ನವದೆಹಲಿ:ಚೀನಾದಿಂದ ಆಮದನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲ್ಯಾಪ್​ಟಾಪ್​, ಕ್ಯಾಮರಾಗಳು, ಜವಳಿ ಮತ್ತು ಅಲ್ಯುಮೀನಿಯಂ ಉತ್ಪನ್ನಗಳು ಸೇರಿ 20ಕ್ಕೂ ಹೆಚ್ಚು ಉತ್ಪನ್ನಗಳ ಮೇಲಿನ ಕರವನ್ನು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದಾಗಿ ಈ ಎಲ್ಲ ವಸ್ತುಗಳ ಬೆಲೆ ದುಬಾರಿಯಾಗುವುದು ನಿಶ್ಚಿತವಾಗಿದೆ.
ಸದ್ಯ ಕರ ಹೆಚ್ಚಳದ vಆಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯದ ಪ್ರಸ್ತಾವನೆ ವಿತ್ತ ಸಚಿವಾಲಯದ ಎದುರಿನಲ್ಲಿದೆ. ಈ ಬಗ್ಗೆ ಅದಿನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದರೂ ಈ ಹಿಂದೆ ಇದೇ ಪ್ರಸ್ತಾವನೆಯನ್ನು ಅದು ತಿರಸ್ಕರಿಸಿತ್ತು ಎನ್ನಲಾಗಿದೆ.
ಚೀನಾವನ್ನು ಗಮನದಲ್ಲಿಟ್ಟುಕೊಂಡು ಕರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಒಟ್ಟಾರೆ ಸೀಮಾ ಸುಂಕ ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಹೇಳುವ ಮೂಲಕ ಲ್ಯಾಪ್​ಟಾಪ್​ ಮತ್ತು ಕ್ಯಮರಾಗಳು ಸೇರಿ ವಿವಿಧ ಉತ್ಪನ್ನಗಳ ಬೆಲೆ ಹೆಚ್ಚಳವಾಗುವುದು ನಿಶ್ಚಿತ ಎಂಬ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಇದನ್ನೂ ಓದಿ:ಟ್ರಂಪ್ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ವೈಟ್​ಹೌಸ್ ಹೊರಗೆ ಶೂಟೌಟ್​
ಇತ್ತೀಚಿನ ದಿನಗಳಲ್ಲಿ ಭಾರತ ತಾನು ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ವಿಯೆಟ್ನಾಂ ಅಥವಾ ಥಾಯ್ಲೆಂಡ್​ನಂಥ ರಾಷ್ಟ್ರಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಸ್ತುಗಳ ಮೇಲಿನ ಕರ ಹೆಚ್ಚಳ ಮಾಡುವ ವಿಷಯವಾಗಿ ಹಿಂದುಮುಂದು ಆಲೋಚಿಸುತ್ತಿದೆ.
ಕಂದಾಯ ಇಲಾಖೆಯ ಯಾವುದೇ ಕ್ರಮ ಕೈಗೊಳ್ಳದೇ ಹೋಗಿದ್ದರಿಂದ, ವಾಣಿಜ್ಯ ಇಲಾಖೆಯು ಟೈರ್​ಗಳು ಮತ್ತು ಟಿವಿಗಳು ಸೇರಿ ವಿವಿಧ ವಸ್ತುಗಳ ಮೇಲಿನ ಆಮದು ಪರವಾನಗಿಯನ್ನು ಮರುಪರಿಶೀಲಿಸಲು ಮುಂದಾಗಿತ್ತು. ಇದರಿಂದಾಗಿ ದೇಶ ಐದಾರು ದಶಕಗಳಷ್ಟು ಹಿಂದಕ್ಕೆ ಹೋಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
VIDEO| ಕನಸಿನ ಮನೆ ಗೃಹ ಪ್ರವೇಶಕ್ಕೆ ಮೃತ ಹೆಂಡತಿ ಕರೆ ತಂದ ಪತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + nineteen =
Remember me
