ತಿರುವನಂತಪುರಂ:ಜುದಾಸ್​ನು ಯೇಸುಕ್ರಿಸ್ತನಿಗೆ ದ್ರೋಹ ಮಾಡಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಪಾಲಕ್ಕಾಡ್​ನಲ್ಲಿ ಮೆಟ್ರೋ ಮ್ಯಾನ್ ಇ ಶ್ರೀಧರನ್ ಪರವಾಗಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದಿಷ್ಟು ಬಂಗಾರದ ತುಣಕುಗಳಿಗಾಗಿ ವಿಜಯನ್ ಅವರು ಕೇರಳ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ವಿಜಯನ್ ಅವರ ಗೋಲ್ಡ್​ ಸ್ಮಗ್ಲಿಂಗ್​ ಕೇಸ್​ ಬಗ್ಗೆ ಆರೋಪಿಸಿದರು.
ಇದನ್ನೂ ಓದಿ:ಕರೊನಾ ಕಡಿಮೆಯಿದ್ದರೂ ನೇಪಾಳದ ಶಾಲಾ ಕಾಲೇಜಿಗೆ ರಜೆ! ದೆಹಲಿಯನ್ನು ಮೀರಿಸ್ತಾ ಕಾಠ್ಮಂಡು?
ಎಲ್​ಡಿಎಫ್ ಹಾಗೂ ಯುಡಿಎಫ್ ಹೆಸರಿಗಷ್ಟೇ ಬೇರೆ ಬೇರೆ. ಆದರೆ, ಅವೆರಡು ಗುಣಧರ್ಮಗಳಲ್ಲಿ ಒಂದೇ. ಇಲ್ಲಿವರೆಗೂ ಮ್ಯಾಚ್​ ಪಿಕ್ಸಿಂಗ್ ಆಟ ಆಡಿಕೊಂಡು ಕೇರಳದ ಜನತೆಗೆ ಮೋಸ ಮಾಡಿವೆ ಎಂದು ಮೋದಿ ಆರೋಪಿಸಿದರು. ಐದು ವರ್ಷ ಅವರು (ಎಲ್​ಡಿಎಫ್) ಲೂಟಿ ಹೊಡೆದರೆ, ಮತ್ತೆ ಐದು ವರ್ಷ ಇವರು (ಯುಡಿಎಫ್) ಲೂಟಿ ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದೇ ಮೊದಲ ಬಾರಿಗೆ ಕೇರಳ ಯುವಕರು ಎಲ್​ಡಿಎಫ್ ಹಾಗೂ ಯುಡಿಎಫ್​ ಮೇಲೆ ತೀವ್ರ ಭ್ರಮನಿರಸನಗೊಂಡಿದ್ದಾರೆ ಎಂದರು ಮೋದಿ.
ಬಿಜೆಪಿಯ ಕೇರಳ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಮೋದಿ ಅವರು, ಶ್ರೀಧರನ್ ಒಬ್ಬ ನಿಜವಾದ ಕೇರಳಿಗರಾಗಿದ್ದಾರೆ. ಅವರು ಮಾಡಿರುವ ಕೆಲಗಳನ್ನು ಇಡೀ ರಾಷ್ಟ್ರವೇ ಸ್ಮರಿಸುತ್ತದೆ ಎಂದು ಹೇಳಿದರು. (ಏಜೇನ್ಸಿಸ್).
ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಪಂಜಾಬಿ ಗಾಯಕ ದಿಲ್​ಜಾನ್ ಸಾವು

ಮತ್ತೆ ಇಳಿಯಿತು ಚಿನ್ನ, ಬೆಳ್ಳಿ ದರ! ಚಿನ್ನಾಭರಣ ಪ್ರಿಯರು ಫುಲ್​ ಖುಷ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
