ಹಾಂಗ್​ಕಾಂಗ್​​:ಕೊಲೆ ಮಾಡಿ ಫ್ರಿಡ್ಜ್​ನಲ್ಲಿ ಶವ ಇಡುವ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದ್ದವು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ರೂಪದರ್ಶಿಯೊಬ್ಬಳನ್ನು ಕೊಲೆ ಮಾಡಿ ಆಕೆಯ ಕಾಲನ್ನು ಫ್ರಿಡ್ಜ್​ನಲ್ಲಿ ಇಡಲಾಗಿದೆ. ಮತ್ತೊಂದೆಡೆ ಆಕೆಯ ರುಂಡಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇಂಥದ್ದೊಂದು ಪ್ರಕರಣ ಹಾಂಗ್​ಕಾಂಗ್​ನಲ್ಲಿ ನಡೆದಿದೆ. ಅಲ್ಲಿನ 28 ವರ್ಷಗಳ ರೂಪದರ್ಶಿ ಆ್ಯಬಿ ಚೊಯ್​ ಕೊಲೆಯಾದವಳು. ನಗರದ ಹೊರವಲಯದ ಟಾಯ್​ಪೊ ಜಿಲ್ಲೆಯ ಮನೆಯೊಂದರ ಫ್ರಿಡ್ಜ್​ನಲ್ಲಿ ಆಕೆಯ ಕಾಲು ಹಾಗೂ ದೇಹವನ್ನು ತುಂಡರಿಸಲು ಬಳಸಿದ್ದ ಆಯುಧಗಳು ಪತ್ತೆಯಾಗಿವೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಾಂಗ್​ಕಾಂಗ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಪತಿ ಹೃದಯಾಘಾತಕ್ಕೆ ಬಲಿ; ಒಂದೇ ಉರುಳಿಗೆ ಮಗನೊಂದಿಗೆ ಕೊರಳೊಡ್ಡಿ ಪ್ರಾಣ ಬಿಟ್ಟ ಪತ್ನಿ
ಶುಕ್ರವಾರ ಈಕೆಯ ಕಾಲಿನ ಭಾಗ ಸಿಕ್ಕಿದ್ದು, ರುಂಡ-ಮುಂಡ ಹಾಗೂ ಕೈಗಳ ಭಾಗಗಳು ಸಿಗಬೇಕಿವೆ. ಕಾಲು ಪತ್ತೆಯಾದ ಜಾಗದಲ್ಲಿ ಮಾಂಸ ಕತ್ತರಿಸುವ ಆಯುಧ, ಎಲೆಕ್ಟ್ರಿಕ್ ಗರಗಸಗಳು ಕೂಡ ಸಿಕ್ಕಿವೆ.
ಇದನ್ನೂ ಓದಿ:ಹುಚ್ಚುನಾಯಿ ಕಡಿತಕ್ಕೆ 4 ವರ್ಷದ ಮಗು ಬಲಿ; 2 ತಿಂಗಳ ಹಿಂದೆಯೂ ನಾಯಿ ಕಡಿತದಿಂದ ಮಕ್ಕಳಿಬ್ಬರು ಸಾವಿಗೀಡಾಗಿದ್ದರು!
ಸೋಷಿಯಲ್ ಮೀಡಿಯಾ ಇನ್​ಫ್ಲುಯೆನ್ಸರ್ ಆಗಿರುವ ಚೊಯ್​ ಹತ್ಯೆ ಸ್ಥಳೀಯವಾಗಿ ಸಂಚಲನ ಸೃಷ್ಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮಂಗಳವಾರದಿಂದ ನಾಪತ್ತೆಯಾಗಿದ್ದ ರೂಪದರ್ಶಿಯ ಕಾಲಿನ ಭಾಗ ಶುಕ್ರವಾರ ಸಿಗುವ ಮೂಲಕ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು. ಕೊಲೆಯ ಹಿಂದೆ ಆಕೆಯ ಮಾಜಿ ಪತಿ ಮತ್ತಿತರರ ಕೈವಾಡ ಇದೆ ಎನ್ನಲಾಗಿದ್ದು, ಆ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.
ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!
ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 20 =
Remember me
