ಬಿಹಾರ:ದೇಶದಲ್ಲಿ ಶುಕ್ರವಾರವಷ್ಟೇ ಸಂಭವಿಸಿದ್ದ ತ್ರಿವಳಿ ರೈಲು ಅಪಘಾತದ ಬೆನ್ನಿಗೇ ಮತ್ತೊಂದು ಭಾರಿ ಅವಘಡ ಉಂಟಾಗಿದೆ. ಬೃಹತ್ ಸೇತುವೆಯೊಂದು ನೋಡನೋಡುತ್ತಿದ್ದಂತೆ ಕುಸಿದಿದ್ದು ಇಸ್ಪೀಟ್​ನ ಎಲೆಯಂತೆ ಬಿದ್ದು ನೀರುಪಾಲಾಗಿದೆ.
ಬಿಹಾರದ ಭಗಲ್ಪುರದಲ್ಲಿ ಈ ಅವಘಡ ಸಂಭವಿಸಿದೆ. ನಿರ್ಮಾಣ ಹಂತದಲ್ಲಿದ್ದ ಈ ಸೇತುವೆ ಅಗುವಾನಿ-ಸುಲ್ತಾನ್​ಗಂಜ್​ ಸಂಪರ್ಕ ಕೊಂಡಿಯಾಗಿತ್ತು. ಇಂದು ಸಂಜೆ 6 ಗಂಟೆ ಸುಮಾರಿಗೆ ಈ ಬೃಹತ್ ಸೇತುವೆ ಕುಸಿದಿದೆ. ಈ ದೃಶ್ಯ ಸ್ಥಳೀಯರ ಮೊಬೈಲ್​ಫೋನ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಲಾರಂಭಿಸಿದೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಸಾವು-ನೋವು ಸಂಭವಿಸಿಲ್ಲ.
ಇದನ್ನೂ ಓದಿ:ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ
ಗಂಗಾ ನದಿ ಮೇಲೆ ನಿರ್ಮಿಸಲಾಗಿರುವ ಈ ಚತುಷ್ಪಥ ಸೇತುವೆಯನ್ನು 2014ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದ್ದರು. ಇದೀಗ ಈ ಸೇತುವೆ ಒಂದೇ ವರ್ಷದಲ್ಲಿ ಎರಡನೇ ಸಲ ಕುಸಿದಂತಾಗಿದೆ. ಕಳೆದ ಡಿಸೆಂಬರ್​ನಲ್ಲಿ ಬೆಗುಸರಾಯ್​ ಜಿಲ್ಲೆಯ ಪ್ರದೇಶದಲ್ಲಿ ಈ ಸೇತುವೆ ಕುಸಿತ ಕಂಡಿತ್ತು. –ಏಜೆನ್ಸೀಸ್
#UPDATE| The incident of under-construction bridge collapse happened at around 6 pm. No casualties reported till now. Local administration on the spot, we have asked for a report from ‘Pul Nirman Nigam’: DDC Bhagalpur Kumar Anurag to ANIhttps://t.co/MoeA7wF1nN
— ANI (@ANI)June 4, 2023

ಸಿದ್ದರಾಮಯ್ಯ ಕುರಿತು ಹನಿಗವಿಯ ವರ್ಷದ ಹಿಂದಿನ ತಮಾಷೆ ನಿಜವಾಯಿತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + three =
Remember me
