವೆ ಎಂದು ಹೇಳಿದ್ದರು. ಸದ್ಯದ ಎಣಿಕೆಯ ಅನ್ವಯ ಬಿಹಾರದಲ್ಲಿ ಎನ್​ಡಿಎ ಅಲೆಯಿದ್ದು, ಸಂಜೆಯವರೆಗೂ ಎಣಿಕೆ ಮುಂದುವರಿಯಲಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + three =
Remember me
