ನವದೆಹಲಿ :ಬಿಹಾರದ ಮಾಜಿ ಸಿಎಂ ಮತ್ತು ರಾಷ್ಟ್ರೀಯ ಜನತಾದಳ(ಆರ್​ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಲಾಲು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ದೆಹಲಿಯ ಐಷಾರಾಮಿ ಬಡಾವಣೆಯ ಪ್ರಾಪರ್ಟಿಯೊಂದನ್ನು ಲಂಚವಾಗಿ ನೀಡಲಾಗಿತ್ತು ಎಂಬ ಆರೋಪದ ತನಿಖೆ ನಡೆಯುತ್ತಿತ್ತು.
ರಿಯಲ್ ಎಸ್ಟೇಟ್ ಡೆವಲಪರ್ ಡಿಎಲ್ಎಫ್ ಗ್ರೂಪ್​​ ಮುಂಬೈನ ಬಾಂದ್ರಾದಲ್ಲಿನ ರೈಲ್ವೆ ಭೂಮಿ ಮತ್ತು ನವದೆಹಲಿಯ ರೈಲ್ವೆ ನಿಲ್ದಾಣದ ಅಪ್​ಗ್ರೆಡೇಷನ್ ಯೋಜನೆಗಳನ್ನು ಪಡೆಯುವ ಉದ್ದೇಶ ಹೊಂದಿತ್ತು. ಇದೇ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ನ್ಯೂ ಫ್ರೆಂಡ್ಸ್​​ ಕಾಲೊನಿಯಲ್ಲಿನ 30 ಕೋಟಿ ರೂ. ಬೆಲೆಯ ಡಿಎಲ್​​ಎಫ್​ ಪ್ರಾಪರ್ಟಿಯನ್ನು ಲಾಲು ಕುಟುಂಬದವರು ಕಂಪೆನಿಯೊಂದನ್ನು ಕೇವಲ 4 ಲಕ್ಷ ರೂ.ಗಳ ಶೇರ್​ಗಳ ವರ್ಗಾವಣೆ ಮಾಡಿ ಕೊಳ್ಳುವ ಮೂಲಕ ಪಡೆದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಈ ಫೋಟೋ ಕ್ಲಿಕ್ಕಿಸಿದ್ದ ನೇತ್ರರಾಜು ಇನ್ನಿಲ್ಲ, ಬದುಕಿದ್ದಾಗ ತೆಗೆದ ಅದ್ಭುತ ಚಿತ್ರಗಳು ಇಲ್ಲಿವೆ
ಮೂಲಗಳ ಪ್ರಕಾರ, ಸಿಬಿಐನ ಆರ್ಥಿಕ ಅಪರಾಧ ಶಾಖೆ, 2018 ರ ಜನವರಿಯಲ್ಲಿ, ಭ್ರಷ್ಟಾಚಾರದ ಆರೋಪದ ಮೇಲೆ ಲಾಲು ಮತ್ತು ಡಿಎಲ್ಎಫ್ ಗ್ರೂಪ್ ವಿರುದ್ಧ ಪ್ರಾಥಮಿಕ ತನಿಖೆ ಆರಂಭಿಸಿತ್ತು. ಆದರೆ ಎರಡು ವರ್ಷಗಳ ತನಿಖೆಯ ನಂತರ ಆರೋಪಗಳಿಗೆ ಪೂರಕವಾದ ಕೇಸ್​ ಇಲ್ಲದ್ದರಿಂದ ಪ್ರಾಥಮಿಕ ತನಿಖೆಯನ್ನು ಮುಚ್ಚಲಾಗಿದೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ಈ ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆಯೂ ಪ್ರತ್ಯೇಕ ತನಿಖೆಯನ್ನು ಆರಂಭಿಸಿತ್ತು ಎನ್ನಲಾಗಿದೆ. ಬಿಹಾರದ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳಿಗಿಂತ ಹೆಚ್ಚು ಜೈಲುವಾಸ ಅನುಭವಿಸಿದ ಲಾಲು, ಕಳೆದ ಏಪ್ರಿಲ್​​ನಿಂದ ಜಾಮೀನಿನಲ್ಲಿದ್ದಾರೆ.(ಏಜೆನ್ಸೀಸ್)
ರೇಷನ್​ ನಿರಾಕರಿಸಿದರೆ 1967 ಸಹಾಯವಾಣಿಗೆ ದೂರು ನೀಡಿ

VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ!

ನಾರದ ಲಂಚ ಪ್ರಕರಣ : ಟಿಎಂಸಿ ನಾಯಕರಿಗೆ ಗೃಹಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twelve =
Remember me
