ಮುಂಬಯಿ:ಹಜ್ 2021 ಯಾತ್ರೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ಜನವರಿ 10ರ ತನಕ ವಿಸ್ತರಿಸಲಾಗಿದೆ. ಅದೇ ರೀತಿ ಯಾತ್ರೆ ಶುರುಮಾಡುವ ಸ್ಥಳಕ್ಕೆ ಅನುಗುಣವಾಗಿ ಯಾತ್ರಾ ದರವೂ ವ್ಯತ್ಯಾಸವಾಗಿರಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಗುರುವಾರ ತಿಳಿಸಿದ್ದಾರೆ.
ಸೌದಿ ಅರೇಬಿಯಾ ಸರ್ಕಾರ ನಿಗದಿಪಡಿಸುವ ಮಾರ್ಗಸೂಚಿಯ ಪ್ರಕಾರವೇ ಹಜ್​ ಯಾತ್ರೆಗೆ ಅವಕಾಶ ನೀಡಲಾಗುತ್ತದೆ. ಈ ಹಿಂದಿನ ಆದೇಶ ಪ್ರಕಾರ, ಯಾತ್ರೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನ ಇಂದೇ (ಡಿಸೆಂಬರ್ 10) ಆಗಿತ್ತು. ಹಜ್ ಕಮಿಟಿ ಸಭೆ ನಡೆಸಿ ಅರ್ಜಿ ಸಲ್ಲಿಸುವ ಅವಕಾಶವನ್ನು ಜನವರಿ 10 ತನಕ ವಿಸ್ತರಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ:ಅ ಆ ಇ ಈ ಕಲಿಯುತ್ತಿದ್ದಾರೆ ನಟಸಾರ್ವಭೌಮನ ಬೆಡಗಿ ಅನುಪಮಾ ಪರಮೇಶ್ವರನ್!
ಇದುವರೆಗೆ 40,000ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಒಂಟಿಯಾಗಿ ಹಜ್ ಯಾತ್ರೆ ಕೈಗೊಳ್ಳುವುದಾಗಿ ಅರ್ಜಿ ಸಲ್ಲಿಸಿರುವ 500 ಮಹಿಳೆಯರು ಸೇರಿದ್ದಾರೆ. ಯಾತ್ರೆ ಕೈಗೊಳ್ಳುವವರು ಕೋವಿಡ್ 19 ನಿಯಮ ಪಾಲಿಸುವುದು ಅವಶ್ಯ. ಇನ್ನು ಯಾತ್ರಾ ವೆಚ್ಚ ಅಂದಾಜು ಅಹಮದಾಬಾದ್ ಮತ್ತು ಮುಂಬಯಿಗಳಿಂದಾದರೆ 3,30,000 ಲಕ್ಷ ರೂಪಾಯಿ, ಬೆಂಗಳೂರು, ಲಖನೌ, ದೆಹಲಿ ಮತ್ತು ಹೈದರಾಬಾದ್​ಗಳಿಂದಾದರೆ 3.5 ಲಕ್ಷ ರೂಪಾಯಿ, ಕೊಚ್ಚಿನ್ ಮತ್ತು ಶ್ರೀನಗರಗಳಿಂದಾದರೆ 3.6 ಲಕ್ಷ ರೂಪಾಯಿ, ಕೋಲ್ಕತಾದಿಂದ 3.7 ಲಕ್ಷ ರೂಪಾಯಿ, ಗುವಾಹಟಿಯಿಂದ 4 ಲಕ್ಷ ರೂಪಾಯಿ ಆಗಿರಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಮುನ್ನುಗ್ಗಿ ಸುಸ್ತಾದ ಗೂಳಿ ಕುಸಿಯತೊಡಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
