ಥೈಲಾಸಿನ್ ಅಥವಾ ಟಾಸ್ಮೇನಿಯನ್ ಹುಲಿ ಸಂತತಿ ಈಗ ಭೂಮಿಯ ಮೇಲಿಲ್ಲ. ಎಂಟು ದಶಕಗಳ ಹಿಂದೆ ಈ ಪ್ರಭೇದದ ಕೊನೆಯ ಪ್ರಾಣಿಯ ವಿಡಿಯೋ ಈಗ ವೈರಲ್​ ಆಗಿದೆ. ಈ ಪ್ರಾಣಿಯನ್ನು ಬೆಂಜಮಿನ್ ಎಂದೂ ಕರೆಯಲಾಗುತ್ತದೆ. ನ್ಯಾಷನಲ್ ಫಿಲ್ಮ್ ಆ್ಯಂಡ್ ಸೌಂಡ್ ಅರ್ಕೈವ್ ಆಫ್ ಆಸ್ಟ್ರೇಲಿಯಾ ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದೆ.
We have released 21-second newsreel clip featuring the last known images of the extinct Thylacine, filmed in 1935, has been digitised in 4K and released.
Be sure to check out the footage of this beautiful marsupial.#NFSAOpenOnline#TasmanianTigerhttps://t.co/s3JSAnmFckpic.twitter.com/FSRYXCTTMy
— NFSA National Film and Sound Archive of Australia (@NFSAonline)May 19, 2020

ಈಗ ಅಳಿದುಹೋಗಿರುವ, ಥಿಯಾಸಿನ್ ಸ್ಥಳೀಯ ಅತಿದೊಡ್ಡ ಮಾಂಸಾಹಾರಿ ಪ್ರಾಣಿಗಳಲ್ಲಿ ಒಂದಾಗಿತ್ತು.ಕಾಡುನಾಯಿಯನ್ನು ಹೋಲುವಂತಹ ಈ ಪ್ರಾಣಿಯ ಬೆನ್ನಿನ ಮೇಲೆ ಪಟ್ಟೆಗಳಿದ್ದುದರಿಂದ ಆಗ ಜನ ಇದನ್ನು ಟಾಸ್ಮೆನಿಯನ್ ಹುಲಿ ಎಂದು ಕರೆದಿರಬಹುದು.
ಇದನ್ನೂ ಓದಿ:ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಿದ ನಟ ಪರ್ಹಾನ್ ಅಖ್ತರ್
1935ರಲ್ಲಿ ಟಾಸ್ಮೆನಿಯಾದ ಹಾರ್ಬರ್ಟ್‌ನಲ್ಲಿರುವ ಬ್ಯೂಮರೀಸ್ ಮೃಗಾಲಯದ ಆವರಣದಲ್ಲಿ ಬೆಂಜಮಿನ್ ಎಂಬ ಹೆಸರಿನ ಈ ಅಪರೂಪದ ಪ್ರಾಣಿಯ ಚಿತ್ರೀಕರಣ ಮಾಡಲಾಗಿತ್ತು.21 ಸೆಕೆಂಡ್​​ಗಳ ದೃಶ್ಯಾವಳಿಯನ್ನು ಬೆಂಜಮಿನ್ ಸಾಯುವ ಸ್ವಲ್ಪ ಸಮಯದ ಮೊದಲು ಚಿತ್ರೀಕರಿಸಲಾಗಿತ್ತು. ಅದಾದ ನಂತರ ಸೆಪ್ಟೆಂಬರ್ 7 ರಂದು ಥಿಯಾಸಿನ್ ಸಾವಿಗೀಡಾಯಿತು. ಈಗ ಆ ದಿನವನ್ನು ಆಸ್ಟ್ರೇಲಿಯಾದಲ್ಲಿ ರಾಷ್ಟ್ರೀಯ ಅಳಿವಿನಂಚಿನಲ್ಲಿರುವ ಪ್ರಭೇದಗಳ ದಿನವನ್ನಾಗಿ ಆಚರಿಸಲಾಗುತ್ತದೆ.ಸಂಪೂರ್ಣ ಅಳಿದು ಹೋಗಿರುವ ಈ ವಿಶಿಷ್ಟ ಪ್ರಾಣಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 1935ರಲ್ಲಿ ಸೆರೆ ಹಿಡಿಯಲಾದ ಈ ಅಪರೂಪದ ದೃಶ್ಯವನ್ನು ನೆಟ್ಟಿಗರು ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ:ಐಬಿಪಿಎಸ್ ಪರೀಕ್ಷಾ ಫಲಿತಾಂಶ ಪ್ರಕಟ: ವೆಬ್​ಸೈಟ್​​ನಲ್ಲಿ ನೋಡಿ
ಬೆಂಜಮಿನ್​​​ನ ಈ ದೃಶ್ಯಾವಳಿಗಳನ್ನು 1935ರಲ್ಲಿ ಟ್ಯಾಸ್ಮೆನಿಯಾ ದಿ ವಂಡರ್‌ ಲ್ಯಾಂಡ್ ಎಂಬ ಪ್ರವಾಸ ಕಥನದಿಂದ ತೆಗೆದುಕೊಳ್ಳಲಾಗಿದ್ದು, ಈಗ ಅದನ್ನು ಗುರುತಿಸಿ ಡಿಜಿಟಲ್​ ರಿಸ್ಟೋರ್ ಮಾಡಲಾಗಿದೆ.ಭರ್ತಿ 85 ವರ್ಷಗಳ ನಂತರ ಈ ಅಪರೂಪದ ಪ್ರಾಣಿಯ ವಿಡಿಯೋ ನೋಡುವ ಭಾಗ್ಯ ಸಿಕ್ಕಿದೆ. ಇದು ಈ ಪ್ರಭೇದದ ಕೊನೆಯ ಪ್ರಾಣಿಯಾಗಿದೆ.ನ್ಯಾಷನಲ್ ಫಿಲ್ಮ್‌ ಅಂಡ್ ಸೌಂಡ್ ಆರ್ಕೈವ್ ಆಫ್ ಆಸ್ಟ್ರೇಲಿಯಾ (ಎನ್‌ಎಫ್‌ಎಸ್‌ಎ) ಈ ಹುಲಿಯ ಅಪರೂಪದ ದೃಶ್ಯವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ 80,000 ಕ್ಕೂ ಹೆಚ್ಚು ಬಾರಿ ವೀಕ್ಷಣೆಗೆ ಒಳಪಟ್ಟಿದೆ.
ಅಂತರದ ಅರಿವು ಮೂಡಿಸುವ ‘ಅರಿಕಿಲ್​​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
