ರಾಂಚಿ :ಬಿಹಾರದ ಮೇವು ಹಗರಣದಲ್ಲಿ ಶಿಕ್ಷೆಗೊಳಗಾಗಿರುವ ಆರ್​ಜೆಡಿ ನಾಯಕ ಲಾಲು ಪ್ರಸಾದ್ ಅವರ ಆರೋಗ್ಯಸ್ಥಿತಿ ದಿನೇದಿನೆ ಕ್ಷೀಣಿಸುತ್ತಿದೆಯೆ? ಹೌದು ಎನ್ನುತ್ತಿದ್ದಾರೆ ರಾಜೇಂದ್ರ ಇನ್​ಸ್ಟಿಟ್ಯೂಟ್ ಆಫ್​ ಮೆಡಿಕಲ್ ಸೈನ್ಸಸ್​(ರಿಮ್ಸ್ )ನ ಡಾಕ್ಟರ್ ಉಮೇಶ್ ಪ್ರಸಾದ್. ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಡಾಕ್ಟರ್ ಹೇಳಿಕೆ ಮಹತ್ವ ಪಡೆದಿದೆ.
ಲಾಲು ಪ್ರಸಾದ್ ಅವರ ಕಿಡ್ನಿ ಸಮಸ್ಯೆ ಹೆಚ್ಚಾಗಿದ್ದು, ಶೇಕಡ 35 ಕೆಲಸ ಮಾಡುತ್ತಿದ್ದ ಎರಡೂ ಕಿಡ್ನಿಗಳ ಸಾಮರ್ಥ್ಯ ಈಗ ಶೇಕಡ 25ಕ್ಕೆ ಇಳಿದಿದೆ. ಹೀಗೆಯೇ ಮುಂದುವರಿದರೆ ಅವರು ಡಯಾಲಿಸಿಸ್​ಗೆ ಒಳಗಾಗಬೇಕಾಗಬಹುದು. ಕಿಡ್ನಿ ಸಮಸ್ಯೆ ಮೂರನೇ ಹಂತ ತಲುಪಿದ ವೇಳೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ವರ್ಷಗಳಿಂದ ರಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾಕ್ಟರ್ ತಿಳಿಸಿದ್ದಾರೆ.
ಇದನ್ನೂ ಓದಿ:Web Exclusive | ಮಂಗಳೂರಲ್ಲಿ ದೇಶದ ಮೊದಲ ಡೆಂಟಲ್ ರಿಸರ್ಚ್ ಲ್ಯಾಬ್; 2022ರಲ್ಲಿ ಕಾರ್ಯಾರಂಭ ನಿರೀಕ್ಷೆ..
ಕಳೆದ ಸೆಪ್ಟೆಂಬರ್​ನಲ್ಲಿ ಅವರನ್ನು ರಿಮ್ಸ್ ನಿರ್ದೇಶಕರ ಬಂಗಲೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಅವರು ಬಿಜೆಪಿ ಶಾಸಕರಿಗೆ ಫೋನ್ ಕರೆ ಮಾಡಿ ವಿವಾದ ಉಂಟುಮಾಡಿದ ಕಾರಣ ಮತ್ತೆ ಅವರನ್ನು ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಕಳೆದ ವಾರ ಸಿಬಿಐ ಕೂಡ ಜಾರ್ಖಂಡ್ ಹೈಕೋರ್ಟ್​ಗೆ ಮನವಿ ಸಲ್ಲಿಸಿದ್ದು, ಲಾಲು ಪ್ರಸಾದ್ ಅವರಿಗೆ ಜೈಲಿನಲ್ಲೇ ಇನ್ನು ಚಿಕಿತ್ಸೆ ಮುಂದುವರಿಸಬಹುದು. ಆದ್ದರಿಂದ ಅವರನ್ನು ಬಿರ್ಸಾ ಮುಂಡಾ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸುವಂತೆ ಕೋರಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಸರ್ದಾರ್ ಪಟೇಲ್ ಸ್ಮೃತಿದಿನ – ಪ್ರಧಾನಿ ಸಹಿತ ನಾಡಿನ ಜನರ ಗೌರವಾರ್ಪಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eighteen =
Remember me
