ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ(ಬ್ರಿಟಿಷ್​ ಬ್ರಾಡ್​ಕಾಸ್ಟಿಂಗ್​ ಕಾರ್ಪೊರೇಷನ್​) ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿವಾದ ಮತ್ತಷ್ಟು ಕಾವೇರುತ್ತಿದೆ. ವಿವಾದಾತ್ಮಕ ಡಾಕ್ಯುಮೆಂಟರಿ ‘ದಿ ಮೋದಿ ಕ್ವೆಶ್ಚನ್​’ನ ಲಿಂಕ್​ಗಳನ್ನು ಕೇಂದ್ರ ಸರ್ಕಾರ ಬ್ಲಾಕ್​ ಮಾಡಿ, ಭಾರತದಲ್ಲಿ ಇದರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಆದರೂ ದೆಹಲಿಯ ಜವಾಹರಲಾಲ್​ ನೆಹರೂ ವಿಶ್ವವಿದ್ಯಾಲಯದಲ್ಲಿ(ಜೆಎನ್​ಯು) ಚಿತ್ರಪ್ರದರ್ಶನ ಮಾಡಲು ಮುಂದಾದ ವೇಳೆ ಕಾಲೇಜಿನಲ್ಲಿ ಕಲ್ಲು ತೂರಟ ನಡೆದಿದ್ದು, ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ.
ನಿಷೇಧದ ನಡವೆಯೂ ಹೈದರಾಬಾದ್​ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಡಾಕ್ಯುಮೆಂಟರಿಯನ್ನ ಪ್ರದರ್ಶಿಸಿದ್ದಾರೆ. ಕೇರಳದಲ್ಲಿ ಗಣರಾಜ್ಯ ದಿನದಂದು ಇದನ್ನು ಪ್ರದರ್ಶಿಸುವುದಾಗಿ ಹಲವು ಸಂಘಟನೆಗಳು ಹೇಳಿವೆ. ಇದರ ಬೆನ್ನಲ್ಲೇ ಜೆಎನ್​ಯು ವಿವಿಯ ವಿದ್ಯಾರ್ಥಿ ಸಂಘ ಚಿತ್ರಪ್ರದರ್ಶನ ಮಾಡುವುದಾಗಿ ಘೋಷಿಸಿತ್ತು. ಆದರೆ ವಿವಿ ಆಡಳಿತ ಮಂಡಳಿ ಇದಕ್ಕೆ ಅನುಮತಿ ನಿರಾಕರಿಸಿತ್ತು. ಆದರೂ ಕೆಲ ವಿದ್ಯಾರ್ಥಿಗಳು ಮೋದಿ ಮತ್ತು ಗಲಭೆಯ ಕುರಿತಾದ ಆಕ್ಷೇಪಾರ್ಹ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದ ವೇಳೆ ಗಲಾಟೆ ನಡೆಯುವ ಸಂಭವಿಸುವ ಮುನ್ಸೂಚನೆ ಅರಿತು ವಿವಿಯಲ್ಲಿ ಇಂಟರ್​ನೆಟ್​ ಮತ್ತು ವಿದ್ಯುತ್​ ಕಡಿತ ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ವಿವಾದ?: ಬಿಬಿಸಿ ಜ.17ರಂದು ‘ದಿ ಮೋದಿ ಕ್ವೆಶ್ಚನ್​’ ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಪ್ರಸಾರ ಮಾಡಿತ್ತು. 2002ರಲ್ಲಿ ಗುಜರಾತ್​ನಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ರಾಜ್ಯಾದ್ಯಂತ ನಡೆದ ಹಿಂಸಾಚಾರ ಕುರಿತ 59 ನಿಮಿಷದ ಡಾಕ್ಯುಮೆಂಟರಿ ಇದಾಗಿದ್ದು, ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪಾತ್ರದತ್ತ ಅದು ಬೆರಳು ಮಾಡಿದೆ.
ಇನ್ನು ಮುಂದೆ ಹಾಫ್ ಹೆಲ್ಮೆಟ್ ಹಾಕಿದ್ರೆ ದಂಡ ಗ್ಯಾರಂಟಿ..!

ದಿನಕ್ಕೆ ಎಂಟೇ ನಿಮಿಷ ಕೆಲಸ ಮಾಡಿ 40 ಲಕ್ಷ ರೂ. ಸಂಬಳ ಪಡೆಯುತ್ತಿದ್ದ ಐಎಎಸ್​ ಅಧಿಕಾರಿಯಿಂದ ಬೇರೆ ಕೆಲಸ ಕೊಡಿ ಎಂದು ಸಿಎಂಗೆ ಪತ್ರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
