ಪಟಿಯಾಲ:ರಾತ್ರಿಯ ಊಟ ಮುಗಿಸಿ ಪತ್ನಿ ಹಾಗೂ ತಂದೆಯ ಜತೆ ತಡರಾತ್ರಿ 12.15ರಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಯುವಕನೊಬ್ಬ ಹೆಣವಾಗಿದ್ದಾನೆ.
ಪಟಿಯಾಲದ ಫ್ಯಾಕ್ಟರಿ ಏರಿಯಾದ ನಿವಾಸಿ ಬಿಹಾರದ 21 ವರ್ಷದ ಯುವಕ ಮೃತ. ಪಟಿಯಾಲದ ಜಗ್​ಮೋಹನ್​ ಸಿಂಗ್​ ಮತ್ತು ಹರಿಯಾಣದ ಕುರುಕ್ಷೇತ್ರ ಮೂಲದ ಭೂಪೀಂದರ್​ ಸಿಂಗ್​ ಕೊಲೆಗಾರರು.
ರಾತ್ರಿ ಊಟವಾದ ನಂತರದಲ್ಲಿ ಬಿಹಾರದ ಯುವಕ ತನ್ನ ಪತ್ನಿ ಹಾಗೂ ಅಪ್ಪನೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತ ಎಂದಿನಂತೆ ವಾಯುವಿಹಾರಕ್ಕೆ ತೆರಳಿದ್ದ. ಬುಧವಾರ ರಾತ್ರಿ ಇವರಿಗೆ ಎದುರಾದ ಜಗ್​ಮೋಹನ್​ ಸಿಂಗ್​ ಮತ್ತು ಭೂಪೀಂದರ್​ ಸಿಂಗ್​, ಇಷ್ಟು ರಾತ್ರಿಯಲ್ಲಿ ಒಬ್ಬಂಟಿ ಮಹಿಳೆಯೊಂದಿಗೆ ತಿರುಗಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ:ಅನೈತಿಕ ಸಂಬಂಧ ಶಂಕೆ, ಯುವಕನ ಬರ್ಬರ ಕೊಲೆ
ಇದಕ್ಕೆ ಆಕೆ ತನ್ನ ಪತ್ನಿ ಎಂದು ಬಿಹಾರದ ಯುವಕ ಉತ್ತರಿಸಿದ್ದ. ಆದರೆ, ಇದರಿಂದ ಕುಪಿತರಾದ ಜಗ್​ಮೋಹನ್​ ಮತ್ತು ಭೂಪೀಂದರ್​ ತಮ್ಮ ಕೈಯಲ್ಲಿದ್ದ ಬಾಟಲಿ, ಸ್ಥಳದಲ್ಲಿದ್ದ ಇಟ್ಟಿಗೆ ಮತ್ತು ಕಲ್ಲುಗಳಿಂದ ಯುವಕನ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಕೊನೆಯುಸಿರು ಎಳೆದಿರುವುದಾಗಿ ವೈದ್ಯರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪಟಿಯಾಲ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಹಲ್ಲೆ ಮಾಡಿದ ಯುವಕರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 2 =
Remember me
