ತೆಲಂಗಾಣ:ದೇಶದಲ್ಲಿನ ಪಂಚರಾಜ್ಯಗಳ ಚುನಾವಣೆಯಲ್ಲಿ ಈ ಸಲ ಜಾತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಭಾವ ಬೀರುವ ಲಕ್ಷಣಗಳು ಗೋಚರಿಸಿವೆ. ಹೀಗಾಗಿಯೇ ಜಾತಿಕೇಂದ್ರಿತ ಲೆಕ್ಕಚಾರಗಳು ದೊಡ್ಡಮಟ್ಟದಲ್ಲಿ ನಡೆಯತ್ತಿದ್ದು, ಇದೀಗ ಪ್ರಧಾನಿ ಮೋದಿ ಕೂಡ ಜಾತಿ ದಾಳ ಉರುಳಿಸಿದ್ದಾರೆ.
ದೇಶದಲ್ಲಿ ಜಾತಿಗಣತಿ ದೊಡ್ಡ ಸದ್ದು ಮಾಡುತ್ತಿದ್ದು, ಎಲ್ಲ ವಿಷಯದಲ್ಲಿ ಜಾತಿಯ ವಿಚಾರಗಳು ಅನುರಣಿಸುತ್ತಿವೆ. ಅದರಲ್ಲೂ ಈ ಸಲ ‘ಇತರ ಹಿಂದುಳಿದ ವರ್ಗ'(ಒಬಿಸಿ)ದವರನ್ನು ಸೆಳೆಯುವ ನಿಟ್ಟಿನಲ್ಲಿ ಕಾಂಗ್ರೆಸ್​-ಬಿಜೆಪಿ ಎರಡೂ ಗಮನ ಹರಿಸಿವೆ. ಇದೇ ಲೆಕ್ಕಾಚಾರದಲ್ಲಿ ಇಂದು ಪ್ರಧಾನಿ ಮೋದಿ ಕೂಡ ಮಾತನಾಡಿದ್ದಾರೆ.
ಹೈದರಾಬಾದ್​ನ ಎಲ್​.ಬಿ.ಸ್ಟೇಡಿಯಮ್​ಲ್ಲಿ ಇಂದು ನಡೆದ ‘ಒಬಿಸಿ ಆತ್ಮಗೌರವ ಸಭೆ’ ಎಂಬ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2013ರಲ್ಲಿ ದೇಶದ ಮೊದಲ ಒಬಿಸಿ ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಇಲ್ಲೇ ಬುನಾದಿ ಹಾಕಲಾಗಿತ್ತು ಎಂದು ಸ್ಮರಿಸಿಕೊಂಡರು.
ಇದನ್ನೂ ಓದಿ:12 ವರ್ಷಗಳಿಂದ ಇನ್ಶೂರೆನ್ಸ್ ಇಲ್ಲದ ವಾಹನದಲ್ಲಿ ಪೊಲೀಸರ ಡ್ಯೂಟಿ; ಸ್ಥಳೀಯ ವ್ಯಕ್ತಿ ಅಧಿಕಾರಿಯನ್ನೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡ!
ಈ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ಹಾಕಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದರೆ ಹಿಂದುಳಿದ ವರ್ಗದ ವ್ಯಕ್ತಿಯನ್ನೇ ಮುಖ್ಯಮಂತ್ರಿ ಮಾಡಲಾಗುವುದು. ಒಬಿಸಿ ವರ್ಗದವರನ್ನು ರಾಜಕೀಯವಾಗಿ ಸಬಲಗೊಳಿಸುವುದೇನಿದ್ದರೂ ಬಿಜೆಪಿ ಮಾತ್ರ ಎಂದೂ ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ:ಯುವಕರೇಕೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಚ್ಚರಿಯೇ?: 70 ಗಂಟೆ ಕೆಲಸ.. ಮೂರ್ತಿ ವರ್ಸಸ್ ಮೂರ್ತಿ…
ಪಂಚರಾಜ್ಯಗಳ ಚುನಾವಣೆ ಪೈಕಿ ಇಂದು ಮಿಜೋರಾಂ ಮತ್ತು ಛತ್ತೀಸ್​ಗಢದಲ್ಲಿ ಮತದಾನ ನಡೆಯುತ್ತಿದೆ. ಇಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ, ಛತ್ತೀಸ್​ಗಢದ 20 ಸೀಟುಗಳಿಗೆ ಮೊದಲ ಹಂತದ ಮತದಾನ ಜರುಗಲಿದೆ. ಛತ್ತೀಸ್​ಗಢದ ಉಳಿದ 70 ಸ್ಥಾನಗಳಿಗೆ ನ.17ರಂದು ಚುನಾವಣೆ ನಡೆಯಲಿದೆ.
ಅದೇ ದಿನ ಮಧ್ಯಪ್ರದೇಶದ ಎಲ್ಲ 230 ಸ್ಥಾನಗಳಿಗೆ ಮತದಾನ ಆಗಲಿದೆ. 200 ಕ್ಷೇತ್ರಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ನ. 23 ಮತ್ತು 119 ಕ್ಷೇತ್ರಗಳುಳ್ಳ ತೆಲಂಗಾಣದಲ್ಲಿ ನ. 30ಕ್ಕೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಇಂದು ಹೈದರಾಬಾದ್​ನಲ್ಲಿ ಜಾತಿ ದಾಳ ಉರುಳಿಸಿದ್ದಾರೆ.
ನಿಮ್ಮಲ್ಲಿ ಹಳೇ ಚಪ್ಲಿ ಇದ್ರೆ ಸಾಕು, ನೀವು ಈ ‘ನಡಿಗೆ’ಯಲ್ಲಿ ಪಾಲ್ಗೊಳ್ಳಬಹುದು: ಏನಿದು ಅಭಿಯಾನ?

10 ಸಾವಿರ ಮಂದಿಗೆ ಉಚಿತವಾಗಿ ಸಿಗಲಿದೆ ಟೆಲಿಗ್ರಾಂ ಪ್ರೀಮಿಯಂ ಸಬ್​ಸ್ಕ್ರಿಪ್ಷನ್​: ನೀವು ಮಾಡಬೇಕಾದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 16 =
Remember me
