ನವದೆಹಲಿ:ವಿಚಾರ ಒಂದಕ್ಕೆ ವಕೀಲರ ಗುಂಪುಗಳ ನಡುವೆ ಜಗಳ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಗುಂಡಿನ ದಾಳಿ ನಡೆಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ತೀಸ್​ ಹಜಾರಿ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ವಕೀಲರ ಎರಡು ಗುಂಪುಗಳ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದ್ದು, ಈ ವೇಳೆ ಇಬ್ಬರು ವಕೀಲರು ಪರಸ್ಪರ ಗುಂಡಿನ ದಾಳಿ ಮೂಲಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಜಂಟಿ ಪೊಲೀಸ್​ ಆಯುಕ್ತ ಪರಮಾದಿತ್ಯ ಎರಡು ವಕೀಲರ ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ವೇಳೆ ಗುಂಡಿನ ದಾಳಿಯಾಗಿದೆ. ಪ್ರಕರಣ ಸಂಬಂಧ ಗನ್​ಅನ್ನು ವಶಕ್ಕೆ ಪಡೆಯಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ತನಿಖೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
VIDEO | Firing in the premises of Delhi's Tis Hazari Court, following an argument between lawyers. More details are awaited.(Source: Third Party)(Note: Audio muted due to abusive language.)pic.twitter.com/DolaG9bQbv
ಇದನ್ನೂ ಓದಿ:PUBGಯಿಂದ ಶುರುವಾದ ಲವ್​ ಸ್ಟೋರಿ; ಪ್ರಿಯಕರನೊಂದಿಗೆ ವಾಸಿಸಲು ತನ್ನ ಜಮೀನನ್ನು ಮಾರಿದ ಪಾಕಿಸ್ತಾನದ ಮಹಿಳೆ
ಈ ಕುರಿತು ಪ್ರತಿಕ್ರಿಯಿಸಿರುವ ಬಾರ್​ ಕೌನ್ಸಿಲ್​ ಚೇರ್​ಮನ್​ ಕೆ.ಕೆ. ಮನನ್​ ಈ ಕುರಿತು ವಿಸ್ತೃತ ತನಿಖೆ ನಡೆಸಿ ಆದಷ್ಟು ಬೇಗ ವರದಿ ನೀಡುವಂತೆ ಆದೇಶಿಸಲಾಗಿದೆ. ವಶಪಡಿಸಿಕೊಂಡಿರುವ ಬಂದೂಕಿಗೆ ಲೈಸೆನ್ಸ್​ ಇದೆಯಾ ಇಲ್ಲವಾ ಎಂಬುದುರ ಕುರಿತು ಸಹ ತಿಳಿದುಕೊಳ್ಳುವಂತೆ ಸೂಚಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ವಕೀಲರು ಅಲ್ಲದೇ ಯಾರು ಸಹ ಈ ರೀತಿ ಬಂದೂಕುಗಳನ್ನು ಬಳಸುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದು ಶಿಕ್ಷಾರ್ಹಾ ಅಪರಾಧ ಎಂದು ಬಾರ್​ ಕೌನ್ಸಿಲ್​ ಚೇರ್​ಮನ್​ ಕೆ.ಕೆ. ಮನನ್ ಹೇಳಿದ್ದಾರೆ.
VIDEO | "We have recovered five empty rounds. The firing took place between two factions of lawyers. Our FSL (Forensic Science Laboratory) team is at the spot, and a thorough investigation would be conducted," says Delhi Police Joint CP (Central Range) Parmaditya on firing at Tis…pic.twitter.com/IBLV4WnL3H
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + five =
Remember me
