ಲಾತೂರ್​:ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನೊಂದಿಗೆ ಸೇರಿ ಹತ್ಯೆ ಮಾಡಿ ಪೊಲೀಸರ ವಿಚಾರಣೆಗೆ ಹೆದರಿ ಮಹಿಳೆ ಹಾಗೂ ಆಕೆಯ ಪ್ರಿಯಕರ ಆತ್ಮಹತ್ಯೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಲಾತೂರ್​ನಲ್ಲಿ ನಡೆದಿದೆ.
ಲಾತೂರ್​ ಜಿಲ್ಲೆಯ ರೇನಾಪುರ ತಾಲೂಕಿನ ಖರೋಲಾ ಏರಿಯಾದಲ್ಲಿ ಘಟನೆ ನಡೆದಿದೆ. ಮೊದಲು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ಬಳಿಕ ಮುಂದೆ ನಡೆಯಬಹುದಾದ ಪೊಲೀಸ್​ ವಿಚಾರಣೆಗೆ ಹೆದರಿ ಮಹಿಳೆ ಸಾವಿಗೆ ಶರಣಾಗಿದ್ದಾಳೆ. ಈ ವಿಚಾರ ತಿಳಿದ ಬೆನ್ನಲ್ಲೇ ಪ್ರಿಯಕರನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತಿಯ ಮೃತದೇಹ ಪತ್ತೆಯಾದ ಬಳಿಕ ಇಡೀ ಪ್ರಕರಣದ ಎಳೆ ಬಿಚ್ಚಿಕೊಂಡಿದೆ.ಇದನ್ನೂ ಓದಿ:ನದಿಗೆ ಹಾರಿದ ಯುವಕನ ಶವ ಹುಡುಕುತ್ತಿದ್ದ ಪೊಲೀಸರಿಗೆ ಕಾದಿತ್ತು ಅಚ್ಚರಿ!
ಮೃತ ಪತಿಯನ್ನು ಲಖನ್​ ರೌತ್ರಾವ್​ ಎಂದು ಗುರುತಿಸಲಾಗಿದ್ದು, ಮೃತದೇಹ ಖರೋಲಾ ಏರಿಯಾದ ನೀರಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಸೀರೆಯಲ್ಲಿ ಕೈಕಾಲುಗಳನ್ನು ಕಟ್ಟಿ ಗೋಣಿ ಚೀಲದೊಳಗೆ ಇಟ್ಟು ಸಮಾಧಿ ಮಾಡಲಾಗಿತ್ತು. ಇತ್ತ ಪತಿಯ ಮೃತದೇಹ ಪತ್ತೆಯಾಗುತ್ತಿದ್ದಂತೆ ಆರೋಪಿ ಪತ್ನಿ ಮನಿಶಾ ರೌತ್ರಾವ್ ಮತ್ತು ಆಕೆಯ ಪ್ರಿಯಕರ ವಿಜಯ್​ ಛಪ್ಪರೆ ಸಹ ಆತ್ಮಹತ್ಯಗೆ ಶರಣಾಗಿದ್ದಾರೆ.
ವಿಜಯ್​ ಮತ್ತು ಮನಿಶಾ ನಡುವೆ ಸಂಬಂಧ ಇತ್ತು. ಆದರೆ, ಮನಿಶಾ ಪತಿ ಲಖನ್​ ಇದಕ್ಕೆ ಅಡ್ಡಗೋಡೆಯಾಗಿದ್ದ. ಇಬ್ಬರು ಸೇರಿ ಸಂಚು ರೂಪಿಸಿ ಕೊಂದಿದ್ದಾರೆ. ಇತ್ತ ಪತಿ ಕೊಲೆ ಹಾಗೂ ಪೊಲೀಸ್​ ವಿಚಾರಣೆಗೆ ಹೆದರಿ ಮನಿಶಾ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇದಾದ ಬೆನ್ನಲ್ಲೇ ವಿಚಾರಣೆಗೆ ಬರುವಂತೆ ವಿಜಯ್​ಗೆ ಪೊಲೀಸರು ತಿಳಿಸಿದ್ದಾರೆ. ಎಲ್ಲೇ ಹೋದರು ಹಿಮ್ಮೆಟ್ಟಿ ಬಂದೇ ಬರುತ್ತಾರೆ ಎಂಬ ಭಯದಲ್ಲಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂವರ ಸಾವಿನ ಬಳಿಕ ಕತೆಯ ಅಸಲಿ ರೂಪ ಹೊರಬಿದ್ದಿದೆ.(ಏಜೆನ್ಸೀಸ್​)ಇದನ್ನೂ ಓದಿ:ಕೆಲಸ, ಆದಾಯವಿಲ್ಲದೇ ದೇಶದ ಅರ್ಧದಷ್ಟು ಜನ ತಿಂಗಳಿಗೂ ಹೆಚ್ಚು ಕಾಲ ಬದುಕಲಾರರು: ಸ್ಪೋಟಕ ವರದಿ ಬಹಿರಂಗ
ಎಸ್ಸೆಸ್ಸೆಲ್ಸಿ ಪರೀಕ್ಷೆ ಬಳಿಕ ಮಗಳ ಮೊಬೈಲ್ ಪಡೆಯಲು ಹೋದ ಮಹಿಳೆಗೆ ಹೆಡ್​ ಮಾಸ್ಟರ್​ನಿಂದ ಶಾಕ್!​ ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 4 =
Remember me
