ಕಳೆದುಹೋದ ಅಥವಾ ಕದ್ದ ಮೊಬೈಲ್ ಫೋನ್​ಗಳನ್ನು ನಿರ್ಬಂಧಿಸುವ ಮತ್ತು ಪತ್ತೆಮಾಡುವ ಉದ್ದೇಶದ ಸಂಚಾರ ಸಾಥಿ ಪೋರ್ಟಲ್ ಅನ್ನು ಕೇಂದ್ರ ದೂರಸಂಪರ್ಕ ಇಲಾಖೆಯು ಲೋಕಾರ್ಪಣೆ ಮಾಡಿರುವುದು ಜನಸ್ನೇಹಿ ಕ್ರಮವಾಗಿದೆ ಎನ್ನಬಹುದು. ಸೆಕೆಂಡ್ ಹ್ಯಾಂಡ್ ಮೊಬೈಲ್​ಫೋನ್ ಖರೀದಿಸುವವರಿಗೂ ಅದರ ಅಸಲಿತನ ಖಚಿತಪಡಿಸಿಕೊಳ್ಳಲು ಇದರಿಂದ ನೆರವಾಗಲಿದೆ. ಸ್ವಾಯತ್ತ ದೂರಸಂಪರ್ಕ ಸಂಶೋಧನಾ ಕೇಂದ್ರವಾದ ಸೆಂಟರ್ ಫಾರ್ ಡೆವಲಪ್​ವೆುಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಈ ಸಂಚಾರಿ ಸಾಥಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ.
ಇದನ್ನೂ ಓದಿ:ನನಗೆ ಮಗು ಬೇಕು… ಗಂಡನನ್ನು ಮನೆಗೆ ಕಳುಹಿಸಿಕೊಡಿ! ಜೈಲು ಅಧಿಕಾರಿಗೆ ಪತ್ರ ಬರೆದ ಕೈದಿಯ ಪತ್ನಿ
ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈಗಾಗಲೇ ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗಿದ್ದು, ಈಗ ಭಾರತದಾದ್ಯಂತ ವಿಸ್ತರಣೆ ಮಾಡಲಾಗಿದೆ. ಸಂಚಾರ ಸಾಥಿ ಪೋರ್ಟಲ್​ನ ಮೊದಲ ಹಂತವು ಸಿಇಐಆರ್ (ಕೇಂದ್ರ ಸಲಕರಣೆ ಗುರುತಿನ ನೋಂದಣಿ) ಆಗಿದೆ. ಮೊಬೈಲ್ ಫೋನ್ ಕಳೆದುಕೊಂಡವರು ಈ ಪೋರ್ಟಲ್​ಗೆ ಭೇಟಿ ನೀಡಬೇಕು. ಕೆಲವು ಗುರುತಿನ ಪರಿಶೀಲನೆ ಕೈಗೊಂಡ ನಂತರ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ಪೋರ್ಟಲ್ ರವಾನಿಸುತ್ತದೆ. ಜಾರಿ ಏಜೆನ್ಸಿಗಳು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು ಕಳೆದುಹೋದ ಆ ಮೊಬೈಲ್​ಫೋನ್ ಅನ್ನು ನಿರ್ಬಂಧಿಸುತ್ತಾರೆ.
ಪ್ರತಿಯೊಂದು ಮೊಬೈಲ್​ಫೋನ್​ಗೆ ಒಂದು ಪ್ರತ್ಯೇಕವಾದ ಐಎಂಇಐ (ಇಂಟರ್​ನ್ಯಾಷನಲ್ ಮೊಬೈಲ್ ಇಕ್ವಿಪ್​ವೆುಂಟ್ ಐಡೆಂಟಿಟಿ. ಅಂದರೆ ಅಂತಾರಾಷ್ಟ್ರೀಯ ಮೊಬೈಲ್ ಸಾಧನ ಗುರುತು) ಸಂಖ್ಯೆ ಇರುತ್ತದೆ. ಮೊಬೈಲ್​ಫೋನ್ ಕಳೆದುಹೋದಾಗ ಅಥವಾ ಕಳವುದಾಗ ಪೊಲೀಸ್ ಠಾಣೆಗೆ ದೂರು ನೀಡಿದ ಸಂದರ್ಭದಲ್ಲಿ ಈ ಸಂಖ್ಯೆ ಆಧರಿಸಿಯೇ ಪೊಲೀಸರು ಶೋಧ ನಡೆಸುತ್ತಾರೆ. ಆದರೆ, ಮೊಬೈಲ್​ಫೋನ್ ಖದೀಮರು ಈ ಸಂಖ್ಯೆಯನ್ನೇ ಬದಲಿಸುವ ಚಾಲಾಕಿತನ ಬೆಳೆಸಿಕೊಂಡಿದ್ದಾರೆ. ಮೊಬೈಲ್ ಫೋನ್ ಕದ್ದ ನಂತರ ಕಳ್ಳರು ಬೇರೆ ಯಾವುದಾದರೊಂದು ಮೊಬೈಲ್​ಫೋನ್​ನ ಐಎಂಇಐ ಸಂಖ್ಯೆಯನ್ನು ಕದ್ದ ಉಪಕರಣಕ್ಕೆ ಹಾಕಿ ಬಳಸಲು ಮುಂದಾಗುತ್ತಾರೆ. ಆದರೆ, ಸಂಚಾರ ಸಾಥಿ ಪೋರ್ಟಲ್​ನಲ್ಲಿ ವಿವಿಧ ಡೇಟಾಬೇಸ್​ಗಳ ಸಹಾಯದಿಂದ ನೆಟ್​ವರ್ಕ್​ನಲ್ಲಿ ಯಾವುದೇ ಕ್ಲೋನ್ ಮಾಡಿದ ಮೊಬೈಲ್ ಫೋನ್​ಗಳನ್ನು ಅಂದರೆ ಬೇರಾವುದೇ ಐಎಂಇಐ ಹಾಕಿದ ಪೋನ್​ಗಳನ್ನು ನಿರ್ಬಂಧಿಸುವ ಹಾಗೂ ಪತ್ತೆ ಮಾಡುವ ವ್ಯವಸ್ಥೆ ರೂಪಿಸಲಾಗಿದೆ.
ಇದನ್ನೂ ಓದಿ:ಬುಕ್ ಮಾಡಿದ್ದ ಆಟೋ ರಿಕ್ಷಾಗಾಗಿ 71 ನಿಮಿಷ ಕಾದವನ ತಾಳ್ಮೆಗೆ ಸಲಾಂ ಎಂದ ನೆಟ್ಟಿಗರು!
ಮೊಬೈಲ್​ಫೋನ್ ಈಗ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ದಿನದ 24 ಗಂಟೆಗಳ ಕಾಲ ನಮ್ಮೊಂದಿಗೆ ಇರುವ ಅತ್ಯಗತ್ಯದ ಸಾಧನವಾಗಿದೆ. ಸಂವಹನ ಮಾತ್ರವಲ್ಲದೆ, ಮನರಂಜನೆ, ಮಾಹಿತಿ ಒದಗಿಸುವುದು ಸೇರಿದಂತೆ ಬಹೂಪಯೋಗಿ ಉಪಕರಣವಾಗಿ ಹೊರಹೊಮ್ಮಿದೆ. ಮೊಬೈಲ್​ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಭಾರತ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದ್ದು, ಅಂದಾಜು 50 ಕೋಟಿ ಜನರು ಸೆಲ್​ಫೋನ್ ಬಳಸುತ್ತಾರೆ. ದುಬಾರಿ ವೆಚ್ಚದ ಸ್ಮಾರ್ಟ್ ಫೋನ್​ಗಳನ್ನು ಕದಿಯುವುದು ಕಳ್ಳರಿಗೆ ಲಾಭದಾಯಕ ದಂಧೆಯಾಗಿ ಪರಿಣಮಿಸಿದ್ದು, ಇನ್ನು ಇದಕ್ಕೆ ಸ್ವಲ್ಪ ಕಡಿವಾಣ ಬೀಳಬಹುದಾಗಿದೆ. ಇಂಟರ್​ನೆಟ್ ಬಳಕೆ ಮೂಲಕ ವ್ಯಾಪಾರ ವಹಿವಾಟು ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸೈಬರ್ ಕಳ್ಳತನ, ವಂಚನೆಯೂ ಜಾಸ್ತಿಯಾಗುತ್ತಿದೆ. ಇಂತಹ ಸೈಬರ್ ವಂಚನೆಗಳನ್ನು ಪತ್ತೆ ಮಾಡಲು ಕೂಡ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿಸುವ ಅಗತ್ಯ ಇದೆ. ಸರ್ಕಾರಗಳು ತಂತ್ರಜ್ಞಾನದ ಸೂಕ್ತ ಬಳಕೆಯ ಮೂಲಕ ಜನಜೀವನವನ್ನು ಸುಗಮಗೊಳಿಸಲು ನಿರಂತರವಾಗಿ ಯತ್ನಿಸುತ್ತಿರಬೇಕಾಗುತ್ತದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + eight =
Remember me
