ಮುಂಬೈ:ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡದುಕೊಳ್ಳುತ್ತಿದೆ. ಆತನ ಚಿಕ್ಕಪ್ಪ ಇದೊಂದು ಕೊಲೆ, ಪೊಲೀಸ್​ ತನಿಖೆ ನಡೆಸಲೇ ಬೇಕು ಎಂದು ಈಗಾಗಲೇ ಒತ್ತಾಯಿಸಿದ್ದಾರೆ.
ಸುಶಾಂತ್​ ಸಾವಿಗೆ ಆರ್ಥಿಕ ಮುಗ್ಗಟ್ಟು ಕೂಡ ಕಾರಣ ಎಂದೇ ಹೇಳಲಾಗಿತ್ತು. ತಾನು ವಾಸವಿದ್ದ ಬಾಂದ್ರಾದ ಡ್ಯೂಪ್ಲೆಕ್ಸ್​ ಮನೆಗೆ ಆತ ತಿಂಗಳಿಗೆ ನಾಲ್ಕೂವರೆ ಲಕ್ಷ ರೂ. ಬಾಡಿಗೆ ನೀಡುತ್ತಿದ್ದ ಜತೆಗೆ, ಕೆಲಸಕ್ಕಿಟ್ಟುಕೊಂಡಿದ್ದ ಹಲವರಿಗೆ ಸಂಬಳ ನೀಡಬೇಕಾಗಿತ್ತು ಎಂದೆಲ್ಲ ಹೇಳಲಾಗಿತ್ತು. ಆದರೆ, ಅಂಥ ಆರ್ಥಿಕ ಮುಗ್ಗಟ್ಟು ಆತನಿಗಿರಲಿಲ್ಲ ಎನ್ನುವುದು ಈಗ ಬಹಿರಂಗೊಂಡಿರುವ ವಿಷಯದಿಂದ ಗೊತ್ತಾಗುತ್ತಿದೆ.ಸುಶಾಂತ್​ ಸಿಂಗ್​ ಮುಂಬರುವ ನವೆಂಬರ್​ನಲ್ಲಿ ಮದುವೆಯಾಗಲಿದ್ದ. ಅದಕ್ಕಾಗಿ ಸಿದ್ಧತೆ ನಡೆಸಿದ್ದ ಎಂದು ಆಕೆಯ ಸೋದರ ಸಂಬಂಧಿ ಹೇಳಿದ್ದಾಳೆ. ಆದರೆ, ಯಾರೊಂದಿಗೆ ಹಸೆಮಣೆ ಏರಲಿದ್ದ ಎಂಬುದನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ;ನಟ ಸುಶಾಂತ್​ ಸಿಂಗ್​ನ ವೈದ್ಯರನ್ನು ಹುಡುಕುತ್ತಿದ್ದಾರೆ ಪೊಲೀಸರು; ಕೊನೆಯ ಕರೆ ಮಾಡಿದ್ಯಾರಿಗೆ?
ಇನ್ನೊಂದೆಡೆ, ಸುಶಾಂತ್​ ಸಿಂಗ್​ ಗೆಳತಿ, ಬೆಂಗಳೂರು ಮೂಲದ ರಿಯಾ ಚಕ್ರವರ್ತಿ ಹೊಸ ಮನೆಯೊಂದನ್ನು ಹುಡುಕುತ್ತಿದುದಾಗಿ ರಿಯಲ್​ ಎಸ್ಟೇಟ್​ ಎಜೆಂಟ್​ ಮಾಹಿತಿ ನೀಡಿದ್ದಾನೆ.
ತಾನು ಸುಶಾಂತ್​ ಸಿಂಗ್​ ಜತೆ ಮದುವೆಯಾಗುತ್ತಿದ್ದು, ಒಟ್ಟಿಗೆ ಇರಲು ಮನೆ ಹುಡುಕುತ್ತಿರುವುದಾಗಿ ತಿಳಿಸಿದ್ದಾಗಿ ಎಜೆಂಟ್ ಹೇಳಿದ್ದಾನೆ. ಬಾಂದ್ರಾದಲ್ಲಿಯೇ ಅವರು ಮನೆ ಹುಡುಕಾಟದಲ್ಲಿದ್ದರು. ಬಾಡಿಗೆ ಬಗ್ಗೆ ಚಿಂತೆ ಇರಲಿಲ್ಲ. ಆದರೆ, ತಡರಾತ್ರಿಯ ಪಾರ್ಟಿಗಳಿಗೆ ಆಕ್ಷೇಪ ವ್ಯಕ್ತಬಾರದು ಎಂಬುದಷ್ಟೇ ಅವರ ಷರತ್ತಾಗಿತ್ತು ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ;ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ
ಇದಕ್ಕೆ ಪುಷ್ಠಿ ನೀಡುವಂತೆ ಸುಶಾಂತ್​ ಸಿಂಗ್​ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಆಸ್ಪತ್ರೆಗೆ ರಿಯಾ ಭೇಟಿ ನೀಡಿದ್ದಳು. ಜತೆಗೆ, ಸುಶಾಂತ್​ ಪಾಲಕರನ್ನು ಭೇಟಿಯಾಗಿದ್ದಳು. ಈ ಎಲ್ಲ ಬೆಳವಣಿಗೆಗಳಿಂದಾಗಿ ಸುಶಾಂತ್​ ಸಾವಿಗೆ ಕಾರಣ ಏನು ಎನ್ನುವುದು ನಿಗೂಢವಾಗುತ್ತಲೇ ಸಾಗಿದೆ.
ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 11 =
Remember me
