ನವದೆಹಲಿ:ಲಷ್ಕರ್​-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತನನ್ನು 19 ವರ್ಷದ ಸಾಜಿದ್​ ಫಾರೂಖ್​ ದಾರ್​ ಎಂದು ಗುರುತಿಸಲಾಗಿದ್ದು, ಬಾರಾಮುಲ್ಲ ಜಿಲ್ಲೆಯ ಅಂಡರ್ಗ್ಯಾಮ್​ ಪಠಾನ್​ ಏರಿಯದಲ್ಲಿ ಬಂಧಿಸಲಾಗಿದೆ ಈತ ಬಂಡಿಪೋರ ಜಿಲ್ಲೆಯ ಗುಂಡ್​ ಪ್ರಾಂಗ್​ ಮಾದ್ವನ್​ ಹಜಿನ್​​​ ನಿವಾಸಿಯಾಗಿದ್ದು, ಫಾರೂಖ್​ ಅಹ್​ ದಾರ್​ ಎಂಬಾತನ ಮಗನಾಗಿದ್ದಾನೆ. ಈತ ನಿರಂತರವಾಗಿ ಎಲ್​ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿ ತಿಳಿಸಿದ್ದಾರೆ.
In another operation by police one Sajid Farooq Dar @ Adnan,S/o Farooq Ah DarAge 19 yrs.R/o Gund Prang Madvan HajinDistrict BandiporaAffiliated with LET was arrested from Andergam Pattan Baramulla.— J&K Police (@JmuKmrPolice)January 28, 2020
In another operation by police one Sajid Farooq Dar @ Adnan,S/o Farooq Ah DarAge 19 yrs.R/o Gund Prang Madvan HajinDistrict BandiporaAffiliated with LET was arrested from Andergam Pattan Baramulla.
ಜೈಷ್​-ಎ-ಮೊಹಮ್ಮದ್​(ಜೆಇಎಂ) ಉಗ್ರ ಸಂಘಟನೆಯ ಬಹುಮುಖ್ಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಮೂರು ದಿನಗಳ ಹಿಂದೆ ಕಾಶ್ಮೀರದ ಅವಾಂತಿಪೋರ್​ನಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದ ಬೆನ್ನಲ್ಲೇ ಮತ್ತೊಬ್ಬ ಉಗ್ರನನ್ನು ಜಮ್ಮು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.​
ಮೂರು ದಿನಗಳ ಹಿಂದೆ ಹೊಡೆದುರುಳಿಸಲಾದ ಉಗ್ರರನ್ನು ತ್ರಾಲ್​ನ ಬುರ್ಹಾನ್​ ಶೇಖ್​, ಮೂಸಾ ಅಲಿಯಾಸ್​ ಅಬು ಉಸ್ಮಾನ್​ ಮತ್ತು ಜೈಷ್​-ಎ-ಮೊಹಮ್ಮದ್​(ಜೆಇಎಂ) ಉಗ್ರ ಸಂಘಟನೆಯ ಬಹುಮುಖ್ಯ ಕಮಾಂಡರ್ ಖಾರಿ ಯಾಸಿರ್​ ಎಂದು ಗುರುತಿಸಲಾಗಿದೆ. ಸಾಕಷ್ಟು ಉಗ್ರ ಚಟುವಟಿಕೆ ಮತ್ತು ನಾಗರಿಕರ ಹತ್ಯೆಯಲ್ಲಿ ಇವರು ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
