ಇಂಫಾಲ:ಇಂಡೋ-ಮ್ಯಾನ್ಮಾರ್​​​​ ಗಡಿಯಲ್ಲಿ ವಿಶೇಷವಾಗಿ ಮಣಿಪುರದ ಕಾಮ್​ಜಾಂಗ್​​ ಜಿಲ್ಲೆಯಲ್ಲಿ ಪದೇಪದೆ ಸ್ಫೋಟಕಗಳನ್ನು ಸಿಡಿಸುತ್ತಿರುವುದರ ಬಗ್ಗೆ ತನಿಖೆ ನಡೆಸಲಾಗುವುದು. ಅಧಿಕೃತ ವರದಿಯನ್ನು ಸಂಗ್ರಹಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೇರಿದಂತೆ ಸಂಬಂಧಿಸಿದ ಸಚಿವಾಲಯಗಳಿಗೆ ಕಳುಹಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿಎಂ ಎನ್.​ಬಿರೇನ್​ ಸಿಂಗ್​ ಹೇಳಿದ್ದಾರೆ.
ಇದನ್ನು ಓದಿ:ನಾರ್ಕೊ-ಟೆರರ್​​​ ಲಿಂಕ್​​; ಪಾಕಿಸ್ತಾನದ ಐಎಸ್​ಐ ಜತೆ ನಂಟು ಹೊಂದಿದ್ದ ಆರು ಅಧಿಕಾರಿಗಳು ವಜಾ
ಮಣಿಪುರ ವಿಧಾನಸಭೆಯ 6ನೇ ಅಧಿವೇಶನದಲ್ಲಿ ಫುಂಗ್ಯಾರ್ ಶಾಸಕ ಲೀಶಿಯೊ ಕೀಶಿಂಗ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆಯಾಗಿ ಸಿಎಂ ಬಿರೇನ್​​ ಸಿಂಗ್​​ ಸದನಕ್ಕೆ ಈ ಮಾಹಿತಿ ನೀಡಿದರು. ಇಂಡೋ-ಮ್ಯಾನ್ಮಾರ್ ಅಂತಾರಾಷ್ಟ್ರೀಯ ಗಡಿ ಪಿಲ್ಲರ್ ಸಂಖ್ಯೆ 91 ರಿಂದ 94ರ ನಡುವೆ ಸ್ಫೋಟಕಗಳನ್ನು ಸಿಡಿಸುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ ಎಂದು ಸದನದಲ್ಲಿ ಕೀಶಿಂಗ್ ಪ್ರಸ್ತಾಪಿಸಿದರು. ಇಂಡೋ-ಮ್ಯಾನ್ಮಾರ್ ಪ್ರದೇಶಗಳಲ್ಲಿ ವಾಸಿಸುವ ಗ್ರಾಮಸ್ಥರನ್ನು ಭಯಭೀತಗೊಳಿಸಲು ಮ್ಯಾನ್ಮಾರ್ ಉಗ್ರಗಾಮಿಗಳು ಭೂಸ್ಫೋಟಕಗಳನ್ನು ಸಿಡಿಸುತ್ತಿದ್ದಾರೆ ಎಂದು ವರದಿಯಾಗಿದೆ ಎಂದು ಕೀಶಿಂಗ್​ ಹೇಳಿದರು.
ಕಳೆದ ಮೂರು ದಶಕಗಳಿಂದ ಗಡಿ ಕಾಯುವ ಪಡೆಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಸ್ಸಾಂ ರೈಫಲ್ಸ್, ಕಸ್ಟಮ್ಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸೇರಿದಂತೆ ನಾಗರಿಕ ಆಡಳಿತವು ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಿರ್ವಹಿಸುತ್ತಿದೆ. ಈ ಸಮಸ್ಯೆಯು ಎರಡು ದೇಶಗಳನ್ನು ಒಳಗೊಂಡಿರುವುದರಿಂದ, ರಾಜ್ಯ ಪೊಲೀಸ್ ಮತ್ತು ಅಸ್ಸಾಂ ರೈಫಲ್ಸ್ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಲಿದ್ದಾರೆ. ವರದಿಯನ್ನು ಸಂಬಂಧಿತ ಸಚಿವಾಲಯಗಳು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸುತ್ತಾರೆ. ವಿಷಯದ ಗಂಭೀರತೆಯನ್ನು ವೈಯಕ್ತಿಕವಾಗಿ ಸಚಿವಾಲಯವನ್ನು ಸಂಪರ್ಕಿಸಿ ತಿಳಿಸುತ್ತೇನೆ. ಮತ್ತು ಗ್ರಾಮಸ್ಥರಲ್ಲಿನ ಭಯ ಹೋಗಲಾಡಿಸಲು ಅಗತ್ಯ ಕ್ರಮಗಳನ್ನು ತ್ವರಿತವಾಗಿ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತೇನೆ ಎಂದು ಸಿಎಂ ಹೇಳಿದರು. (ಏಜೆನ್ಸೀಸ್​​)
ಇಲ್ಲಿ ಪ್ರೇಕ್ಷಕರನ್ನು ಮೂರ್ಖರೆಂದು ಪರಿಗಣಿಸಲಾಗುತ್ತಿದೆ: ಆರ್​ಜಿವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 9 =
Remember me
