ಬೆಂಗಳೂರು:ಕರೊನಾದಿಂದಾಗಿ ಸಂಕಷ್ಟದಲ್ಲಿದ್ದ ಕುಟುಂಬವೊಂದು ಮನೆ ಬಾಡಿಗೆ ಪಾವತಿಸಿದ್ದಕ್ಕೆ ಮನೆ ಮಾಲೀಕ ಬಂದೂಕಿನಿಂದ ಗುಂಡು ಹಾರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ. ಕೂಡಲೇ ಮನೆ ಖಾಲಿ ಮಾಡಬೇಕು ಇಲ್ಲವೇ ಬಾಡಿಗೆ ಮೊತ್ತ ಪಾವತಿಸಬೇಕು ಎಂದು ಒತ್ತಾಯಿಸಿದ್ದಾನೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ಈ ಘಟನೆ ವರದಿಯಾಗಿದೆ. ಮನೆ ಮಾಲೀಕ ಮನೆಯೆದುರು ಬಂದು ಗುಂಡು ಹಾರಿಸಿದ್ದನ್ನು ಬಾಡಿಗೆಗಿದ್ದವರು ಚಿತ್ರೀಕರಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ;ವೃದ್ಧನ ಕರೊನಾ ಚಿಕಿತ್ಸೆಗೆ ಖರ್ಚಾದ ಮೊತ್ತದಿಂದ ಆಸ್ಪತ್ರೆಯನ್ನೇ ಕಟ್ಟಿಸಬಹುದಿತ್ತು…!
ಕಳೆ ಏಪ್ರಿಲ್​ನಿಂದ ಬಾಡಿಗೆಗಿದ್ದವರು ಬಾಡಿಗೆ ಮೊತ್ತ ಪಾವತಿಸಿರಲಿಲ್ಲ ಎನ್ನಲಾಗಿದೆ. ಮುಂಗಡ ನೀಡಿದ್ದ ಹಣದಲ್ಲಿ ಈ ಮೊತ್ತವನ್ನು ಕಳೆದುಕೊಂಡು ಉಳಿದ ಹಣ ನೀಡುವಂತೆ ಮನೆ ಮಾಲೀಕ ಆಗ್ರಹಿಸಿದ್ದಾನೆ. ಬಾಡಿಗೆ ಹಣದ ವಿಚಾರವಾಗಿ ಎರಡೂ ಕಡೆಯವರ ನಡುವೆ ಭಾರಿ ವಾಗ್ವಾದ ನಡೆದಿದೆ. ಬಳಿಕ ಮನೆ ಮಾಲೀಕ ಬಂದೂಕಿನೊಂದಿಗೆ ಬಂದು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿದ್ದಾನೆ.
ಆತಂಕಕ್ಕೊಳಗಾದ ಮನೆಯವರು ಮನೆ ಮಾಲೀಕನ ಕೃತ್ಯವನ್ನು ಮೊಬೈಲ್​ ಫೋನ್​ನಲ್ಲಿ ಸೆರೆ ಹಿಡಿದಿದ್ದಾರೆ. ಭಾರಿ ಅರಚಾಟ, ಬೈದಾಟ ನಡೆದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ;ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಬಾಡಿಗೆಗಿದ್ದವರು ತನ್ನ ಮೇಲೆ ಕುಡುಗೋಲಿನಿಂದ ಹಲ್ಲೆಗೆ ಮುಂದಾದ ಕಾರಣ ಆತ್ಮರಕ್ಷಣೆಗಾಗಿ ಬಂದೂಕಿನಿಂದ ಗುಂಡು ಹಾರಿಸಿದ್ದೇನೆ ಎನ್ನುವುದು ಮನೆ ಮಾಲೀಕನ ವಾದ. ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.ಕರೊನಾ ಸಂಕಷ್ಟದ ಸಮಯದಲ್ಲಿ ಮನೆ ಬಾಡಿಗೆಗೆ ಒತ್ತಾಯಿಸದಂತೆ, ಮನೆ ಖಾಲಿ ಮಾಡಿಸದಂತೆ ಸರ್ಕಾರ ನಿರ್ದೇಶನವನ್ನೇ ನೀಡಿತ್ತು. ಆದರೆ, ದೇಶದ ವಿವಿಧೆಡೆ ಇಂಥ ಘಟನೆಗಳು ನಡೆದಿರುವುದು ವರದಿಯಾಗಿದೆ.
ಗುಂಡು ಹಾರಿಸಿದ ವಿಡಿಯೋ ಇಲ್ಲಿದೆ….https://www.facebook.com/VVani4U/videos/283763232765483/?v=283763232765483
ಸರ್ಕಾರಿ ಜಾಹೀರಾತಿನಲ್ಲಿ ನೀಲಿಚಿತ್ರ ತಾರೆ; ನೆಟ್ಟಿಗರಿಂದಲೂ ಮೆಚ್ಚುಗೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + twenty =
Remember me
