ನವ ದೆಹಲಿ:ನಮೀಬಿಯಾದಿಂದ ಕರೆತಂದ ಚೀತಾಗಳನ್ನು ನರೇಂದ್ರ ಮೋದಿಯವರು ತಮ್ಮ ಜನ್ಮದಿನದಂದು (ಸೆ.17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟಿದ್ದರು. ದೇಶದಲ್ಲಿ ಚೀತಾಗಳ ಅಳಿವಿನ ಏಳು ದಶಕಗಳ ನಂತರ ಅವುಗಳನ್ನು ಮರು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಚೀತಾಗಳನ್ನು ತರಿಸಿಕೊಳ್ಳಲಾಗಿದೆ ಎಂದಿದ್ದ ಪ್ರಧಾನಿ, ಇದಕ್ಕೆ ನೆರವಾದ ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, 1952ರಲ್ಲಿ ದೇಶದಲ್ಲಿ ಚೀತಾಗಳು ನಾಶಾಗಿವೆ ಎಂದು ಘೋಷಿಸಲಾಗಿದ್ದರೂ, ಅವುಗಳನ್ನು ಮರು ಪರಿಚಯಿಸಲು ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು.
ಇದೀಗ ಪ್ರಧಾನಿಯವರ ಮಾತಿಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಚೀತಾಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಮಾಡಿರುವ ಕೆಲವು ಯೋಜನೆಗಳ ಕುರಿತು ಕಾಂಗ್ರೆಸ್​ ಹೇಳಿಕೊಂಡಿದೆ. 2008-09ರಲ್ಲಿ ಯುಪಿಎ ಸರ್ಕಾರವಿದ್ದಾಗ ‘ಪ್ರಾಜೆಕ್ಟ್ ಚೀತಾ’ ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಅಂದಿನ ಪ್ರಧಾನಿ ಮನಮೋಹನ್​ ಸಿಂಗ್ ಅನುಮೋದನೆ ನೀಡಿದ್ದರು. ನಂತರ 2010ರಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ದಕ್ಷಿಣ ಆಫ್ರಿಕಾದ ಚೀತಾ ಔಟ್ರೀಚ್​ ಸೆಂಟರ್​​ಗೆ ತೆರಳಿದ್ದರು.
ಆದರೆ 2013ರಲ್ಲಿ ಸುಪ್ರೀಂ ಕೋರ್ಟ್​ ಈ ಯೋಜನೆಗೆ ತಡೆ ನೀಡಿತ್ತು. ನಂತರ 2020ರಲ್ಲಿ ಈ ಯೋಜನೆಗೆ ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಭಾರತಕ್ಕೆ ನಮೀಬಿಯಾದಿಂದ ಚಿರತೆಗಳನ್ನು ಕರೆತರಲು ಸಾಧ್ಯವಾಯಿತು ಎಂದು ಕಾಂಗ್ರೆಸ್ ಹೇಳಿದೆ.
ಇದೀಗ ಕಾಂಗ್ರೆಸ್​ನ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿ ಪ್ರಧಾನಿ ಒಬ್ಬ ಸುಳ್ಳುಗಾರ ಎಂದು ಟೀಕಿಸಿದ್ದಾರೆ. 2009ರಲ್ಲಿ ಚೀತಾಗಳನ್ನು ಭಾರತಕ್ಕೆ ಮತ್ತೆ ಪರಿಚಯಿಸಲು ಪ್ರಯತ್ನ ಪಟ್ಟ ಬಗ್ಗೆ ಬರೆದ ಕಾಗದ ಪತ್ರವನ್ನು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ನಾನು ನಿನ್ನೆ ಭಾರತ್ ಜೊಡೋ ಯಾತ್ರೆಯಲ್ಲಿದ್ದೆ. ಹೀಗಾಗಿ ಈ ಪತ್ರದತ್ತ ಕೈಯ್ಯಾಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)
This was the letter that launched Project Cheetah in 2009. Our PM is a pathological liar. I couldn’t lay my hands on this letter yesterday because of my preoccupation with the#BharatJodoYatrapic.twitter.com/3AQ18a4bSh— Jairam Ramesh (@Jairam_Ramesh)September 18, 2022
This was the letter that launched Project Cheetah in 2009. Our PM is a pathological liar. I couldn’t lay my hands on this letter yesterday because of my preoccupation with the#BharatJodoYatrapic.twitter.com/3AQ18a4bSh
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 19 =
Remember me
