ನವದೆಹಲಿ:ಪ್ರಧಾನಿ ಮೋದಿ ಸಂಪುಟದಲ್ಲಿ ನೂತನ ಎಲೆಕ್ಟ್ರಾನಿಕ್ಸ್‌ ಮತ್ತು ಐಟಿ ಸಚಿವರಾಗಿ ಅಶ್ವಿನಿ ವೈಷ್ಣವ್​​ ಅಧಿಕಾರ ಸ್ವೀಕರಿಸುತ್ತಿದ್ದಂತೆ ಸಾಮಾಜಿಕ ಜಾಲತಾಣ ದೈತ್ಯ, ಟ್ವಿಟರ್​ಗೆ​ ಖಡಕ್​ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಗುರುವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು “ಈ ನೆಲದ ಕಾನೂನು ಸರ್ವೋಚ್ಚ” ಎನ್ನುವ ಮೂಲಕ ಕೇಂದ್ರ ಹೊಸ ಐಟಿ ನಿಯಮಗಳನ್ನು ಅನುಸರಿಸುವಂತೆ ಒತ್ತಾಯಿಸಿದ್ದಾರೆ.
ಮೂರನೇ ವ್ಯಕ್ತಿಯ ವಿಷಯಗಳಿಗೆ ಸಾಮಾಜಿಕ ಜಾಲತಾಣ ವೆಬ್​ಸೈಟ್​ಗಳನ್ನು (50 ಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ) ಹೊಣೆಗಾರರನ್ನಾಗಿ ಮಾಡುವ ಹೊಸ ಐಟಿ ನಿಯಮಗಳನ್ನು ಪಾಲಿಸುವ ಸಂಬಂಧ ಟ್ವಿಟರ್​ ಮತ್ತು ಸರ್ಕಾರದ ನಡುವೆ ಹಗ್ಗಜಗ್ಗಾಟ ನಡೆಯುತ್ತಿದೆ. ಇದರ ನಡುವೆಯೇ ನೂತನ ಐಟಿ ಸಚಿವರು ಎಚ್ಚರಿಕೆಯನ್ನು ನೀಡಿದ್ದಾರೆ.
ಇಂದು ಬೆಳಿಗ್ಗೆ ದೆಹಲಿ ಹೈಕೋರ್ಟ್​ಗೆ ಮಾಹಿತಿ ನೀಡಿರುವ ಟ್ವಿಟರ್​, ರೆಸಿಡೆಂಟ್​ ಗ್ರೀವಿಯನ್ಸ್ ಆಫೀಸರ್ ನೇಮಕ ಮಾಡಿಕೊಳ್ಳಲು 8 ವಾರಗಳ ಸಮಯ ಕೇಳಿದೆ. ಹೊಸ ನಿಯಮದ ಪ್ರಕಾರ ಭಾರತೀಯರನ್ನೇ ಗ್ರೀವಿಯನ್ಸ್ ಆಫೀಸರ್ ಆಗಿ ನೇಮಕ ಮಾಡಬೇಕು.
ನಿಯಮಗಳನ್ನು ಪಾಲಿಸಲು ವಿಫಲವಾಗಿದ್ದಕ್ಕೆ ನ್ಯಾಯಾಲಯವು ಟ್ವಿಟರ್‌ಗೆ ಎಚ್ಚರಿಕೆ ನೀಡಿದ ಎರಡು ದಿನಗಳ ನಂತರ ಟ್ವಿಟರ್​ 8 ವಾರಗಳ ಕಾಲಾವಕಾಶವನ್ನು ಕೇಳಿದೆ. ಭಾರತ ಮೂಲದ ಕುಂದುಕೊರತೆ ಅಧಿಕಾರಿಯನ್ನು ನೇಮಿಸಲು ಸರ್ಕಾರ ನಿಗದಿಪಡಿಸಿದ ಗಡುವನ್ನು ಕಂಪನಿ ಈಗಾಗಲೇ ಮೀರಿದೆ.(ಏಜೆನ್ಸೀಸ್​)
ಹತ್ತು ದಿನಗಳ ಒಳಗೆ ಏನಂತ ಹೇಳಿ; ಟ್ವಿಟರ್​ಗೆ ರಾಷ್ಟ್ರೀಯ ಮಹಿಳಾ ಆಯೋಗದ ತಾಕೀತು

ಹಸಿವು ಮರೆಯಲು ಯೂಟ್ಯೂಬ್​ ನೋಡ್ತಿದ್ದ ದಿನಗೂಲಿ ಕಾರ್ಮಿಕನಿಂದು ಅದೇ ಯೂಟ್ಯೂಬ್​ನಿಂದ ಲಕ್ಷಾಧಿಪತಿ!

ಅಧ್ಯಯನದಿಂದ ಸಾಬೀತಾಯ್ತು ಗಂಗೆಯ ಪಾವಿತ್ರ್ಯತೆ: ಹೆಣಗಳ ರಾಶಿಯ ನಡುವೆಯೂ ಕರೊನಾ ಕುರುಹಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eleven =
Remember me
