ಅಯೋಧ್ಯೆ:ಶ್ರೀ ರಾಮ ಮಂದಿರ ನಿರ್ಮಾಣ ಕಾಮಗಾರಿ ಶುರುವಾದ ನಂತರ ಅಯೋಧ್ಯೆಯಲ್ಲಿ ಭೂ ಖರೀದಿ ಹೆಚ್ಚಳ ಆಗಿದ್ದು, ಕಳೆದ ಹಣಕಾಸು ವರ್ಷದಲ್ಲಿ ಶೇ. 33ರಷ್ಟು ಏರಿಕೆ ಕಂಡಿದೆ. 2020-21ರಲ್ಲಿ ಭೂ ನೋಂದಣಿ ಬಾಬ್ತಿನಲ್ಲಿ 7,602 ಕೋಟಿ ರೂ. ಸಂಗ್ರಹ ಆಗಿದ್ದರೆ. 2021-22ರಲ್ಲಿ ಈ ಮೊತ್ತ 10,141 ಕೋಟಿ ರೂ.ಗೆ ಹೆಚ್ಚಳ (ಶೇ. 33) ಕಂಡಿದೆ ಎಂದು ಉತ್ತರ ಪ್ರದೇಶ ನೋಂದಣಿ ಮತ್ತು ಮುದ್ರಾಂಕ ವಿಭಾಗ ತಿಳಿಸಿದೆ.
ಸುಪ್ರೀಂಕೋರ್ಟ್ ತೀರ್ಪಿನಂತೆ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿದಂತೆ ಅಯೋಧ್ಯೆ ದೇಶದ ಪ್ರಮುಖ ಪ್ರವಾಸಿತಾಣವಾಗಿ ರೂಪುಗೊಳ್ಳುತ್ತಿದೆ. ಹೋಟೆಲ್ ಇನ್ನಿತರ ಆತಿಥ್ಯ ಮೂಲಸೌಕರ್ಯಕ್ಕಾಗಿ ಭೂ ಖರೀದಿ ಭರಾಟೆಯಿಂದ ನಡೆಯುತ್ತಿದೆ. 2021-22ರಲ್ಲಿ ನೋಂದಣಿ ಮುದ್ರಾಂಕ ಶುಲ್ಕದಲ್ಲಿ ಶೇ. 20ರಷ್ಟು ಏರಿಕೆ ಆಗಿದ್ದು, ನಿಗದಿ ಪಡಿಸಿದ್ದ ಗುರಿಯಲ್ಲಿ ಶೇ. 80ರಷ್ಟು ಸಾಧನೆ ಆಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆ ಮಾತ್ರವಲ್ಲದೆ ಪ್ರಮುಖ ನಗರಗಳಲ್ಲಿ ಕೈಗಾರಿಕಾ ಪ್ರದೇಶ, ಜೆವಾರ್ ವಿಮಾನ ನಿಲ್ದಾಣ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆದರೆ, ಕರೊನಾ ಸಾಂಕ್ರಮಿಕದ ಕಾಲದಲ್ಲಿ ನೋಂದಣಿ ಸಂಪೂರ್ಣವಾಗಿ ಇಲ್ಲವಾಗಿತ್ತು. ಆದರೀಗ ನೋಯ್ಡಾ, ಗ್ರೇಟರ್ ನೋಯ್ಡಾಗಳಲ್ಲಿ ಭೂ ನೋಂದಣಿ ಚುರುಕುಗೊಂಡಿದೆ ಎಂದಿದ್ದಾರೆ. 2019-20ರಲ್ಲಿ ಇಡೀ ರಾಜ್ಯದ ನೋಂದಣಿ ಪ್ರಮಾಣ ಶೇ. 2.2 ಪ್ರಗತಿ ಇದ್ದರೆ, 2020-21ರಲ್ಲಿ ಇದು ಶೇ. 2.9ಕ್ಕೆ ಏರಿತ್ತು. 2021-22ರಲ್ಲಿ ಇದು ಶೇ. 20ಕ್ಕೆ ವೃದ್ಧಿಸಿದೆ. ಇದರಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮುದ್ರಾಂಕ ಶುಲ್ಕವು 20 ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದೆ.
ಸಾಕು ನಾಯಿಗೆ ಸೀಮಂತ ಮಾಡಿದ ರಂಗಭೂಮಿ ಕಲಾವಿದೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 5 =
Remember me
